ಬುಕ್‌ಮೈಶೋ ಎಟಿಟಿಯಲ್ಲಿ ರಿವೈಂಡ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ!

Kannadaprabha News   | Asianet News
Published : Jul 17, 2021, 04:15 PM IST
ಬುಕ್‌ಮೈಶೋ ಎಟಿಟಿಯಲ್ಲಿ ರಿವೈಂಡ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ!

ಸಾರಾಂಶ

ಸಿನಿಮಾ ಬುಕ್ಕಿಂಗ್ ವೆಬ್‌ಸೈಟ್ ಬುಕ್ ಮೈ ಶೋ ಇದೀಗ ಆನ್‌ಲೈನ್ ಸಿನಿಮಾ ವೀಕ್ಷಣೆಗಾಗಿ ಎಟಿಟಿ ಪ್ಲಾಟ್‌ಫಾರ್ಮ್ ಒದಗಿಸಿದೆ. ಅದರಲ್ಲಿ ನಟಿ ಪ್ರಮೀಳಾ ಜೋಷಾಯ್ ತಮ್ಮನ ಮಗ ತೇಜ್ ನಟನೆಯ ‘ರಿವೈಂಡ್’ ಸಿನಿಮಾ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.  

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇಜ್, ‘ಬುಕ್‌ಮೈ ಶೋ ಎಟಿಟಿಯಲ್ಲಿ ತೆರೆ ಕಂಡ ಮೊದಲ ಕನ್ನಡ ಸಿನಿಮಾ ರಿವೈಂಡ್. ಇದರಲ್ಲಿ ಸಿನಿಮಾನೋಡಿದವರು ಕೊಟ್ಟ ಅತ್ಯುತ್ತಮ ರೇಟಿಂಗ್‌ನಿಂದಾಗಿ ಚಿತ್ರ ಐಎಂಡಿಬಿಯಲ್ಲಿ 9.5 ರೇಟಿಂಗ್‌ಪಡೆದುಕೊಂಡಿದೆ. ಈ ಸಿನಿಮಾ ಮಲಯಾಳಂ, ಹಿಂದಿಗೆ ಡಬ್ಬಿಂಗ್ ಆಗಿದ್ದು, ಮಲಯಾಳಂ ಡಬ್ಬಿಂಗ್ ರೈಟ್‌ಸ್ ಮಾರಾಟ ಆಗಿದೆ. ಸ್ಟಾರ್ ಸುವರ್ಣ ವಾಹಿನಿಗೆ ಸ್ಯಾಟಲೈಟ್ ರೈಟ್‌ಸ್ ಮಾರಾಟವಾಗಿದೆ. ಅರಬ್‌ರಾಷ್ಟ್ರದಿಂದ ಬೇಡಿಕೆ ಬಂದಿದ್ದು, ಸೌದಿಯಲ್ಲಿ ತೆರೆ ಕಾಣುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ’ ಎಂದರು.

ಸೈನ್ಸು, ಕಲ್ಪನೆ ಮತ್ತು ಕನಸುಗಳಿಗೆ ಕನ್ನ

ತೇಜ್ ಅವರು ರಾಮಾಚಾರಿ 2.1 ಎಂಬ ಸಿನಿಮಾವನ್ನೂಮಾಡುತ್ತಿದ್ದಾರೆ. ಆ ಚಿತ್ರವನ್ನು ಕನ್ನಡದ ಜೊತೆಗೆ ಸ್ಪಾನಿಶ್, ಫ್ರೆಂಚ್ ಸೇರಿ ಆರೇಳು ಭಾಷೆಗಳಲ್ಲಿ ಹೊರ ತರುತ್ತಿದ್ದಾರೆ. ನಟ ಧರ್ಮ, ನಾಯಕಿ ಚಂದನಾ, ನಟ ಧರ್ಮಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಮೈ ಶೋ ಎಟಿಟಿ ಸೇವೆ

ಬುಕ್ ಮೈ ಶೋನ ಹೊಸ ಎಟಿಟಿ ವೇದಿಕೆಲ್ಲಿ ಒಂದು ಸಿನಿಮಾಗೆ ಇಷ್ಟು ಅಂತ ರೇಟ್ ನಿಗದಿ ಆಗಿರುತ್ತೆ. ಎರಡು ದಿನಗಳಿಗೆ 49 ರು. ನೀಡಿ ರಿವೈಂಡ್ ಸಿನಿಮಾನೋಡಬಹುದು. ಈ ಸಿನಿಮಾವನ್ನು ಒಂದು ತಿಂಗಳವರೆಗೆ ಇಟ್ಟುಕೊಳ್ಳಬೇಕಿದ್ದರೆ 100 ರು.ಪಾವತಿಸಿದರೆ ಆಯ್ತು. ಎಲ್ಲ ಸಿನಿಮಾಗಳಿಗೂ ಇದೇ ಥರ ಭಿನ್ನವಾದ ಬೆಲೆ ಇರುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?