ನಟ ದರ್ಶನ್ ಕೇಸ್ ಬಗ್ಗೆ ಅನಿರೀಕ್ಷಿತ ಅನಿಸಿಕೆ ಶೇರ್ ಮಾಡಿದ ಚಂದನ್ ಶೆಟ್ಟಿ ; ಒಮ್ಮೆ ನೋಡ್ಬಿಡಿ..!

By Shriram BhatFirst Published Jul 22, 2024, 4:18 PM IST
Highlights

ಬೆಳಕಿಗೆ ಬಾರದಿರೋ ಎಷ್ಟೋ ಸಾವಿರ ಕೇಸ್‌ಗಳು ಇವೆ ಸರ್.. ಕಾಮನ್ ಮ್ಯಾನ್‌ಗೆ ಇದು ತುಂಬಾ ಕಾಮನ್ ಆಗೋಗ್ಬಿಟ್ಟಿದೆ. ಕಾಮನ್ ಹುಡುಗೀರು, ಅಂದ್ರೆ ಸೆಲೆಬ್ರಿಟೀಸ್ ಅಲ್ದೇ ನಾರ್ಮಲ್ ಹುಡುಗಿಯರಿಗೂ ಕೂಡ ಈ ತರ ಮೆಸೇಜಸ್ ಬರ್ತಿವೆ. ಆದ್ರೆ ಅವ್ರಿಗೆಲ್ಲಾ ಇದನ್ನೆಲ್ಲಾ ಯಾರಿಗೂ ಹೇಳಿಕೊಳ್ಳೋ ಧೈರ್ಯ ಇಲ್ಲ...

ಇದೀಗ ಸಿನಿಮಾ ನಟರಾಗಿಯೂ ಕಾಲಿಟ್ಟಿರುವ ಸಿಂಗರ್, ಕನ್ನಡದ ಹುಡುಗ ಚಂದನ್ ಶೆಟ್ಟಿ (Chandan Shetty) ಅವರು ಸೋಷಿಯಲ್ ಮೀಡಿಯಾದಿಂದ ಕೆಟ್ಟ ಪರಿಣಾಮಗಳ ಬಗ್ಗೆ ಮಾತನಾಡುತ್ತಿದ್ದರು. ಅದೇ ವೇಳೆ, ಇದೇ ವಿಷಯಕ್ಕೆ ನಡೆದಿರುವ ಇತ್ತೀಚಿನ ದುರಂತ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನ ಬಗ್ಗೆ, ಹಾಗೂ ನಟ ದರ್ಶನ್‌ ಬಗ್ಗೆ ಮಾತನಾಡಿದ್ದಾರೆ. 

ಇದು ಈಸಿಯಾಗಿ ತೆಗೆದುಕೊಳ್ಳುವ ಮ್ಯಾಟರ್ ಅಲ್ಲ, ಈ ಸೋಷಿಯಲ್ ಮೀಡಿಯಾ ದುರ್ಬಳಕೆ ಹೀಗೇ ಮುಂದುವರೆದರೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದಿದ್ದಾರೆ ನಟ-ಸಿಂಗರ್ ಚಂದನ್ ಶೆಟ್ಟಿ. ಇದೇ ವೇಳೆ ಕೇಳಲಾದ ನಟ ದರ್ಶನ್ ವಿಚಾರವಕ್ಕೆ ಸಂಬಂಧಿಸಿದ ಪ್ರಶ್ನೆಗೆ, ಚಂದನ್ ಶೆಟ್ಟಿಯವರು ಹೀಗೆ ಉತ್ತರಿಸಿದ್ದಾರೆ. 'ಇದೊಂದು ಕೆಟ್ಟ ಘಟನೆ, ಕಹಿ ಘಟನೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆದುಬಿಟ್ಟಿದೆ' ಎಂದಿದ್ದಾರೆ. 

Latest Videos

ಸೋಷಿಯಲ್ ಮೀಡಿಯಾ ಕಾಮೆಂಟ್ಸ್‌ ಬಗ್ಗೆ ಬಾಯ್ಬಿಟ್ಟ ಚಂದನ್ ಶೆಟ್ಟಿ ಹೇಳಿದ್ದೇನು, ಇದಾ ರಿಯಾಲಿಟಿ ?

