ಈ ನೋವನ್ನು ಒಂದು ವಾರದಿಂದ ಅನುಭವಿಸುತ್ತಿದ್ದರು, ಚಿಕಿತ್ಸೆ ಸರಿಯಾಗಿ ನಡೆದಿದ್ರೆ...: ಗುರು ಕಿರಣ್

ಅಪ್ಪು ಅಗಲುವ ಹಿಂದೆ ದಿನ ನಡೆಯಿತ್ತು ಭರ್ಜರಿ ಸೆಲೆಬ್ರೇಷನ್. ಗುರು ಕಿರಣ್ ಫೋನ್‌ ಬಂದಾಗ ಹೇಗ್ ರಿಯಾಕ್ಟ್ ಮಾಡಿದ್ರು?

Singer gurukiran recalls last meet with puneeth rajkumar vcs

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರ ಸಮಾಜ ಸೇವೆ, ಸಿನಿಮಾ ಹಾಗೂ ಅಭಿಮಾನಿಗಳ ಮೂಲಕ ನಮ್ಮೊಟ್ಟಿಗೆ ಇದ್ದಾರೆ ಅನಿಸುತ್ತದೆ. ಅಪ್ಪು ಇನ್ನಿಲ್ಲ ಅನ್ನೋ ಸುದ್ದಿ ಮನೆಯವರಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಶಾಕಿಂಗ್ ವಿಚಾರವಾಗಿತ್ತು. ಆದರೆ ಹಿಂದಿನ ದಿನ ಗಾಯಕ ಗುರುಕಿರಣ್ ನಿವಾಸದಲ್ಲಿ ಅದ್ಧೂರಿಯಾಗಿ ನಡೆದ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಅಲ್ಲಿ ಆಗಮಿಸಿದ ಇತರ ಸ್ಟಾರ್ ನಟ-ನಟಿಯರೊಟ್ಟಿಗೆ ಸಖತ್ ಎಂಜಾಯ್ ಮಾಡಿ, ಹಾಡು ಹಾಡಿ ಖುಷಿ ಪಟ್ಟಿದ್ದರು. ಮಕ್ಕಳ ಜೊತೆ ಮಾತನಾಡಬೇಕು ಸಮಯ ಕಳೆಯಬೇಕು ಎಂದು ಅಪ್ಪ ಪಾರ್ಟಿಯಿಂದ ಬೇಗ ಹೊರಟು ಬಿಟ್ಟರು. ಆದರೆ ಮರು ದಿನ ಕೇಳಿ ಬಂದಿದ್ದು ಈ ನ್ಯೂಸ್. 

ಅಪ್ಪು ಜೊತೆಗೆ ಪಾರ್ಟಿ ಆಚರಿಸಿಕೊಂಡ ಕ್ಷಣ, ಕೊನೆಯ ದಿನ ಏನ್ ಆಯ್ತು ಎಂದು ಗಾಯಕ ಗುರುಕಿರಣ್ ಹಂಚಿಕೊಂಡಿದ್ದಾರೆ. ಅಂಬರೀಶ್‌ ಅಣ್ಣ ಇರಲಿಲ್ಲ ಅಂತ ಎರಡು ವರ್ಷ ಹುಟ್ಟುಹಬ್ಬ ಮಾಡಲಿಲ್ಲ ಹೀಗಾಗಿ ಅಂದು ಎಲ್ಲರೊಟ್ಟಿಗೆ ಆಚರಿಸಿಕೊಂಡಿದ್ದು. ಆ ದಿನ ತುಂಬಾನೇ ಚೆನ್ನಾಗಿತ್ತು ಗಂಧದ ಗುಡಿ ಸಣ್ಣ ಪುಟ್ಟ ವಿಡಿಯೋ ತೋರಿಸುತ್ತಿದ್ದರು. ಕಳೆದ ಒಂದು ವಾರದಿಂದ ಅವರಿಗೆ ಬೆನ್ನು ನೋವು ಇತ್ತು ಅದರ ಹೊರತು ಯಾವುದೇ ನೋವು ಬಗ್ಗೆ ಹೇಳಿಕೊಂಡಿರಲಿಲ್ಲ. ತುಂಬಾ ಪಾಸಿಟಿವ್ ಆಂಡ್ ಆಕ್ಟಿವ್ ಆಗಿದ್ದರು. ಕೆಲವರೊಟ್ಟಿಗೆ ಅವರೇ ಹೋಗಿ ಪರಿಚಯ ಮಾಡಿಕೊಂಡು ಮಾತನಾಡಿದರು. ರಾತ್ರಿ ಮಗಳ ಜೊತೆ ರೌಂಡ್ ಹೋಗುತ್ತಾರೆ ಹೀಗಾಗಿ ಕೇಕ್ ಕಟ್ ಮಾಡಿ ಹೊರಟು ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಗುರುಕಿರಣ್ ಮಾತನಾಡಿದ್ದಾರೆ. 

Latest Videos

ಹೆಂಗಸ್ರು ತಮ್ಮ ದೇಹದ ಈ ಭಾಗವನ್ನು ಪದೇ ಪದೇ ಮುಟ್ಟಿಕೊಳ್ತಿದ್ದರೆ ಗಂಡಸರ ಎದೆ ಡವಡವ ಅನ್ನೋದು ಗ್ಯಾರಂಟಿ!

'ನನಗೆ ಬೆಳಗ್ಗೆ ಫೋನ್ ಬಂತು ಅಪ್ಪು ಇಲ್ಲ ಅಂತ. ಏನೂ ಕ್ಲಾರಿಟಿ ಇಲ್ಲ ಅಂತ. ಈ ರೀತಿ ಗಾಸಿಪ್‌ಗಳು ಇದ್ದೇ ಇರುತ್ತದೆ. ಕಣ್ಣನಲ್ಲಿ ನೋಡಲು ತನಕ ನಂಬಲು ಸಾಧ್ಯವಿಲ್ಲ. ಸ್ನೇಹಿತರಿಗೆ ಕರೆ ಮಾಡಿದೆ ಪೊಲೀಸರು ಬಂದಿದ್ದಾರೆ ಅಂದ್ರು ಇನ್ನೂ ಸ್ವಲ್ಪ ಭಯ ಶುರುವಾಯ್ತು. ಹಿಂದಿನ ದಿನ ತುಂಬಾ ಚೆನ್ನಾಗಿದ್ದರು. ಈ ರೀತಿ ಯಾರಿಗೂ ಆಗಬಾರದು. ಪ್ರಥಮ ಚಿಕಿತ್ಸೆ ಸರಿಯಾಗಿ ನಡೆದಿದ್ದರೆ ಇದೆಲ್ಲಾ ಆಗುತ್ತಿರಲಿಲ್ಲ. ಅವರಿದಿದ್ದರೆ 50ನೇ ಹುಟ್ಟುಹಬ್ಬ ಆಚರಣೆ ನಡೆಯುತ್ತಿತ್ತು ಮತ್ತಷ್ಟು ಸಿನಿಮಾಗಳು ಬರುತ್ತಿತ್ತು' ಎಂದು ಗುರು ಕಿರಣ್ ಹೇಳಿದ್ದಾರೆ. 

ಅಬ್ಬಬ್ಬಾ! 'ಯಜಮಾನ' ಸೀರಿಯಲ್‌ ನಟಿ ಮಧುಶ್ರೀ ಭೈರಪ್ಪ ಸಂಭಾವನೆ ಕೇಳಿ ಎಲ್ಲರೂ ಶಾಕ್ ಶಾಕ್.....

vuukle one pixel image
click me!