ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್‌ರನ್ನು ನೋಡಲು ಇಂದು ದಿನಕರ್ ತೂಗುದೀಪ್ ಜೊತೆ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದಾರೆ.
ಬೆಂಗಳೂರು (ಜು.22): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್‌ರನ್ನು ನೋಡಲು ಇಂದು ದಿನಕರ್ ತೂಗುದೀಪ್ ಜೊತೆ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದಾರೆ. ಈ ವಾರವು ಕುಟುಂಬದ ಜೊತೆ ಜೈಲಿಗೆ ದರ್ಶನ್ ಪತ್ನಿ ಭೇಟಿ ಕೊಟ್ಟಿದ್ದಾರೆ. ಪತಿಯನ್ನು ನೋಡಲು ಐದನೇ ಬಾರಿ ಪತ್ನಿ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದು, ಅತ್ತಿಗೆ ಜೊತೆ ದಿನಕರ್ ಕೂಡ ಆಗಮಿಸಿದ್ದಾರೆ.
ಕಳೆದ ವಾರ ದರ್ಶನ್‌ಗೆ ಜ್ವರ ಇತ್ತು. ಇದೀಗ ಅವರು ಚೇತರಿಸಿಕೊಳ್ತಿದ್ದಾರೆ. ಈ ಹಿನ್ನೆಲೆ ಪತಿಯನ್ನು ಕಾಣಲು ವಿಜಯಲಕ್ಷ್ಮಿ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಜೊತೆಗೆ ದರ್ಶನ್‌ಗೆ ಮನೆ ಊಟ ಕೊಡಲು ನ್ಯಾಯಾಲಯದ ತೀರ್ಪು ಇಂದು ಬರಬೇಕಿದ್ದು, ಕೋರ್ಟ್‌ನ ಆದೇಶಕ್ಕಾಗಿ ದರ್ಶನ್ ಕುಟುಂಬಸ್ಥರು ಎದುರು ನೋಡ್ತಿದ್ದಾರೆ. ಅಂದಹಾಗೆ ವಿಸೀಟಿಂಗ್ ಸಮಯ ಮುಕ್ತಾಯದ ಕೊನೆಗಳಿಗೆಯಲ್ಲಿ ವಿಜಯಲಕ್ಷ್ಮಿ ಮತ್ತು ದಿನಕರ್ ಬಂದಿದ್ದಾರೆ.
ದರ್ಶನ್ ಗೆಳೆತಿ ಪವಿತ್ರ ಗೌಡರನ್ನ ಭೇಟಿಯಾಗಿ ಬಂದ ಪೋಷಕರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯ ಮೊದಲನೇ ಆರೋಪಿಯಾಗಿರುವ ಪವಿತ್ರ ಗೌಡರನ್ನು ಇಂದು ಪೋಷಕರು ಭೇಟಿಯಾಗಿದ್ದಾರೆ. ಪವಿತ್ರ ಗೌಡ ತಾಯಿ ಮತ್ತು ಚಿಕ್ಕಮ್ಮ ಮೂರು ಗಂಟೆಗಳ ಬೇಟಿಯಾಗಿ ಕಾಲ ಭೇಟಿಯಾಗಿದ್ದರು. ವಾರದಲ್ಲಿ ಮೂರು ಬಾರಿ ಭೇಟಿಗೆ ಅವಕಾಶದಲ್ಲಿ ಪವಿತ್ರಳನ್ನ ಪೋಷಕರು ಭೇಟಿಯಾಗುತ್ತಿದ್ದಾರೆ.
ಸಿಎಂ ಸಿದ್ದುಗೆ ಉಳಿದಿರೋದು ಗಾಳಿಗೆ, ಸತ್ತವರ ಮೇಲೆ ಟ್ಯಾಕ್ಸ್ ಹಾಕೋದು: ಸಿ.ಟಿ.ರವಿ ಆಕ್ರೋಶ
ಪ್ರತಿ ಸೋಮವಾರ ಮತ್ತು ಶನಿವಾರ ಪವಿತ್ರ ಗೌಡ ಮನೆಯವರು ಭೇಟಿಯಾಗುತ್ತಿದ್ದು, ಇಂದು ತಾಯಿ ಶೋಭ ಸೇರಿ ನಾಲ್ಕು ಜನ ಹೋಗಿದ್ದಾರೆ. ಪ್ರತಿ ವಾರವೂ ಎರಡು ಬ್ಯಾಗ್ ಸಮೇತ ಮನೆಯವರು ಆಗಮಿಸುತ್ತಿದ್ದಾರೆ. ಇನ್ನು ಸುಮಾರು ನಾಲ್ಕು ಗಂಟೆ ನಂತರ ಪವಿತ್ರ ಗೌಡ ಭೇಟಿ ಮಾಡಿ ತಾಯಿ ಮತ್ತು ಕುಟುಂಬದವರು ಮಾತುಕತೆ ನಡೆಸಿ, ವಾಪಸ್ ಆಗಿದ್ದಾರೆ.