
ಸಿಂಗರ್, ನಟ ಹಾಗೂ ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ (Chandan Shetty) ಇತ್ತೀಚೆಗೆ ವಿಜಯಪುರ (ವಿಜಾಪುರ)ಕ್ಕೆ ಹೋಗಿದ್ದರು. ಬಿಡುಗಡೆಯಾಗಿರುವ ತಮ್ಮ 'ಕಾಟನ್ ಕ್ಯಾಂಡಿ' ಮ್ಯೂಸಿಕ್ ವಿಡಿಯೋ ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ, ಅಲ್ಲಿ ಹೋಗಿ ಚಂದನ್ ಸ್ಟೇಜ್ ಶೋ ಮಾಡಿದ್ದಾರೆ. ಅಲ್ಲಿ ಅಸಂಖ್ಯಾತ ಅಭಿಮಾನಿಗಳು ಅವರನ್ನು ಸುತ್ತುವರಿದಿದ್ದು ತುಂಬಾ ಪ್ರೀತಿ-ಅಭಿಮಾನ ಪ್ರದರ್ಶಿಸಿದ್ದಾರೆ. ಸ್ಟೇಜ್ ಶೋದಲ್ಲಿ ಕಾಟನ್ ಕ್ಯಾಂಡಿ ಆಲ್ಬಂ ಸಾಂಗ್‌ನಲ್ಲಿ ಅವರೊಂದಿಗೆ ಹೆಜ್ಜೆ ಹಾಕಿರುವ ನಟಿ ಸುಷ್ಮಿತಾ ಗೋಪಿನಾಥ್ ಸಹ ಹಾಜರಿದ್ದು, ಚಂದನ್ ಜೊತೆ 'ಥಕಧಿಮಿತ' ಮಾಡಿದ್ದಾರೆ.
ಸ್ಟೇಜ್ ಮೇಲೆ ಫುಲ್ ಎನರ್ಜಿಟಿಕ್ ಆಗಿ ಡಾನ್ಸ್ ಮಾಡಿರುವ ಚಂದನ್ ಶೆಟ್ಟಿಯವರು, ಈಗಾಗಲೇ ಭಾರೀ ವೈರಲ್ ಆಗಿರುವ ಕಾಟನ್ ಕ್ಯಾಂಡಿ ಮ್ಯೂಸಿಕ್ ವಿಡಿಯೋಗೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಜೊತೆಗೆ, ಕಾಟನ್ ಕ್ಯಾಂಡಿ ಇಡೀ ಟೀಮ್ ಅಲ್ಲಿ ಹಾಜರಿದ್ದು, ಚಂದನ್ ಅವರಿಗೆ ಸಾಥ್ ನೀಡಿ, ಅಲ್ಲಿದ್ದ ಅಭಿಮಾನಿಗಳ ಪುಳಕಕ್ಕೆ ಕಾರಣರಾಗಿದ್ದಾರೆ.ವಿಜಯಪುರದಲ್ಲಿ ಚಂದನ್ ಶೆಟ್ಟಿ ಅವರಿಗೆ ಅಭೂತಪೂರ್ವ ಸ್ವಾಗತ ದೊರಕಿದ್ದು ಮಾತ್ರವಲ್ಲ, ಹಲವರು ಮತ್ತೆ ಮತ್ತೆ ಅಲ್ಲಿಗೆ ಬರುವಂತೆ ಬೇಡಿಕೆ ಇಟ್ಟಿದ್ದಾರಂತೆ.
ಟ್ಯೂನ್ ಕದ್ದ ಆರೋಪಕ್ಕೆ ಚಂದನ್ ಶೆಟ್ಟಿ ಕಿಡಿ, ಮಾನನಷ್ಟ ಮೊಕದ್ದಮೆಗೆ ಮೊರೆ?
ಇನ್ನು, ವಿಜಯಪುರದ ಈವೆಂಟ್‌ನಲ್ಲಿ ಅಚ್ಚರಿ ಹುಟ್ಟಿಸುವ ಒಂದೆರಡು ಘಟನೆಗಳು ಸಹ ನಡೆದಿವೆ. ಸ್ಟೇಜ್ ಮೇಲಿದ್ದ ಚಂದನ್ ಶೆಟ್ಟಿಯವರನ್ನು ತಾವು ನೋಡಿ ಮಾತನಾಡಲೇಬೇಕು ಎಂದು ಅಜ್ಜಿಯೊಬ್ಬರು ಪಟ್ಟುಹಿಡಿದಿದ್ದಾರೆ. ಅದು ಚಂದನ್ ಗಮನಕ್ಕೆ ಬರುತ್ತಿದ್ದಂತೆ, ಅವರೇ ಸ್ಟೇಜ್‌ನಿಂದ ಕೆಳಗಿಳಿದು ಹೋಗಿ ಅಜ್ಜಿಯನ್ನು ಮಾತನಾಡಿಸಿದ್ದಾರೆ. ಖುಷಿಯಾದ ಅಜ್ಜಿ 'ಮತ್ತೆ ಮದ್ವೆಯಾಗ್ಬೇಕ್ ಕಣಪ್ಪ ನೀನು.. ಒಳ್ಳೇ ಹುಡುಗ ನೀನು, ಒಳ್ಳೇ ಹುಡುಗಿ ಹುಡುಕಿ ಮತ್ತೆ ಮದ್ವೆಯಾಗಿ ಬಿಟ್ಟೋದವ್ಳ ಮುಂದೆ ಚೆನ್ನಾಗಿ ಬದುಕ್ಬೇಕು ನೀನು.. ' ಎಂದಿದ್ದಾರೆ. ಆ ಮಾತು ಕೇಳಿ ಚಂದನ್ ಶೆಟ್ಟಿಯವರ ಮುಖ ನಾಚಿಕೆಯಿಂದ ಕೆಂಪಾಗಿದೆ. ಆದರೆ, ಎನೂ ಪ್ರತಿಕ್ರಿಯೆ ಕೊಟ್ಟಿಲ್ಲ!
