ಸಾಯಿ ಪಲ್ಲವಿ ಅವರು ಮಲಯಾಳಂ ಚಿತ್ರ 'ಪ್ರೇಮಂ' (Premam) ಮೂಲಕ ಸಿನಿಮಾರಂಗಕ್ಕೆ ಬಂದವರು. ಮೊದಲ ಚಿತ್ರವೇ ಸೂಪರ್ ಹಿಟ್ ಆಗುವ ಮೂಲಕ ಅವರಿಗೆ ಮಲಯಾಳಂ ಮಾತ್ರವಲ್ಲ, ಪರಭಾಷೆಯ ಚಿತ್ರರಂಗಗಳ ಬಾಗಿಲುಗಳೂ ತೆರೆದುಕೊಂಡವು.
ದಕ್ಷಿಣ ಭಾರತದ ಬಹುಭಾಷಾ ನಟಿ ಸಾಯಿ ಪಲ್ಲವಿ (Sai Pallavi) ಅವರು 'ತಾವು ಸ್ಪೆಷಲ್ ಮಗು' ಎಂದಿದ್ದಾರೆ. ಅಯ್ಯೋ, ಇದೇನಿದು ಅವರಿಗೆ ಅವರೇ ಹಾಗೆ ಹೇಳಿಕೊಂಡರಾ? ಅದ್ಯಾಕೆ ಹಾಗೆ ಹೇಳಿದ್ದು, ಏನಾಗಿದೆ ಅವರಿಗೆ? ಅತಿಯಾದ ಆತ್ಮವಿಶ್ವಾಸವೇ ಅಥವಾ ಅಹಂಕಾರವೇ ಎಂದು ಯೋಚಿಸಬೇಡಿ. ಅವರು ಹೇಳಿದ್ದು 'ನಾನೊಬ್ಬಳು ಸ್ಪೆಷಲ್ ಚೈಲ್ಡ್' ಎಂದು ನನ್ನಮ್ಮ ಹೇಳುತ್ತಿದ್ದರು ಎಂದಿದ್ದಾರೆ. ಅವರಮ್ಮ ಅವರು ಹಾಗೆ ಭಾವಿಸುವಂತೆ ಬೆಳೆಸಿದ್ದಾರೆ ಎಂದಿದ್ದಾರೆ ನಟಿ ಸಾಯಿ ಪಲ್ಲವಿ.
ಸಾಯಿ ಪಲ್ಲವಿ ಅವರು ಮಲಯಾಳಂ ಚಿತ್ರ 'ಪ್ರೇಮಂ' (Premam) ಮೂಲಕ ಸಿನಿಮಾರಂಗಕ್ಕೆ ಬಂದವರು. ಮೊದಲ ಚಿತ್ರವೇ ಸೂಪರ್ ಹಿಟ್ ಆಗುವ ಮೂಲಕ ಅವರಿಗೆ ಮಲಯಾಳಂ ಮಾತ್ರವಲ್ಲ, ಪರಭಾಷೆಯ ಚಿತ್ರರಂಗಗಳ ಬಾಗಿಲುಗಳೂ ತೆರೆದುಕೊಂಡವು. ಮಲಯಾಳಂ ಸೇರಿದಂತೆ ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಇತ್ತೀಚೆಗೆ ಅವರು ತುಂಬಾ ಚೂಸಿಯಾಗಿದ್ದು, ಮುಂದಿನ ಪ್ರಾಜೆಕ್ಟ್ ಒಪ್ಪಿಕೊಳ್ಳಲು ಬಹಳಷ್ಟು ಕಥೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.
ಪುನೀತ್-ಶಿವಣ್ಣ ಜತೆಗಿನ 'ಲಾಸ್ಟ್ ಈವೆಂಟ್' ಪ್ರಶ್ನೆಗೆ ರಾಕಿಂಗ್ ಸ್ಟಾರ್ ಯಶ್ ಎಂಥಾ ಉತ್ತರ ಕೊಟ್ರು ನೋಡಿ!
ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ಸಾಯಿ ಪಲ್ಲವಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ 'ನಾನು ಚಿಕ್ಕವಳಿದ್ದಾಗ ನನ್ನ ಅಮ್ಮ -ನಾನು ದೇವರ ಮಗು- ಎಂದು ಯಾವತ್ತೂ ಹೇಳುತ್ತಿದ್ದರು. ಅದೇ ಭಾವನೆ ನನ್ನಲ್ಲಿ ಯಾವತ್ತೂ ಉಳಿದುಕೊಂಡಿದೆ. ಈಗಲೂ ಕೂಡ ನಾನು ಅಮ್ಮ ಹೇಳಿದಂತೆ ನಾನೊಬ್ಬಳು ಸ್ಪೆಷಲ್ ಚೈಲ್ಡ್, ವಿಶೇಷ ವ್ಯಕ್ತಿ ಎಂದೇ ಅಂದುಕೊಳ್ಳುತ್ತೇನೆ. ಹಾಗೇ ಇರಬೇಕು ಎಂದೂ ಯೋಚಿಸಿ ಸಾಧ್ಯವಾದಷ್ಟೂ ಆ ರೀತಿಯಲ್ಲಿ ನಡೆದುಕೊಳ್ಳಲು ಪ್ರಯತನಿಸುತ್ತೇನೆ' ಎಂದಿದ್ದಾರೆ ನಟಿ ಸಾಯಿ ಪಲ್ಲವಿ.
ಜೀ5 ಒಟಿಟಿಯಲ್ಲಿ ದರ್ಶನ್ 'ಕಾಟೇರ' ಸಿನಿಮಾ ಕಲರವ; ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ!
ಸಂದರ್ಶನಗಳಲ್ಲಿ ನಟಿ ಸಾಯಿ ಪಲ್ಲವಿ ಅವರು ತಮಗನ್ನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಎದುರುಗಡೆ ಇರುವವರು ಅಥವಾ ಕೇಳುಗರು ತಮ್ಮ ಮಾತನ್ನು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎಂಬ ಬಗ್ಗೆ ಅವರು ಯೋಚಿಸುವುದಿಲ್ಲ ಅಥವಾ ತಲೆ ಕೆಡಸಿಕೊಳ್ಳುವುದಿಲ್ಲ ಎನ್ನಬಹುದು. ಕೆಲವೊಮ್ಮೆ ಅವರ ಮಾತುಗಳು ವಿವಾದಕ್ಕೆ (Controversy)ಕೂಡ ಈಡಾಗಿವೆ. ಹಿಂದೊಮ್ಮೆ 'ದಿ ಕಶ್ಮೀರ್ ಫೈಲ್ಸ್ ' ಸಿನಿಮಾಗೆ ಸಂಬಂಧಿಸಿ ಅವರು ಹೇಳಿದ್ದ ಮಾತೊಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು ಎಂಬುದು ಹಲವರಿಗೆ ನೆನಪಿರಬಹುದು.
ಅನ್ನ ಕೊಟ್ಟ ಊರಿಗೆ 'ದೊಡ್ಡ ಗಿಫ್ಟ್' ಕೊಡಲು ಪ್ಲಾನ್; ದೊಡ್ಡಣ್ಣನ ಹೃದಯ ಅದೆಷ್ಟು ದೊಡ್ಡದು ..!