ತಮ್ಮ ತಂದೆ ತಾಯಿ ಇದ್ದ ರೀತಿಯಲ್ಲಿ ನಾವು ಜೀವನ ನಡೆಸಿಕೊಂಡು ಬರ್ಬೇಕಿತ್ತು. ತಮ್ಮ ಆಲೊಚನೆಗಳನ್ನು ಹಂಚಿಕೊಂಡ ಪೂರ್ಣಿಮಾ ರಾಮ್‌ಕುಮಾರ್
ವರನಟ ಡಾ.ರಾಜ್‌ಕುಮಾರ್ ಮತ್ತು ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಮುದ್ದಿನ ಮಗಳು ಪೂರ್ಣಿಮಾ. ಈಗ ರಾಮ್‌ಕುಮಾರ್ ಮಕ್ಕಳಿಬ್ಬರು, ಧನ್ಯಾ ಮತ್ತು ಧಿರೇನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಧನ್ಯಾ ಚಿತ್ರದ ಪ್ರೀಮಿಯರ್ ಶೋನಲ್ಲಿ ಪುನೀತ್ ರಾಜ್‌ಕುಮಾರ್ ಭಾಗಿಯಾಗಿದ್ದರು. ಪೂರ್ಣಿಮಾ ಮತ್ತು ಅಪ್ಪು ಬೆಸ್ಟ್ ಫ್ರೆಂಡ್ಸ್ ರೀತಿ ಇದ್ದರು. ಅಪ್ಪು ಹೋದ ಮೇಲೆ ನಿಜಕ್ಕೂ ಬೇಸರದಲ್ಲಿ ಇದ್ದಾರೆ. ಅಲ್ಲದೆ ನಾವು ಹಣ ಹೆಸರು ಮಾಡುತ್ತಿದ್ದಾರೆ ಅಂದುಕೊಂಡು ಸುಮ್ಮನೆ ಇರಬಾರದು ಅವರ ಆರೋಗ್ಯ ವಿಚಾರಿಸಬೇಕು ಎಂದು ಅರ್ಥ ಮಾಡಿಸಿದ್ದಾರೆ.
'ಈಗ ಅನಿಸುತ್ತದೆ ಯಾವುದೆ ಮೇಲೆ ಎಷ್ಟು ಗಮನ ಇಟ್ಟುಕೊಳ್ಳಬೇಕು ಎಂದು ತಲೆಗೆ ಹೊಳೆಯಲಿಲ್ಲ. ಸೂಚನೆ ಅಂತ ಈಗ ಹೇಳಬಹುದು ಆದರೆ ಅಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈಗ ಅನಿಸುತ್ತದೆ ನಮ್ಮ ಮನೆ ಅಂದಾಗ ನಾವು ಅವರನ್ನು ಎಷ್ಟು ಜವಾಬ್ದಾರಿಯಿಂದ ನೋಡಿಕೊಳ್ಳುತ್ತೀವಿ ಅನಿಸುತ್ತದೆ. ನಿಜ ನಾವು ಸಂಸಾರವನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ತಮ್ಮ ತಂದೆ ತಾಯಿ ರೀತಿ ಇದ್ದಿದ್ರೆ ನಾವು ಇಂದು ಹೇಗಿರಬೇಕಿತ್ತು? ಎಲ್ಲೋ ಅದು ನಮ್ಮನ್ನು ಮರೆ ಮಾಚಿಬಿಟ್ಟಿದೆ. ಹೆಸರು ದುಡ್ಡು ಮೇಲೆ ವ್ಯಾಮೋಹ ಬಂದು ಬಿಡ್ತು ಆದರೆ ಮನುಷ್ಯ ಹೇಗಿದಾನೆ ಅನ್ನೊದು ನಾವು ನೋಡಲಿಲ್ಲ. ನಮ್ಮ ಅಪ್ಪು ಹೆಸರು ಮಾಡುತ್ತಿದ್ದಾನೆ ಅನ್ನೋ ಖುಷಿಯಲ್ಲಿ ಆ ಗಮನದಲ್ಲಿ ಇದ್ವಿ ಆದರೆ ಅವನು ಹೇಗಿದ್ದಾನೆ ಅಂತ ನೋಡಲಿಲ್ವಾ?' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಪೂರ್ಣಿಮಾ ರಾಮ್‌ಕುಮಾರ್ ಮಾತನಾಡಿದ್ದಾರೆ.
