5 ಕೋಟಿ ರೂ. ವೆಚ್ಚದ ಸೆಟ್‌ನಲ್ಲಿ ಸುದೀಪ್, ಜಾಕ್ವೆಲಿನ್ ಡಾನ್ಸ್!

By Suvarna News  |  First Published Jul 17, 2021, 5:19 PM IST

ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಚಿತ್ರದ ವಿಶೇಷ ಹಾಡೊಂದಕ್ಕೆ ಸುದೀಪ್ ಹಾಗೂ ಜಾಕ್ವೆಲಿನ್ ಫೆರ್ನಾಂಡಿಸ್ ಹೆಜ್ಜೆ ಹಾಕಿದ್ದಾರೆ.
 


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ವಿಕ್ರಾಂತ್ ರೋಣ ಚಿತ್ರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಟೀಸರ್, ಪೋಸ್ಟರ್ ಮತ್ತು ಟ್ರೈಲರ್ ಮೂಲಕ ಸಖತ್ ಸುದ್ದಿ ಮಾಡುತ್ತಿರುವ ಈ ಚಿತ್ರ ತಂಡಕ್ಕೆ ಬಾಲಿವುಡ್‌ನ ಶ್ರೀಲಂಕನ್ ಚೆಲುವೆ ಸೇರ್ಪಡೆಯಾಗಿದ್ದಾರೆ.

ಕಳೆದ ವಾರ ಬಾಲಿವುಡ್ ನಟಿ ಜಾಕ್ವೆಲಿನ್ ಬೆಂಗಳೂರಿಗೆ ಆಗಮಿಸಿದ್ದರು. ವಿಕ್ರಾಂತ್ ರೋಣ ಚಿತ್ರದ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಪ್ರ್ಯಾಕ್ಟಿಸ್ ಮಾಡುತ್ತಿದ್ದರು.  ಸುಮಾರು 4.5 ರಿಂದ 5 ಕೋಟಿ ರೂ. ವೆಚ್ಚದ ಅದ್ದೂರಿ ಸೆಟ್‌ನಲ್ಲಿ ಈ ಹಾಡು ಚಿತ್ರೀಕರಣಗೊಂಡಿದೆ ಎಂದು ನಿರ್ಮಾಪಕ ಜಾಕ್ ಮಂಜು ಹೇಳಿದ್ದಾರೆ.

ಸುದೀಪ್ 'ಫ್ಯಾಂಟಮ್' ಚಿತ್ರದ ಟೈಟಲ್‌ ವಿಕ್ರಾಂತ್ ರೋಣ ಆಗಿ ಬದಲಾಯಿಸಿದ್ದು ಯಾಕೆ?

Tap to resize

Latest Videos

undefined

ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಸಾರಥ್ಯದಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ. ಜಾಕ್ವೆಲಿನ್ ಹಾಡಿನಲ್ಲಿ ಮಾತ್ರವಲ್ಲ, ಚಿತ್ರದ ಪ್ರಮುಖ ದೃಶ್ಯಗಳಲ್ಲೂ ನಟಿಸುತ್ತಿದ್ದಾರೆ. ಜಾಕ್ವೆಲಿನ್ ಡ್ಯಾನ್ಸ್, ಕೆಲಸದ ಮೇಲಿನ ಶ್ರದ್ಧೆ, ಪ್ರತಿ ದೃಶ್ಯಕ್ಕೂ ಪೂರ್ವ ತಯಾರಿ ಮಾಡಿಕೊಂಡು ಬರುತ್ತಿದ್ದ ರೀತಿಗೆ ನಟ ಸುದೀಪ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಚಂದನವನಕ್ಕೆ ಸ್ವಾಗತ ! It was a pleasure working with you! Your 1st look & character name will be releasing soon & I’m sure the audience will love it. Let’s meet once again in the dubbing studio. Till then - “Swalpa Jopana” 😊 pic.twitter.com/tRn2mOOTDU

— Anup Bhandari (@anupsbhandari)
click me!