
ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೊಸ ಪೋಸ್ಟ್ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯರಾಗಿರದ ವಿಜಯಲಕ್ಷ್ಮಿ ಅವರು ವೈಯಕ್ತಿಕ ವಿಚಾರಗಳ ಕುರಿತು ಅಪರೂಪಕ್ಕೆ ಮಾತ್ರ ಪೋಸ್ಟ್ ಹಂಚಿಕೊಳ್ಳುತ್ತಾರೆ.
ಇಂತಹ ಸಂದರ್ಭದಲ್ಲಿ ಅವರು ಹಂಚಿಕೊಂಡಿರುವ ಒಂದು ಸುಭಾಷಿತದ ಸಾಲು ನೆಟ್ಟಿಗರ ಗಮನ ಸೆಳೆದಿದೆ. ದರ್ಶನ್ ಅವರು ಜೈಲಿನಲ್ಲಿರುವ ಹಿನ್ನೆಲೆ ಕುಟುಂಬದ ಜವಾಬ್ದಾರಿಯನ್ನು ವಿಜಯಲಕ್ಷ್ಮಿ ಅವರು ನಿರ್ವಹಿಸುತ್ತಿದ್ದು, ಈ ಅವಧಿಯಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ‘ಪಡೆದುಕೊಂಡ ಮೇಲೆ, ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ; ಅದು ವಸ್ತುವಾಗಲಿ, ವ್ಯಕ್ತಿಯಾಗಲಿ’ ಎಂಬ ಸಾಲನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್‌ನಲ್ಲಿ ಅವರು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಅಥವಾ ಯಾರನ್ನೂ ಟ್ಯಾಗ್ ಮಾಡಿಲ್ಲ. ಆದರೆ ಈ ಸಂದೇಶದ ಅರ್ಥದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ. ಕೆಲವರು ಇದು ಯಾರನ್ನೋ ಉದ್ದೇಶಿಸಿ ಹಂಚಿಕೊಂಡಿರುವ ಪರೋಕ್ಷ ಸಂದೇಶವಾಗಿರಬಹುದು ಎಂದು ಊಹಿಸುತ್ತಿದ್ದರೆ, ಇನ್ನೂ ಕೆಲವರು ಇದನ್ನು ಸಾಮಾನ್ಯ ಜೀವನ ಮೌಲ್ಯವನ್ನು ಪ್ರತಿಬಿಂಬಿಸುವ ವಿಚಾರವೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ವಿಜಯಲಕ್ಷ್ಮಿ ದರ್ಶನ್ ಅವರು ಈ ಪೋಸ್ಟ್ ಯಾವ ವ್ಯಕ್ತಿ ಅಥವಾ ಘಟನೆಯನ್ನು ಉದ್ದೇಶಿಸಿ ಹಂಚಿಕೊಂಡಿದ್ದಾರೆ ಎಂಬುದರ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಇನ್ನು ದರ್ಶನ್ ಜೈಲಿನಲ್ಲಿದ್ದಾರೆ. ಜಾಮೀನು ಇಲ್ಲ. ಮನೆಮಂದಿಯನ್ನು ಭೇಟಿ ಮಾಡೋಕೂ ಆಗುತ್ತಿಲ್ಲ. ಈ ಹಿಂದೆ ವಿಜಯಲಕ್ಷ್ಮಿ ಅವರು ಮಗ ವಿನೀಶ್ ಜೊತೆ ಬಂದು ಗಂಡನನ್ನು ಭೇಟಿ ಮಾಡಿ ಹೋಗಿದ್ದರು. ಆದರೆ ವಿಜಯಲಕ್ಷ್ಮಿ ಗಂಡನನ್ನು ಮಿಸ್ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಅವರು ಆಗಾಗ ದರ್ಶನ್ ಜೊತೆಗಿರುವಾಗ ಕ್ಲಿಕ್ ಮಾಡಿದ್ದ ಹಳೆಯ ಫೋಟೋಸ್ ಪೋಸ್ಟ್ ಮಾಡುತ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.