ಈ ನೋವನ್ನು ಒಂದು ವಾರದಿಂದ ಅನುಭವಿಸುತ್ತಿದ್ದರು, ಚಿಕಿತ್ಸೆ ಸರಿಯಾಗಿ ನಡೆದಿದ್ರೆ...: ಗುರು ಕಿರಣ್
'ನಮ್ಮ ಅಪ್ಪಾಜಿ ಅಮ್ಮ ಯಾಕೆ ಆ ರೀತಿ ಇರುತ್ತಿದ್ದರು ಅಂತ ಈಗ ಅನಿಸುತ್ತದೆ. ರಾತ್ರಿ ಹೋಟೆಲ್‌ಗೆ ಹೀಗುತ್ತಿದ್ದರೆ ಅಮ್ಮನಿಗೆ ಫೋನ್ ಮಾಡುತ್ತಿದ್ದರೆ ಆಗ ಅವ್ರು ಹೇಳುತ್ತಿದ್ದರು ಏನು ಇಷ್ಟು ಹೊತ್ತಿಗೆ ಲೇಟಾಗಿ ಹೋಗುವುದು ಬೇಗ ಬಂದು ಮಲ್ಕೋಬೇಕು. ಎಲ್ಲಾದಕ್ಕೂ ಸಮಯ ಇಟ್ಟಿಕೊಳ್ಳಬೇಕು ಎಂದು ಬೈಯುತ್ತಿದ್ದರು. ನಮಗೆ ವಯಸ್ಸು ಆಗಿಲ್ವಾ ನಾವು ಓಡಾಡಬೇಕು ಈಗಲೂ ಈ ರೀತಿ ಕೇಳುತ್ತಿದ್ಯಾ ಯಾಕೆ ಅಂತ ಹೇಳ್ತಿದೆ. ನಾವು ಹೆಂಗ್ ಇರ್ಬೇಕು ಹಂಗೆ ಇರ್ಬೇಕು ಒಂದು ಸಿಸ್ಟಮ್ ಫಾಲೋ ಮಾಡಬೇಕು ಎನ್ನುತ್ತಿದ್ದರು. ಅಪ್ಪಾಜಿ ಅಮ್ಮ ರೀತಿ ನಾವು ಲೈಫ್ ಅನುಸರಿಸಲಿಲ್ಲ ಬರೀ ಆಡಂಭರ ಲೈಫ್ ಅಲ್ಲ ಅಂತ ತಿಳಿದುಕೊಳ್ಳಬೇಕಿತ್ತು. ಇದು ನನಗೆ ಹೇಳಿಕೊಳ್ಳುತ್ತಿರುವುದು ಏಕೆಂದರೆ ಅವರ ಕೆಳಗೆ ಬೆಳೆದಿರುವುದು ನಾವು. ಒಂದೊಳ್ಳೆ ಜವಾಬ್ದಾರಿ ಇರುವ ಜೀವನ ನಡೆಸಬೇಕು' ಎಂದು ಪೂರ್ಣಿಮಾ ಹೇಳಿದ್ದಾರೆ.
ಹೆಂಗಸ್ರು ತಮ್ಮ ದೇಹದ ಈ ಭಾಗವನ್ನು ಪದೇ ಪದೇ ಮುಟ್ಟಿಕೊಳ್ತಿದ್ದರೆ ಗಂಡಸರ ಎದೆ ಡವಡವ ಅನ್ನೋದು ಗ್ಯಾರಂಟಿ!