Sathish Ninasam-Rachita Ram: ಸತೀಶ್-ರಚಿತಾ ಜೋಡಿಯ ಟಿಪಿಕಲ್ ನಾಟಿ ಸ್ಟೈಲ್ ಸಿನಿಮಾ 'ಅಯೋಗ್ಯ 2' ರಿಲೀಸ್‌ಗೆ ಕೌಂಟ್‌ಡೌನ್!

Published : Jul 03, 2026, 03:53 PM IST
sathish ninasam rachita ram ayogya 2 movie

ಸಾರಾಂಶ

ಮುನೇಗೌಡ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಅಯೋಗ್ಯ-2 ಪಕ್ಕಾ ಹಳ್ಳಿ ಸೊಗಡಿನ, ಟಿಪಿಕಲ್ ನಾಟಿ ಸ್ಟೈಲ್ ಸಿನಿಮಾವಾಗಿದ್ದು, ಮತ್ತದೇ ಮಂಡ್ಯದ ಸುತ್ತಮುತ್ತ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿದೆ. ಸದ್ಯ ಈ ಸಿನಿಮಾದ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ಸದ್ಯವೇ ತೆರೆಗೆ ಕಾಲಿಡಲಿದೆ.

ಅಯೋಗ್ಯ 2 ಸ್ಪೆಷಾಲಿಟಿ

ಸ್ಯಾಂಡಲ್‌ವುಡ್‌ನ ಸೂಪರ್ ಸಕ್ಸಸ್ ಆನ್ ಸ್ಕ್ರೀನ್ ಕಪಲ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ರಚಿತಾ ರಾಮ್ (Rachita Ram) ಹಾಗೂ ಸತೀಶ್ ನೀನಾಸಂ (Sathish Ninasam) ಮತ್ತೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಬಹುನಿರೀಕ್ಷಿತ 'ಅಯೋಗ್ಯ 2' ಚಿತ್ರೀಕರಣ ಪೂರ್ಣಗೊಂಡಿದೆ.​'ಅಯೋಗ್ಯ'ನ (Ayogya 2) ಸ್ಪೆಷಾಲಿಟಿ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ.

ಅಯೋಗ್ಯ.. ಸ್ಯಾಂಡಲ್​ವುಡ್‌ನ ಸೂಪರ್ ಹಿಟ್ ಸಿನಿಮಾ.. 2018ರಲ್ಲಿ ಬಂದಿದ್ದ ಈ ಸಿನಿಮಾ 100 ಡೇಸ್ ಮುಗಿಸಿತ್ತು. ಸತೀಶ್ ನೀನಾಸಂ ಹಾಗು ರಚಿತಾ ರಾಮ್ ಜೋಡಿ ಅಂದು ಹಿಟ್ ಪೇರ್ ಎನಿಸಿಕೊಂಡಿತ್ತು. ಈಗ ಅದೇ ಅಯೋಗ್ಯ ಸೀಕ್ವೆಲ್ ಬರ್ತಾ ಇದೆ. ಮಂಡ್ಯದ ಅಪ್ಪಟ ಮಣ್ಣಿನ ಕಥೆಯ ಅಯೋಗ್ಯ 2 ಸಿನಿಮಾದಲ್ಲೂ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗು ಸತೀಶ್ ನೀನಾಸಂ ಮತ್ತೆ ಜೋಡಿ ಆಗಿದ್ದಾರೆ.