ಇನ್ನೊಬ್ಬರು ಅಜ್ಜಿ ಚಂದನ್ ಶೆಟ್ಟಿಯವರ ಹಾಡನ್ನು ತಾವು ಕೇಳಲೇಬೇಕು ಎಂದು ಮನೆಯಲ್ಲಿ ಹಠ ಹಿಡಿದು ಅದನ್ನು ತಮ್ಮ ಮೊಬೈಲಿಗೆ ಹಾಕಿಸಿಕೊಂಡು ಕೇಳಿಸಿಕೊಂಡಿದ್ದಾರೆ. ಈ ಸಂಗತಿ ಚಂದನ್ ಶೆಟ್ಟಿಯವರಿಗೆ ಅಭಿಮಾನಿಯೊಬ್ಬರು ಸ್ವತಃ ವಿಜಯಪುರದಲ್ಲಿ ಹೇಳಿಕೊಂಡಿದ್ದಾರೆ. ಈ ಎಲ್ಲ ಸಂಗತಿ ತಿಳಿದು ಚಂದನ್ ಶೆಟ್ಟಿಯವರು 'ಈ ನನ್ನ ಪ್ರಯತ್ನ ಯುಥ್ ಜೊತೆಗೆ ಬೇರೆ ಹಿರಿಯ ವಯಮಾನದವರಿಗೂ ತಲುಪಿರುವುದು ನನಗೆ ಖುಷಿ ಕೊಟ್ಟಿದೆ' ಎಂದಿದ್ದಾರೆ.
ಸಾಯುವ ಮೊದಲು ದರ್ಶನ್ ಬಗ್ಗೆ ನಟ ಸರಿಗಮ ವಿಜಿ ಹೇಳಿದ ಕೊನೆಯ ಮಾತಿದು!
ಕಳೆದ ತಿಂಗಳು, ಅಂದರೆ 27 ಡಿಸೆಂಬರ್ 2024ರಂದು ಈ ಕಾಟನ್ ಕ್ಯಾಂಡಿ (Cotton Candy) ರಿಲೀಸ್ ಆಗಿದೆ. ಈ ಮೊದಲಿನ ಎಲ್ಲದಕ್ಕಿಂತ ವಿಶೇಷವಾದ ಸಂಗೀತದ ರಸದೌತಣ ಇದರಲ್ಲಿದೆ ಎನ್ನಬಹುದು. ಕಾರಣ, ಈ ವಿಡಿಯೋವನ್ನು ಹೆಚ್ಚು ಅದ್ದೂರಿಯಾಗಿ ಶೂಟ್ ಮಾಡಲಾಗಿದೆ, ಈ ಮ್ಯೂಸಿಕ್ ಸಾಂಗ್‌ಗೆ ಹೆಚ್ಚಿನ ತಯಾರಿ ಮಾಡಿಕೊಂಡಿದ್ದರು ಚಂದನ್ ಶೆಟ್ಟಿ. ಈ ಮ್ಯೂಸಿಕ್ ವಿಡಿಯೋವನ್ನು ಸ್ವತಃ ಚಂದನ್ ಶೆಟ್ಟಿಯವರೇ ನಿರ್ದೇಶನ ಕೂಡ ಮಾಡಿದ್ದು ಚೆಂದಚೆಂದದ ಲೊಕೇಶನ್‌ಗಳಲ್ಲಿ ಶೂಟಿಂಗ್ ಮಾಡಿದ್ದಾರೆ.
ಈ ಬಗ್ಗೆ ಚಂದನ್ ಶೆಟ್ಟಿ ಅವರು 'ನನಗೆ ಈ ಕಾಟನ್ ಕ್ಯಾಂಡಿ ತುಂಬಾ ಮುಖ್ಯವಾದ ಪ್ರಾಜೆಕ್ಟ್ ಆಗಿದೆ. ಏಕೆಂದರೆ, ಇತ್ತೀಚೆಗೆ ನನ್ನ ಯಾವುದೇ ಹೊಸ ಸಾಂಗ್ ಬಿಡುಗಡೆ ಆಗಿರಲಿಲ್ಲ. ನನ್ನ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು, ಆದರೆ ನನಗೆ ನನ್ನ ಬೇರೆಬೇರೆ ಕೆಲಸಗಳ ಕಾರಣಕ್ಕೆ ಕೊಡಲು ಅಸಾಧ್ಯವಾಗಿತ್ತು. ಇದೀಗ ಎಲ್ಲವೂ ಅಂದುಕೊಂಡಂತೆ ಮೂಡಿ ಬಂದಿದ್ದು, ವಿಡಿಯೋ ಸಾಂಗ್ ಲಾಂಚ್ ಬಳಿಕ ಇದೊಂದು ಟ್ರೆಂಡ್ ಸಾಂಗ್ ಆಗಿದೆ. ಇದು ನಾನು ನನ್ನ ಫ್ಯಾನ್ಸ್ ಹಾಗೂ ಮ್ಯೂಸಿಕ್ ಲವರ್ ಗಳಿಗೆ ಕೊಟ್ಟ ನ್ಯೂ ಈಯರ್ ಗಿಫ್ಟ್' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.