ಕಿಚ್ಚ ಸುದೀಪ್ ಹಾಗೂ ನಟ ಪುನೀತ್ ಅವರಿಬ್ಬರೂ ಬಾಲ್ಯದಲ್ಲಿ ಸ್ನೇಹಿತರಾಗಿದ್ದವರು. ಅವರಿಬ್ಬರೂ ಚಿಕ್ಕ ಮಕ್ಕಳಾಗಿದ್ದ ಸಮಯದಲ್ಲಿ ಡಾ ರಾಜ್‌ಕುಮಾರ್ ಅವರು ಶಿವಮೊಗ್ಗಾ ಕಡೆ ಶೂಟಿಂಗ್ ಹೋಗಿದ್ದಾಗ ಸುದೀಪ್ ಶಿವಮೊಗ್ಗಾ ಮನೆಗೆ..
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಅವರ ಸಂದರ್ಶನವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಸುದೀಪ್ ಅವರು ಅಪ್ಪುಗೆ 'ಈಗ ಅವರೊಂದು ಸವಿನೆನಪು.. ಅವರೊಬ್ಬ ಗ್ರೇಟ್ ಪ್ಲೆಸರ್' ಎಂದಿದ್ದಾರೆ. ಆಗ ಸಂದರ್ಶಕಿ 'ನಿಮ್ಮ ಪ್ರತಿ ಟ್ರೇಲರ್ ರಿಲೀಸ್ ಆದಾಗ ಪುನೀತ್ ರಾಜ್‌ಕುಮಾರ್ (Puneeth Rajkumar) ಅವ್ರು ಕಾಲ್ ಮಾಡಿ ವಿಶ್ ಮಾಡ್ತಾ ಇದ್ರು ಅಲ್ವಾ?' ಎಂದಿದ್ದಾರೆ. ಅದಕ್ಕೆ ನಟ ಸುದೀಪ್ ಅವರು 'ನಾವು ಅಷ್ಟೊಂದು ಮಾತನಾಡಿದ್ದೇನೂ ಇಲ್ಲ. ಚಿಕ್ಕ ವಯಸ್ಸಲ್ಲಿ ಸ್ನೇಹಿತರಾಗಿದ್ವಿ, ಬರ್ತಾ ಬರ್ತಾ ಒಂದು ಗ್ಯಾಪ್ ಇತ್ತು.. ಆಮೇಲೆ ಮಾತಾಡ್ಕೊಂಡು ತುಂಬಾ ಚೆನ್ನಾಗಿ ಇದ್ವಿ..
ಕೆಲವೊಂಡು ಟೈಮಲ್ಲಿ ಏನೋ ಪ್ರಾಬ್ಲಂ ಆದಾಗ ಅವರು ಮಾತಾಡಿದ್ದು ಉಂಟು, ನಾನೂ ಮಾತಾಡಿದ್ದು ಉಂಟು.. ಅದಾದ್ಮೇಲೆ ಒಂದ್ ಟೈಂ ಆದ್ಮೇಲೆ ಪರಸ್ಪರ ಗೌರವ, ಹೊಗಳಿಕೆ ಶುರುವಾಗುತ್ತೆ.. ಯಾಕಂದ್ರೆ, ಅವ್ರವ್ರದ್ದು ಅಂತ ಸಾಧನೆ ಇರುತ್ತಲ್ಲ.. ಆ ರೀತಿನಲ್ಲಿ ಯೋಚಿಸಿದಾಗ ನಮ್ಮ ಕನ್ನಡ ಸಿನಿಮಾ ಉದ್ಯಮಕ್ಕೆ ದೊಡ್ದ ಲಾಸ್.. ಎಂದಿದ್ದಾರೆ ಕಿಚ್ಚ ಸುದೀಪ್. ಅಲ್ಲಿಗೆ ವೈರಲ್ ವಿಡಿಯೋ ಎಂಡ್ ಆಗಿದೆ ಅಷ್ಟೇ..
