ಡಾ ರಾಜ್‌ಗೆ ಮುತ್ತು ಕೊಡೋಕೆ ಗಂಡನ ಜೊತೆ ಬಂದ ಗೃಹಿಣಿ ಬಗ್ಗೆ ಪಾರ್ವತಮ್ಮ ಹೇಳಿದ್ದಿಷ್ಟು!

Published : Jan 18, 2025, 06:49 PM ISTUpdated : Jan 18, 2025, 09:25 PM IST
ಡಾ ರಾಜ್‌ಗೆ ಮುತ್ತು ಕೊಡೋಕೆ ಗಂಡನ ಜೊತೆ ಬಂದ ಗೃಹಿಣಿ ಬಗ್ಗೆ ಪಾರ್ವತಮ್ಮ ಹೇಳಿದ್ದಿಷ್ಟು!

ಸಾರಾಂಶ

ಡಾ. ರಾಜ್‌ಕುಮಾರ್ ಅವರ ಅಭಿಮಾನಿ ದಂಪತಿಯೊಂದು, ಪತ್ನಿ ರಾಜ್‌ರ ಕೈಗೆ ಮುತ್ತು ಕೊಡುವ ಷರತ್ತಿನ ಮೇಲೆ ಮದುವೆಯಾಗಿದ್ದರು. ನಂದಿಬೆಟ್ಟದಲ್ಲಿ ಚಿತ್ರೀಕರಣದ ವೇಳೆ ಭೇಟಿಯಾದಾಗ, ಪತ್ನಿ ರಾಜ್‌ರ ಪಾದಕ್ಕೆ ನಮಸ್ಕರಿಸಿ ಕಣ್ಣೀರಿಟ್ಟರು. ರಾಜ್‌ಕುಮಾರ್ ಮದುವೆಗೆ ಬರುವುದನ್ನು ಷರತ್ತಾಗಿ ಹುಡುಗರು ಮದುವೆಯಾಗುತ್ತಿದ್ದ ಘಟನೆಗಳೂ ನಡೆದಿವೆ ಎಂದು ಪಾರ್ವತಮ್ಮ ಹೇಳಿದ್ದಾರೆ.

ಡಾ ರಾಜ್‌ಕುಮಾರ್ (Dr Rajkumar) ಅವರು ಕರ್ನಾಟಕದ ಆಸ್ತಿ, ಕನ್ನಡದ ಅಸ್ಮಿತೆ ಎಂದು ಹೆಸರುವಾಸಿ ಆದವರು. ಇಂಥ ರಾಜ್‌ಕುಮಾರ್ ಅವರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕರ್ನಾಟಕದ ಮೂಲೆಮೂಲೆಯಲ್ಲೂ ಮನೆಮಾತಾದವರು. ಅವರ ಜೀವನದಲ್ಲಿ ನಡೆದ ಘಟನೆಗಳು ಒಂದೆರಡಲ್ಲ, ನೂರಾರು ಸಾವಿರಾರು ಎನ್ನಬಹುದ. ಆದರೆ ಹಲವು ಹೊರಜಗತ್ತಿಗೆ ಗೊತ್ತಾಗದೇ ಅಲ್ಲಲ್ಲೇ ಮೂಲೆ ಸೇರಿವೆ, ಕೆಲವು ಮಾತ್ರ ಅವರ ಮನೆಯವರು ಹಾಗೂ ಆಪ್ತರ ಮೂಲಕ ಬಹಿರಂಗವಾಗಿವೆ. ಡಾ ರಾಜ್‌ಕುಮಾರ್ ಪತ್ನಿ ಪಾರ್ವತಮ್ಮನವು (Parvathamma Rajkumar) ಅಂತಹ ಒಂದೆರಡು ಘಟನೆಗಳನ್ನು ಹೇಳಿಕೊಂಡಿದ್ದಾರೆ. 

ಅವುಗಳಲ್ಲಿ ಒಂದು ಇಲ್ಲಿದೆ. ಒಂದು ಎನ್ನುವುದಕ್ಕಿಂತ ಒಂದು ಘಟನೆ ಹೇಳಿಕೊಂಡು, ಅದರ ಜೊತೆ ಇನ್ನೂ ಒಂದೆರಡು ಹೇಳಿಕೊಂಡಿದ್ದಾರೆ ಪಾರ್ವತಮ್ಮ ರಾಜ್‌ಕುಮಾರ್. 'ನಂದಿಬೆಟ್ಟದಲ್ಲಿ ಜ್ವಾಲಾಮುಖಿ ಶೂಟಿಂಗ್ ನಡಿತಿತ್ತು. ಅಲ್ಲಿ ಒಂದು ಗಂಡ-ಹೆಂಡತಿ ಜೋಡಿ ಬಂದ್ರು. ಅಲ್ಲಿ ಬಂದ ಜೋಡಿಯಲ್ಲಿ ಗಂಡ ನನ್ ಹತ್ರ ಬಂದು 'ನೋಡಿ, ಇವ್ಳು ರಾಜ್‌ಕುಮಾರ್ ಕೈಗೆ ಮುತ್ತು ಕೊಡ್ತಾಳಂತೆ, ಏನೂ ಬೇಜಾರು ಮಾಡ್ಕೋಬೇಡಿ..' ಅಂದ್ರು. ಅದಕ್ಕೆ ನಾನು 'ಅಲ್ಲ ಕಣಯ್ಯಾ, ನೀವು ಅವ್ಳ ಗಂಡ, ನೀನು ಒಪ್ಕೊಂಡು ಕೇಳ್ತಾ ಇರುವಾಗ ನಾನು ಯಾಕೆ ಬೇಡ ಅನ್ಲಿ.. ಕೊಡ್ಲಿ ಬಿಡು.. ಅಂತ ನಾನಂದೆ..' ಅಂದ್ರು ಪಾರ್ವತಮ್ಮ ರಾಜ್‌ಕುಮಾರ್. 

