ಸಾಯುವ ಮೊದಲು ದರ್ಶನ್ ಬಗ್ಗೆ ನಟ ಸರಿಗಮ ವಿಜಿ ಹೇಳಿದ ಕೊನೆಯ ಮಾತಿದು!

Published : Jan 18, 2025, 08:50 PM ISTUpdated : Jan 18, 2025, 09:29 PM IST
ಸಾಯುವ ಮೊದಲು ದರ್ಶನ್ ಬಗ್ಗೆ ನಟ ಸರಿಗಮ ವಿಜಿ ಹೇಳಿದ ಕೊನೆಯ ಮಾತಿದು!

ಸಾರಾಂಶ

ಹಿರಿಯ ನಟ ಸರಿಗಮ ವಿಜಿ ಅವರು ದರ್ಶನ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ದರ್ಶನ್ ಜಾಮೀನಿನಿಂದ ಚಿತ್ರರಂಗಕ್ಕೆ ಸಂತಸವಾಗಿದೆ, ಕನ್ನಡ ಚಿತ್ರರಂಗ ಉದ್ಧಾರವಾಗಲಿದೆ ಎಂದಿದ್ದಾರೆ. ದುರಾದೃಷ್ಟದಿಂದ ದರ್ಶನ್ ಸಿಲುಕಿದ್ದಾರೆ, ಕಲಾವಿದರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ವಿಜಿ ಅವರು ಇತ್ತೀಚೆಗೆ ನಿಧನರಾಗಿದ್ದು, ಈ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ನಮ್ಮನ್ನಗಲಿರುವ ಕನ್ನಡದ ಹಿರಿಯ ನಟ ಸರಿಗಮ (Sarigama Viji) ವಿಜಿ ಅವರು ಸ್ಟಾರ್ ನಟ ದರ್ಶನ್ ಬಗ್ಗೆ ಮಾತನ್ನಾಡಿರುವ ವಿಡಿಯೋ ಇದೀಗ ಭಾರೀ ವೈರಲ್ ಅಗುತ್ತಿದೆ. ನಟ ದರ್ಶನ್ ಅವರ ಸದ್ಯದ ಸ್ಥಿತಿಗತಿ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಈ ಸಮಯದಲ್ಲಿ ವೈರಲ್ ಆಗ್ತಿರೋ ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗ್ತಿದೆ. ಹಾಗಿದ್ದರೆ ನಟ ಸರಿಗಮ ವಿಜಿ ದರ್ಶನ್ ಬಗ್ಗೆ ಹೇಳಿದ್ದೇನು? ಈ ವಿಡಿಯೋ ಯಾಕಿಷ್ಟು ವೈರಲ್ ಆಗ್ತಿದೆ? ನಿಮ್ಮ ಕುತೂಹಲ ತಣಿಸುವ ಸಂಗತಿ ಇಲ್ಲಿದೆ ನೋಡಿ.. 

ನಟ ದರ್ಶನ್‌ಗೆ (Actor Darshan) ಜಾಮೀನು ಸಿಕ್ಕಿರೋದು ಇಡೀ ಚಿತ್ರರಂಗಕ್ಕೆ ಜಾಮೂನು ಸಿಕ್ಕಿದಷ್ಟು ಸಂತೋಷ ಆಗಿದೆ. ನಮ್ಮನೆಲ್ಲಂತೂ ದರ್ಶನ್ ಜೈಲಿಗೆ ಹೋದ ದಿನದಿಂದ ಇವತ್ತಿನವರೆಗೂ ಜಾಮೀನು ಮಾಡಲೆ ಇಲ್ಲ.. ಎಂತ ಒಳ್ಳೆಯ ಕಲಾವಿದರು ನಟ ದರ್ಶನ್ ಅವ್ರು.. ನೋಡ್ತಾ ಇರಿ, ನಾನೀಗ ಧೈರ್ಯವಾಗಿ ಹೇಳ್ತಾ ಇದೀನಿ.. ಬರೋ ವರ್ಷ ಇಷ್ಟೊತ್ತಿಗೆ ಎಂತೆಂಥಾ ಸಿನಿಮಾ ಬಂದು ಕರ್ನಾಟಕದಲ್ಲಿ ಇಷ್ಟೊತ್ತಿಗೆ ಜಯಭೇರಿ ಭಾರಿಸುತ್ತೆ ಅಂತ.. ಈಗ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಅವ್ರು ಒಳ್ಗೆ ಹೋದ್ಮೇಲೆ ಏನ್ ಸರ್ ಬರ್ತಾ ಇವೆ ಚಿತ್ರಗಳು? 