ರಸ-ವಿರಸ ಎರಡೂ ಇಲ್ಲದ ಬಾಳು ನೀರಸ ಅನ್ನಿಸ್ತಾ? ಮಗು ಮಾಡಿಕೊಳ್ಳುವ ಬಗ್ಗೆ ಕಿತ್ತಾಟ ಆಯ್ತಾ?
ಪುನೀತ್ ಬಗ್ಗೆ ನಟ ಸುದೀಪ್ ಅವರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅವರು ಬಹಳಷ್ಟು ಕಡೆಗಳಲ್ಲಿ ನಟ ಪುನೀತ್ ಬಗ್ಗೆ ಇಷ್ಟಪಟ್ಟು ಮಾತನ್ನಾಡಿದ್ದಾರೆ. ಪುನೀತ್ ನಿಧನರಾದಾಗ ನಟ ಕಿಚ್ಚ ಸುದೀಪ್ ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಸುದೀರ್ಘ ಪತ್ರವೊಂದನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಅದು ಬಹಳಷ್ಟು ಮೆಚ್ಚುಗೆ ಪಡೆದಿತ್ತು. ನಟ ಕಿಚ್ಚ ಸುದೀಪ್ ಹಾಗೂ ಪುನೀತ್ ಯಾವುದೇ ಸಿನಿಮಾದಲ್ಲಿ ಒಟ್ಟಿಗೇ ನಟಿಸಲಿಲ್ಲ. ಆದರೆ ಅವರಬ್ಬರ ಸಂಬಂಧ ಚೆನ್ನಾಗಿಯೇ ಇತ್ತು.
ಕಿಚ್ಚ ಸುದೀಪ್ ಹಾಗೂ ನಟ ಪುನೀತ್ ಅವರಿಬ್ಬರೂ ಬಾಲ್ಯದಲ್ಲಿ ಸ್ನೇಹಿತರಾಗಿದ್ದವರು. ಅವರಿಬ್ಬರೂ ಚಿಕ್ಕ ಮಕ್ಕಳಾಗಿದ್ದ ಸಮಯದಲ್ಲಿ ಡಾ ರಾಜ್‌ಕುಮಾರ್ ಅವರು ಶಿವಮೊಗ್ಗಾ ಕಡೆ ಶೂಟಿಂಗ್ ಹೋಗಿದ್ದಾಗ ಸುದೀಪ್ ಅವರ ಶಿವಮೊಗ್ಗಾ ಮನೆಗೆ ಭೇಟಿ ನೀಡುತ್ತಿದ್ದರಂತೆ. ಆಗ ಅಣ್ಣಾವ್ರ ಜೊತೆಯಲ್ಲೇ ಇರುತ್ತಿದ್ದ ಪುನೀತ್ ಅವರು ಅಲ್ಲಿರುತ್ತಿದ್ದ ಸುದೀಪ್ ಅವರೊಂದಿಗೆ ಬೆರೆತು ಆಟ ಆಡುತ್ತಿದ್ದರಂತೆ. ಬಾಲ್ಯದಲ್ಲಿ ಅವರಿಬ್ಬರೂ ಬೆಸ್ಟ್ ಫ್ರಂಡ್ಸ್ ಆಗಿದ್ದರು ಎಂಬುದನ್ನು ಇಬ್ಬರೂ ಹಲವಾರು ಕಡೆ ಹೇಳಿಕೊಂಡಿದ್ದಾರೆ.
ಚಂದನ್ ಶಟ್ಟಿ-ಸಂಜನಾ ಆನಂದ್ ಗಾಸಿಪ್: ಕ್ಲಾರಿಟಿ ಬಳಿಕವೂ ಬರುತ್ತಿದೆ ಕಾಮೆಂಟ್.. ಯಾಕೆ ಹೀಗೆ..!?