ಡಾ ರಾಜ್‌-ಆರ್‌ಎನ್‌ ಜಯಗೋಪಾಲ್ ಮಧ್ಯೆ 'ದಾರಿ ತಪ್ಪಿದ ಮಗ' ವೇಳೆ ನಡೆದ ಕಹಿ ಘಟನೆ ಏನು?

ಅದಕ್ಕೆ ಆತ 'ನಾನು ಯಾಕೆ ಹೀಗೆ ಅಂದೆ ಅಂದ್ರೆ, ಮದ್ವೆಯಾಗುವಾಗ ಅವ್ಳು.. ನಾನು ಎಲ್ಲೇ ರಾಜ್‌ಕುಮಾರ್ ಕಂಡ್ರೂ ನಾನು ಅವ್ರ ಕೈಗೆ ಒಂದು ಮುತ್ತು ಕೊಡ್ತೀನಿ. ಅದಕ್ಕೆ ಓಕೆ ಅಂದ್ರೆ ಮಾತ್ರ ನಾನು ನಿಮ್ಮನ್ನ ಮದ್ವೆಯಾಗ್ತೀನಿ ಅಂತ ಹೇಳಿದ್ಳು.. ಆ ಮಾತನ್ನು ನಡೆಸೋದಕ್ಕೋಸ್ಕರ ಈ ಮಾತನ್ನು ನಾನು ನಿಮ್ಗೆ ಹೇಳಬೇಕಾಯ್ತು ಎಂದು ಸಮಜಾಯಿಸಿ ಕೊಟ್ಟಿದ್ದಾನೆ ಆ ಹೆಂಡತಿಯ ಗಂಡ ಎನ್ನಬಹುದು. 

ಆದರೆ, ಅವಳು ಡಾ ರಾಜ್‌ಕುಮಾರ್ ಕೈಗೆ ಮುತ್ತು ಕೊಡುವ ಬದಲು ಅವರ ಕಾಲಿಗೆ ಬಿದ್ದು ನಮಸ್ಕರಿಸಿ 'ಅಣ್ಣಾ' ಎಂದು ಕಣ್ಣೀರು ಹಾಕಿದ್ದಾಳೆ. ಆ ಬಳಿಕ ಅಣ್ಣಾವ್ರನ್ನು ನೋಡಿದ ಖುಷಿಯಿಂದ ಆ ಗಂಡ-ಹೆಂಡತಿ ಅಲ್ಲಿಂದ ಹೊರಟಿದ್ದಾರೆ. ಬಳಿಕ ರಾಜ್‌ ಅವರು ತಮ್ಮ ಪತ್ನಿ ಪಾರ್ವತಮ್ಮನಿಗೆ 'ನೋಡಿದ್ಯಾ, ಈ ಥರದವರೂ ಇರ್ತಾರೆ' ಎಂದಿದ್ದಾರೆ. 

ಅರ್ಧ ದೇಹ ಬಿಟ್ಕುಕೊಳ್ಳುವ ಹುಡ್ಗೀರಿಗೆ ಅಣ್ಣಾವ್ರು ಹೇಳಿದ ಕಿವಿ ಮಾತಿದು!

ಅದನ್ನುಹೇಳಿಕೊಂಡ ಕನ್ನಡದ ಹೆಸರಾಂತ ನಿರ್ಮಾಪಕಿ ಪಾರ್ವತಮ್ಮನವರು ಆಗ ಈ ಥರದ ಸಾಕಷ್ಟು ಘಟನೆಗಳು ನಡೆಯುತ್ತಿದ್ದವು. ಕೆಲವರು ಡಾ ರಾಜ್‌ಕುಮಾರ್ ಅವರನ್ನು ನಮ್ಮ ಮದುವೆಗೆ ಕರೆಸಬೇಕು ಎಂದು ಒತ್ತಾಯ ಮಾಡುತ್ತಿದ್ದರು. ಇನ್ನೂ ಕೆಲವು ಹುಡುಗರು 'ರಾಜ್‌ಕುಮಾರ್ ಅವರು ನಮ್ಮ ಮದುವೆಗೆ ಬರ್ತಾರೆ ಅಂದ್ರೆ ಮಾತ್ರ ತಾಳಿ ಕಟ್ತೀನಿ, ಬೇಕಾದ್ರೆ ವರದಕ್ಷಿಣೆ ಬಿಟ್ಟುಬಿಡ್ತೀನಿ' ಅಂತಾ ಇದ್ರು. ಅದೂ ಕೂಡ ಒಂದು ಕಾಲದಲ್ಲಿ ನಡಿತು.. ಆಗ ಡಾ ರಾಜ್‌ಕುಮಾರ್ ಅವರು ಎಷ್ಟೇ ಕಷ್ಟ ಆದ್ರೂ ಸ್ವಂತ ಖರ್ಚಲ್ಲಿ ಮದ್ವೆಗೆ ಬಂದು ಹೋಗ್ತಾ ಇದ್ರು' ಎಂದಿದ್ದಾರೆ ಪಾರ್ವತಮ್ಮ ರಾಜ್‌ಕುಮಾರ್. 

ಸಾಯುವ ಮೊದಲು ದರ್ಶನ್ ಬಗ್ಗೆ ನಟ ಸರಿಗಮ ವಿಜಿ ಹೇಳಿದ ಕೊನೆಯ ಮಾತಿದು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