ಪಿಸಿಯೋಥೆರಪಿಗೆ ಅಸ್ತು ಅಂದಿದ್ದೇಕೆ, ಮೈಸೂರಿನಲ್ಲಿ ನಟ ದರ್ಶನ ಈಗ ಏನ್ಮಾಡ್ತಿದಾರೆ?

ನಮ್ಮದು ಎರಡು ಚಿತ್ರಮಂದಿರ ಇವೆ, ಪೀಣ್ಯಾದಲ್ಲಿ ಭಾರತಿ ಚಿತ್ರಮಂದಿರ ಹಾಗೂ ಚಿಕ್ಕಮಗಳೂರಿನಲ್ಲಿ ಅಶೋಕ್ ಚಿತ್ರಮಂದಿರ. ನಮ್ಮಲ್ಲಿ15 ದಿನಗಳಿಗೆ ಒಂದು ಚಿತ್ರಮಂದಿರ ಮುಚ್ತಾ ಇದಾರೆ. ಕಾರಣ, ಕನ್ನಡ ಚಿತ್ರರಂಗಕ್ಕೆ ಒಬ್ಬ ಧೀಮಂತ ನಾಯಕ ಬೇಕು. ಏನೋ ಅವ್ನ ದುರಾದೃಷ್ಟ, ತಪ್ಪು ಮಾಡಿದಾನೊ ಇಲ್ವೋ ಗೊತ್ತಿಲ್ಲ, ಆದ್ರೆ ಎನೋ ದುರಾದೃಷ್ಟ, ಗ್ರಹಚಾರ.. ಇವತ್ತು ಅದೆಷ್ಟೋ ರಾಜಕಾರಣಿಗಳು ಎರಡೋ ಮೂರೋ ಕೊಲೆಗಳನ್ನು ಮಾಡಿ ಘಂಟಾಘೋಷವಾಗಿ, ವೀರಾವೇಶದಿಂದ ಓಡಾಡ್ತಾ ಇಲ್ವಾ? ಇವ್ನನ್ನೇ ಹಾಕಿಹಾಕಿ ತುಳಿತಾರೆ ಯಾಕೆ? 

ಟೈಮು ಅಷ್ಟೇ, ಬ್ಯಾಡ್ ಟೈಮ್ ಅಷ್ಟೇ.. ಈಗ ಮುಗಿತು ಬಿಡಿ.. ಕನ್ನಡ ಕಲಾಭಿಮಾನಿಗಳ ಎಲ್ಲರ ಆಶೀರ್ವಾದದಿಂದ ದರ್ಶನ್ ಅವ್ರು ಆಚೆ ಬಂದಿದಾರೆ,  ಖಂಡಿತ ಅವ್ರು ಯಾವ್ದೋ ಸುಪ್ರಿಂ ಕೋರ್ಟ್ ಅಥವಾ ಯಾವ್ದೋ ಕೋರ್ಟ್‌ಗೆ ಹೋಗ್ಬೇಕು ಅಂತಿದಾರೆ. ಯಾರು ಎಲ್ಲೇ ಹೋಗ್ಲಿ ಏನೂ ಮಾಡೋಕಾಗಲ್ಲ.. ಕನ್ನಡ ಚಿತ್ರರಂಗ ಇನ್ಮುಂದೆ ನಿಜವಾಗ್ಲೂ ಉದ್ಧಾರ ಆಗುತ್ತೆ.. ಕಲಾವಿದರೆಲ್ಲರಿಗೂ ಒಳ್ಳೆಯದಾಗುತ್ತೆ.. ಕನ್ನಡ ಚಿತ್ರರಂಗ ಬೆಳೆಯುತ್ತೆ' ಎಂದಿದ್ದರು ನಟ ಸರಿಗಮ ವಿಜಿ.

ಡಾ ರಾಜ್‌ಗೆ ಮುತ್ತು ಕೊಡೋಕೆ ಗಂಡನ ಜೊತೆ ಬಂದ ಗೃಹಿಣಿ ಬಗ್ಗೆ ಪಾರ್ವತಮ್ಮ ಹೇಳಿದ್ದಿಷ್ಟು!

ಅಂದಹಾಗೆ, ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಅವರು ಇತ್ತೀಚೆಗೆ, ಅಂದರೆ 15 ಜನವರಿ 2025ರಂದು ನಿಧನರಾಗಿದ್ದಾರೆ. ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಯಶವಂತಪುರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರು ಸಾಯುವ ಮೊದಲು ನಟ ದರ್ಶನ್‌ ಬಗ್ಗೆ ಆಡಿರುವ ಮಾತುಗಳು ಇದೀಗ ವೈರಲ್ ಆಗುತ್ತಿವೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್