ಅಪ್ಪು ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ ಅವರು ಅಗಲಿ ಈಗಾಗಲೇ ಮೂರು ವರ್ಷಗಳು ಆಗುತ್ತಾ ಬಂತು. ಆದರೆ ದಿನಕಳೆದಂತೆ ಪುನೀತ್ ಅಭಿಮಾನಿಗಳ ಬಳಗ ಹೆಚ್ಚುತ್ತಲೇ ಇದೆ ಎನ್ನಬಹುದೇನೋ.. ಯಾರೋ ಒಬ್ಬರು 'ನಗುವಿನ ಒಡೆಯ, ಈ ಹಾಡನ್ನು ಕೇಳಿ ನಾನು ಮೂಕ ವಿಸ್ಮಿತಳಾದೆ' ಎಂದು ರೀಲ್ಸ್ ಪೋಸ್ಟ್ ಮಾಡಿದ್ದಾರೆ.
'ನಗುವಿನ ಒಡೆಯ, ಈ ಹಾಡನ್ನು ಕೇಳಿ ನಾನು ಮೂಕ ವಿಸ್ಮಿತಳಾದೆ' ಎಂದು ಬರೆದಿರುವ ರೀಲ್ಸ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದು ಯಾರ ಬಗ್ಗೆ ಬರೆದು ಹಾಡಿರುವ ಹಾಡು ಎಂಬುದನ್ನು ಮತ್ತೆ ಸಪರೇಟ್ ಆಗಿ ಹೇಳಬೇಕಾಗಿಲ್ಲ. ಕನ್ನಡದ ಹೆಮ್ಮೆಯ ಅಪ್ಪು ಅವರ ಬಗ್ಗೆ ಈ ಹಾಡು ಇದೆ. ಆದರೆ ಈ ಹಾಡನ್ನು ತೆಲುಗು ಭಾಷೆಯಲ್ಲಿ ಹಾಡಿದ್ದಾರೆ. ಅಪ್ಪು ತೆಲುಗು ಅಭಿಮಾನಿಗಳು ಇಬ್ಬರು ಈ ಹಾಡನ್ನು ಹಾಡಿರುವುದಂತೂ ಪಕ್ಕಾ.
ಅಪ್ಪು ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ ಅವರು ಅಗಲಿ ಈಗಾಗಲೇ ಮೂರು ವರ್ಷಗಳು ಆಗುತ್ತಾ ಬಂತು. ಆದರೆ ದಿನಕಳೆದಂತೆ ಪುನೀತ್ ಅಭಿಮಾನಿಗಳ ಬಳಗ ಹೆಚ್ಚುತ್ತಲೇ ಇದೆ ಎನ್ನಬಹುದೇನೋ. ಅಥವಾ, ಅಭಿಮಾನಿಗಳ ಅಭಿಮಾನ ಹೆಚ್ಚುತ್ತಲೇ ಇರುವುದಂತೂ ಸುಳ್ಳಲ್ಲ. ಕಾರಣ, ಅವರು ಇದ್ದಾಗ ಬದುಕಿದ ರೀತಿ ಎನ್ನಬಹುದು. ಈ ಕಾರಣಕ್ಕೇ, ಯಾರೋ ಒಬ್ಬರು 'ನಗುವಿನ ಒಡೆಯ, ಈ ಹಾಡನ್ನು ಕೇಳಿ ನಾನು ಮೂಕ ವಿಸ್ಮಿತಳಾದೆ' ಎಂದು ರೀಲ್ಸ್ ಪೋಸ್ಟ್ ಮಾಡಿದ್ದಾರೆ.
ಒಂದೆರಡು ತಲೆಮಾರಿಗೆ ಸೌಜನ್ಯ, ಸಂಸ್ಕಾರ ಕಲಿಸಿದ ಪುಣ್ಯಾತ್ಮ ಡಾ ರಾಜ್‌ಕುಮಾರ್; ಪೋಸ್ಟ್ ವೈರಲ್!