ಮುಂದುವರೆದ ಚಂದನ್ ಶೆಟ್ಟಿ 'ಅದರಲ್ಲಿ ಯಾರು ಸರಿ ಯಾರು ತಪ್ಪು ಅನ್ನೋದು ನನಗೆ ಗೊತ್ತಿಲ್ಲ. ಅದನ್ನ ಪೊಲೀಸ್‌ ಅವ್ರು ಇನ್‌ವೆಸ್ಟಿಗೇಟ್ ಮಾಡ್ತಿದಾರೆ. ಕಾನೂನಾತ್ಮಕವಾಗಿ ಅದು ಕೋರ್ಟ್‌ಗೆ ಹೋಗಿ ಅದು ನ್ಯಾಯ ಬರುತ್ತೆ.. ನನ್ಗೂ ಕೂಡ ಮನಸ್ಸಲ್ಲಿ ಇರೋದು ದರ್ಶನ್ ಸರ್ ನಿರಪರಾಧಿ ಆಗಿ ಹೊರಗಡೆ ಬರ್ಲಿ ಅಂತ. ಆದ್ರೆ ಈ ಘಟನೆ ನಡೆದಿರೋದಂತೂ ಸತ್ಯ. ಇದ್ರಿಂದ ನಾವು ಎಚ್ಚೆತ್ಕೋಬೇಕಾಗಿದೆ. ಇದೊಂದು ಎಚ್ಚರಿಕೆಯ ಗಂಟೆ.. ಹೈ ಪ್ರೊಫಲ್‌ ಆಗಿ ನಡೆದುಬಿಟ್ಟಿದೆ. ಇದು ಬೆಳಕಿಗೆ ಬಂದಿದೆ. 

ಬೆಳಕಿಗೆ ಬಾರದಿರೋ ಎಷ್ಟೋ ಸಾವಿರ ಕೇಸ್‌ಗಳು ಇವೆ ಸರ್.. ಕಾಮನ್ ಮ್ಯಾನ್‌ಗೆ ಇದು ತುಂಬಾ ಕಾಮನ್ ಆಗೋಗ್ಬಿಟ್ಟಿದೆ. ಕಾಮನ್ ಹುಡುಗೀರು, ಅಂದ್ರೆ ಸೆಲೆಬ್ರಿಟೀಸ್ ಅಲ್ದೇ ನಾರ್ಮಲ್ ಹುಡುಗಿಯರಿಗೂ ಕೂಡ ಈ ತರ ಮೆಸೇಜಸ್ ಬರ್ತಿವೆ. ಆದ್ರೆ ಅವ್ರಿಗೆಲ್ಲಾ ಇದನ್ನೆಲ್ಲಾ ಯಾರಿಗೂ ಹೇಳಿಕೊಳ್ಳೋ ಧೈರ್ಯ ಇಲ್ಲ. ಅವರು ಸಮಾಜಕ್ಕೆ ಭಯ ಪಡ್ತಾರೆ. ಸೋ, ಈ ಸೋಷಿಯಲ್ ಮೀಡಿಯಾ ಸಮಸ್ಯೆನಾ ತುಂಬಾ ಸೀರಿಯಸ್ಸಾಗಿ ಪರಿಗಣಿಸಬೇಕು. 

ಪವಿತ್ರಾ ಲೋಕೇಶ್‌ಗಾ ಬೇಬಿ ಬಿಟ್ಟು ಹೋದಳು ಎಂದಿದ್ದು ? ಮತ್ತೆ ಒಂಟಿಯಾದೆನೆಂದು ಅತ್ತ ನರೇಶ್!

ಈಗಾಗಲೇ ನಮ್ಮ ಭಾರತ ಸರ್ಕಾರ ಆ ಟಿಕ್‌ಟಾಕ್ ಅನ್ನೋ ಆಪ್‌ನ ಬ್ಯಾನ್ ಮಾಡಿ ಬಿಸಾಕಿದಾರೆ. ಅದೇ ರೀತಿ ಮಾಡ್ಬೇಕಾಗಿದೆ ಸರ್.. ಖಂಡಿತವಾಗ್ಲೂ ಹಾಗೆ ಮಾಡದ್ರೆ ಸಮಾಜ ಸುಧಾರಣೆ ಆಗುತ್ತೆ.. ಇಲ್ಲಾ ಅಂದ್ರೆ ಯೂಥ್ಸ್‌ ಹಾಳಾಗ್ತಾರೆ. ಯೂಥ್ಸ್‌ ಹಾಳಾಯ್ತು ಅಂತಾದ್ರೆ ನಮ್ಮ ಭಾರತದ ಎಕಾನಮಿನೇ ಡ್ರಾಪ್ ಆಗೋ ಸಾಧ್ಯತೆಗಳಿವೆ. ಹೀಗಾಗಿ ಭಾರತ ಸರ್ಕಾರ ಈ ಸೋಷಿಯಲ್ ಮೀಡಿಯಾ ದುರ್ಬಳಕೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದಿದ್ದಾರೆ.    

