
ಕಾಟೇರ ಸಿನಿಮಾ ಇದೀಗ 50 ದಿನ ಪೂರೈಸೋಕೆ ಬಂದಿದೆ. ಇದರ ಮಧ್ಯೆ ಓಟಿಟಿ 'ಜೀ5'ಗೂ ಚಿತ್ರ ಎಂಟ್ರಿ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಅಭಿಮಾನಿಗಳು ಕಾಟೇರ ಓಟಿಟಿ ರಿಲೀಸ್ ಅನ್ನ ಕೂಡ ಸಂಭ್ರಮಿಸಿದ್ದಾರೆ. ಹುಬ್ಬಳ್ಳಿ, ಮೈಸೂರು, ದಾವಣಗೆರೆ, ಮಂಡ್ಯ, ಮೈಸೂರು ಬೆಂಗಳೂರಿನಲ್ಲಿ ಕಾಟೇರ ಬ್ಯಾನರ್ ಹಿಡಿದು ದಾಸನ ಸಿನಿಮಾವನ್ನ 'ವೆಲ್ಕಮ್' ಮಾಡಿದ್ದಾರೆ. ಬೃಹತ್ ಕಟೌಟ್ ಮುಂದೆ ಕಾಟೇರ ಪೋಸ್ಟರ್ ಹಿಡಿದು ಜೈಕಾರ ಹಾಕಿದ್ದಾರೆ.
1970ರ ದಶಕದಲ್ಲಿ ನಡೆಯುವ ಸಿನಿಮಾ ಕಾಟೇರ. ಜಾತಿ ಕಾರಣದಿಂದ ಅವಮಾನಕ್ಕೆ ಒಳಗಾಗುವ ಕಾಟೇರ ಭೂಸುಧಾರಣಾ ಕಾಯಿದೆಯ ಅನುಷ್ಠಾನದೊಂದಿಗೆ ತನ್ನ ಹಳ್ಳಿಯ ರೈತರಿಗೆ ಸಹಾಯ ಮಾಡಲು ಪಡುವ ಕಷ್ಟವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಹಳ್ಳಿಗಾಗಿ ತನ್ನ ಜೀವನವನ್ನೇ ಮುಡಿಪಿಟ್ಟ ಒಬ್ಬ ವ್ಯಕ್ತಿಯ ಕಥೆಯನ್ನು ಅಚ್ಚುಕಟ್ಟಾಗಿ ಜನರ ಮುಂದಿಡಲಾಗಿದೆ. ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ನಟ ದರ್ಶನ್ (Challenging Star Darshan) ಅಭಿಮಾನಿಗಳು ಈ ಚಿತ್ರವನ್ನು ತುಂಬಾ ಮೆಚ್ಚಿಕೊಂಡಿದ್ದಾರೆ.
ಅನ್ನ ಕೊಟ್ಟ ಊರಿಗೆ 'ದೊಡ್ಡ ಗಿಫ್ಟ್' ಕೊಡಲು ಪ್ಲಾನ್; ದೊಡ್ಡಣ್ಣನ ಹೃದಯ ಅದೆಷ್ಟು ದೊಡ್ಡದು ..!
ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ ಮೂರನೇ ಸಿನಿಮಾ ಕಾಟೇರ. 2021 ರಲ್ಲಿ ಬಂದ 'ರಾಬರ್ಟ್' ಸಿನಿಮಾ ಬಳಿಕ ಮತ್ತೆ ಇಬ್ಬರು ಕೈ ಜೋಡಿಸಿದ್ದರು. ಕಾಟೇರ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕನಸಿನ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದಲ್ಲಿ ನಟಿ ಶೃತಿ, ಪದ್ಮಾವಸಂತಿ, ಜಗಪತಿ ಬಾಬು, ಕುಮಾರ್ ಗೋವಿಂದ್, ವಿನೋದ್ ಕುಮಾರ್ ಆಳ್ವಾ ಸೇರಿ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
'ಶಾಖಾಹಾರಿ'ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್ ; ಸದ್ಯದಲ್ಲೇ 'ಮಲೆನಾಡ ಥ್ರಿಲ್ಲರ್' ದರ್ಬಾರ್..!
ರಾಕ್‌ಲೈನ್ ವೆಂಕಟೇಶ್ ಅವರು ತಮ್ಮ ನಿರ್ಮಾಣದ ಬ್ಯಾನರ್ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೀಗ ಜೀ 5 ಒಟಿಟಿಯಲ್ಲೂ ಸ್ಟ್ರೀಮಿಂಗ್ ಆಗುತ್ತಿರುವ ಕಾಟೇರ ಚಿತ್ರಕ್ಕೆ ಭರಪೂರ ಮೆಚ್ಚುಗೆ ಸಿಗುತ್ತಿದೆ. ಥಿಯೇಟರ್‌ನಲ್ಲಿ ಭಾರೀ ಮೆಚ್ಚುಗೆ ಪಡೆದಿರುವ ದರ್ಶನ್ ಚಿತ್ರ ಕಾಟೇರ ಈಗ ಓಟಿಟಿಯಲ್ಲೂ ಹೊಸ ದಾಖಲೆ ನಿರ್ಮಿಸಿದರೆ ಆಶ್ಚರ್ಯವೇನೂ ಇಲ್ಲ.
ವಿಷ್ಣುವರ್ಧನ್-ಭಾರತಿ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು ಯಾಕೆ; ಎರಡೂ ಹೆಣ್ಣು ಮಕ್ಕಳೇ ಯಾಕೆ..!?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.