ಡಾ ರಾಜ್‌ಕುಮಾರ್ ಅವರನ್ನು ಕನ್ನಡಿಗರು ಪ್ರೀತಿಯಿಂದ 'ಅಣ್ಣಾವ್ರು' ಎಂದು ಕರೆಯುತ್ತಾರೆ. ಮೇರು ನಟ ಡಾ ರಾಜ್‌ಕುಮಾರ್ ಅವರು ಸರಳ, ಸಜ್ಜನ ಎನಿಸಿಕೊಂಡವರು. ಅವರು ಮಕ್ಕಳು, ಅವರ ಮನೆತನಕ್ಕೆ ಕರುನಾಡಿನಲ್ಲಿ ಒಂದು ಘನತೆ ಇದೆ. ಅದನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಡಾ ರಾಜ್ ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗು ಪುನೀತ್ ರಾಜ್‌ಕುಮಾರ್ ಪಾಲೂ ಸಾಕಷ್ಟಿದೆ. ಜೊತೆಗೆ, ಪಾರ್ವತಮ್ಮ ಕೂಡ ದೊಡ್ಮನೆ ಕುಟುಂಬದ ಆಧಾರ ಸ್ಥಂಭ ಎನ್ನುವುದು ಸತ್ಯ.
ಈ ತೆಲುಗು ಭಾಷೆಯ ಹಾಡು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಕನ್ನಡದ ಸ್ಟಾರ್ ನಟರೊಬ್ಬರ ಬಗ್ಗೆ, ಅದೂ ಕೂಡ ದಿವಂಗತ ಅಪ್ಪು ಬಗ್ಗೆ ಹಾಡಿರುವ ಹಾಡನ್ನು ಹಲವರು ಮೆಚ್ಚಿ ತಲೆದೂಗಿದ್ದಾರೆ. ಜೊತೆಗೆ ಬಗೆಬಗೆಯಲ್ಲಿ, ವಿಭಿನ್ನ ಕಾಮೆಂಟ್‌ಗಳು ಹರಿದಾಡುತ್ತಿವೆ. ಕಾಮೆಂಟ್‌ಗಳನ್ನು ನೋಡಿದರೂ ಕೂಡ ಬದುಕಿದರೆ ಹೀಗೂ ಬದುಕಬಹುದು ಎಂಬ ಭಾವ ಕೆಲವರಿಗೆ ಮೂಡಿದರೆ ಅಚ್ಚರಿಯೇನೂ ಇಲ್ಲ.
ನನ್ನರಸಿ ರಾಧೆ ಸೀರಿಯಲ್ ನಿರ್ದೇಶಕ ವಿನೋದ್ ದೋಂಡಾಲೆ ಆತ್ಮಹತ್ಯೆ ಹಿಂದಿನ ಕಾರಣ ಬಹಿರಂಗ!
ಇಲ್ಲಿವೆ ನೋಡಿ ಕೆಲವು ಕಾಮೆಂಟ್‌ಗಳ ಸ್ಯಾಂಪಲ್ಸ್:
'ನಿಮ್ಮ ತೆಲುಗು ಭಾಷೆಯಲ್ಲಿ ಅಪ್ಪು ಸರ್ ಹಾಡು ಕೇಳಿ ಮೈ ಒಂದು ಕ್ಷಣ ರೋಮಾಂಚನ ವಾಯಿತು ಅದ್ಬುತ ಭಾಷೆ.,,,,,,,, ನಿಮಗೆ ಕನ್ನಡದ ಅಭಿನಂದನೆಗಳು'
'ಕನ್ನಡದ ಅಪ್ಪು ಅವರ ಅಭಿಮಾನಿಗಳಿಗೆ ತೆಲುಗು ಬಾಷೆಯಲ್ಲಿ ಅಪ್ಪು ಬಗ್ಗೆ ಹಾಡು ಹಾಡಿ ಅಭಿಮಾನ ತೋರಿಸಿದ್ದಕ್ಕೆ ಅಭಿನಂದನೆಗಳು..'
ಹಾಗೇ, ಇನ್ನೊಬ್ಬರು 'ಕಲೆಗೆ ಯಾವ ಭಾಷೆಯೂ ಇಲ್ಲಾ ಕನ್ನಡಿಗರ ಪರವಾಗಿ ಕೋಟಿ ವಂದನೆಗಳು' ಎಂದು ಕಾಮೆಂಟ್ ಹಾಕಿದ್ದಾರೆ. ಒಟ್ಟಿನಲ್ಲಿ, ಕನ್ನಡದ ನಟರೊಬ್ಬರಿಗೆ ಭಾಷೆಯ ಗಡಿ ಮೀರಿ ಪ್ರೀತಿ-ಅಭಿಮಾನ ದೊರಕುತ್ತಿದೆ. ಕನ್ನಡಿಗರ ಹೆಮ್ಮೆಗೆ ಇದೂ ಒಂದು ಕಿರೀಟ್ ಸಿಕ್ಕಂತಾಗಿದೆ ಎನ್ನಬಹುದು.