ನಟ-ರಾಪರ್ ಚಂದನ್ ಶೆಟ್ಟಿ ಮಾತನಾಡುತ್ತ ಬಹಳಷ್ಟು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕಾರಣ, ಅವರು ಜೀವನದಲ್ಲಿ ಇತ್ತೀಚೆಗೆ ಒಂದು ಕಹಿ ಘಟನೆ ನಡೆದುಹೋಗಿದೆ. ನಟಿ ಹಾಗು ಚಂದನ್ ಪತ್ನಿಯಾಗಿದ್ದ ನಿವೇದಿತಾ ಗೌಡ ಜೊತೆಗಿನ ದಾಂಪತ್ಯ ಮುರಿದುಬಿದ್ದು ಅದು  ಕೊನೆಗೆ ಡಿವೋರ್ಸ್‌ನಲ್ಲಿ ಅಂತ್ಯವಾಗಿದೆ. ಆ ವೇಳೆ ಸೋಷಿಯಲ್ ಮೀಡಿಯಾಗಳಲ್ಲಿ ಬಂದ ಕಾಮೆಂಟ್‌ಗಳಿಂದ ನಿವೇದಿತಾ ಸೇರಿದಂತೆ, ಸ್ವತಃ ಚಂದನ್ ಸಾಕಷ್ಟು ನೋವು ಅನುಭವಿಸಿದ್ದಾರಂತೆ. 

ಅನುಶ್ರೀ ಮ್ಯಾರೇಜ್‌ಗೆ ರೆಡಿ, ಗಂಡು ಹುಡುಕುವ ಕೆಲಸ ಖಾಲಿ ಇದ್ಯಂತೆ; ಯಾಕೆ ಟ್ರೈ ಮಾಡ್ಬಾರ್ದು..?

ಹೀಗಾಗಿ , ಈಗ ಸೂಕ್ತ ವೇದಿಕೆ-ಸಮಯ ಸಿಕ್ಕಾಗ ಚಂದನ್ ಶೆಟ್ಟಿ ಸೋಷಿಯಲ್ ಮೀಡಿಯಾಗಳಿಂದ ಅಗುತ್ತಿರುವ ಅವಾಂತರಗಳ ಬಗ್ಗೆ ಮಾತನ್ನಾಡಿದ್ದಾರೆ. ಅದೇ ವೇಳೆ ಅವರು 'ಸಾಮಾಜಿಕ ಜಾಲತಾಣ ಒಳ್ಳೆಯ ಟೂಲ್ ಕೂ ಹೌದು' ಎಂದು ಹೇಳಲು ಮರೆತಿಲ್ಲ. ಆದರೆ, ಈ ಒಳ್ಳೆಯ ಟೂಲ್ ಕೆಟ್ಟವರ ಕೈಗೆ ಸಿಕ್ಕಿ ಸಮಾಜದಲ್ಲಿ ಆಗಬಾರದ ಸಮಸ್ಯೆಗಳು, ಅಪರಾಧಗಳು ಸೃಷ್ಟಿಯಾಗುತ್ತಿವೆ ಎಂದಿದ್ದಾರೆ ಚಂದನ್ ಶೆಟ್ಟಿ . ಜೊತೆಗೆ, ಅದಕ್ಕೆ ಕಡಿವಾಣ ಹಾಕಬೇಕಾದ ಸರ್ಕಾರದ ಜವಾಬ್ದಾರಿ ಬಗ್ಗೆ ಕೂಡ ಅವರು ಎಚ್ಚರಿಸಿ ಮಾತನಾಡಿದ್ದಾರೆ. 

click me!