ಸತೀಶ್-ರಚಿತಾ ರಾಮ್ 'ಅಯೋಗ್ಯ 2' ಶೂಟಿಂಗ್​ ಕಂಪ್ಲೀಟ್ 

ಹೌದು, ಅಯೋಗ್ಯ-2 ಸಿನಿಮಾ ಈಗಾಗ್ಲೆ ಕ್ರೇಜ್ ಹುಟ್ಟಿಸಿದೆ. ಸಿನಿಮಾದ ಹಾಡುಗಳ ರೈಟ್ಸ್ ಬರೋಬ್ಬರಿ 2 ಕೋಟಿಗೆ ಸೇಲ್ ಆಗಿದ್ದೇ ತಡ. ಈ ಮೂವಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅಯೋಗ್ಯ ಪಾರ್ಟ್ 1ಗಿಂತ ವಿಭಿನ್ನ ಕತೆಯನ್ನ ಹೊತ್ತು ಬರುತ್ತಿದೆ ಅಯೋಗ್ಯ-2.. ಈ ಸಿನಿಮಾ ನಿರ್ಮಾಪಕ ಮುನೇಗೌಡ ಭಾರಿ ಜಜೆಟ್‌ನಲ್ಲಿ ಸಿನಿಮಾ ಶೂಟಿಂಗ್ ಮಾಡಿ ಮುಗಿಸಿದ್ದಾರೆ.. ಚಿತ್ರೀಕರಣದ ಮೇಕಿಂಗ್ ವೀಡಿಯೋ ರಿಲಿಸ್ ಆಗಿದೆ.

ಮುನೇಗೌಡ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಅಯೋಗ್ಯ-2 ಪಕ್ಕಾ ಹಳ್ಳಿ ಸೊಗಡಿನ, ಟಿಪಿಕಲ್ ನಾಟಿ ಸ್ಟೈಲ್ ಸಿನಿಮಾವಾಗಿದ್ದು, ಮತ್ತದೇ ಮಂಡ್ಯದ ಸುತ್ತಮುತ್ತ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿದೆ. ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ಶೀಘ್ರದಲ್ಲೇ ಸೆನ್ಸಾರ್ ಮಂಡಳಿಯ ಮುಂದೆ ಹೋಗಲಿದೆ. ಎಲ್ಲವೂ ಪ್ಲ್ಯಾನ್ ಪ್ರಕಾರ ನಡೆದರೆ ರಚಿತಾ ರಾಮ್ -ಸತೀಶ್ ಜೋಡಿ!

ಮೊತ್ತೆ ಮೋಡಿ ಮಾಡೋದು ಗ್ಯಾರಂಟಿ.

ಅಯೋಗ್ಯ ಟೆಕ್ನಿಕಲಿ ಸ್ಟ್ರಾಂಗ್ ಆಗಿರೋ ಸಿನಿಮಾ.. ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಮಹೇಶ್ ಕುಮಾರ್ ಮತ್ತೆ ಅಯೋಗ್ಯ-2 ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್, ಚೇತನ್ ಕುಮಾರ್ ಸಾಹಿತ್ಯ ಇದೆ. ಅಷ್ಟೆ ಅಲ್ಲ ಸತೀಶ್​ ಹಾಗು ರಚಿತಾರಾಮ್ ಜೊತೆ ರವಿ ಶಂಕರ್, ಸಾಧು ಕೋಕಿಲಾ. ತಬಲಾ ನಾಣಿ, ಸುಂದರ್ ರಾಜ್, ಗಿರಿ ಶಿವಣ್ಣ, ಶಿವರಾಜ್ ಕೆ. ಆರ್​ ಪೇಟೆ. ಅರುಣ್ ಬಾಲ್ ರಾಜ್​ ಅವರಂತಹ ಘಟಾನುಘಟಿಗಳಿದ್ದಾರೆ. ಟೋಟಲಿ ಅಯೋಗ್ಯ-2 ಸಿನಿಮಾ ಎಂಟರ್ಟೈನ್ಮೆಂಟ್​ನ ಫುಲ್ ಮಿಲ್ಸ್ ಅಂತ ಟೀಸರ್ ಹಾಡುಗಳು ಸಾರಿವೆ..

ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Darshan Thoogudeepa Fans: ಜೈಕಾರ ಹಾಕಿದವರಿಂದಲೇ ಜೈಲು ಸೇರಿದ್ದ ನಟ ದರ್ಶನ್; ಈಗ ಮತ್ತೇನ್ ಆಯ್ತು?
ಪುತ್ರಿ ಜೊತೆ ನಟ ಗಣೇಶ್​: ಅಪರೂಪದ ಕ್ಯೂಟ್​ ಫೋಟೋಸ್​ ವೈರಲ್​- ಮಗಳಿಗೆ ಡಾನ್ಸ್​ ಹೇಳಿಕೊಟ್ಟ ಅಪ್ಪ