ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಸಿನಿಮಾ ಸ್ಟೈಲ್‌ನಲ್ಲಿಯೇ ಸಿನಿಮಾ ಥಿಯೇಟರ್‌ನಲ್ಲಿಯೇ ತನ್ನ ಪ್ರೇಯಸಿ ಹಾಗೂ ಜೀವನ ಸಂಗಾತಿಯನ್ನು ಪರಿಚಯಿಸಿದ್ದು, ಮದುವೆ ದಿನಾಂಕವನ್ನೂ ಘೋಷಣೆ ಮಾಡಿದ್ದಾರೆ. ಆದ್ರೆ, ಇವರಿಬ್ಬರ ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ.?
ಬೆಂಗಳೂರು (ಜು.22): ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಸಿನಿಮಾ ಸ್ಟೈಲ್‌ನಲ್ಲಿಯೇ ಸಿನಿಮಾ ಥಿಯೇಟರ್‌ನಲ್ಲಿಯೇ ತನ್ನ ಪ್ರೇಯಸಿ ಹಾಗೂ ಜೀವನ ಸಂಗಾತಿಯನ್ನು ಪರಿಚಯಿಸಿದ್ದಾರೆ. ಜೊತೆಗೆ ಮದುವೆ ದಿನಾಂಕವನ್ನೂ ಅನೌನ್ಸ್ ಮಾಡಿದ್ದಾರೆ. ಆದರೆ, ಇವರಿಬ್ಬರ ನಡುವೆ ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ..? ಇಲ್ಲಿದೆ ನೋಡಿ ಪೂರ್ಣ ಮಾಹಿತಿ..
ಹೌದು, ಕಳೆದೊಂದು ತಿಂಗಳಿನಿಂದಲೂ ನಟ ಹಾಗೂ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಗಾಸಿಪ್ ಹರಡಿತ್ತು. ಆದರೆ, ಈ ಬಗ್ಗೆ 15 ದಿನಗಳು ಕಳೆದರೂ ಯಾರೊಬ್ಬರೂ ಬಹಿರಂಗವಾಗಿ ಸ್ಪಷ್ಟನೆ ನೀಡಿರಲಿಲ್ಲ. ಆದರೆ, ಕೆಲವು ದಿನಗಳ ಹಿಂದೆ ಸೋನಲ್ ತರುಣ್ ಅವರನ್ನು ವರಿಸುವುದಾಗಿ ಹೇಳಿಕೊಂಡಿದ್ದರು. ಆದರೆ, ನಿರ್ದೇಶಕ ತರುಣ್ ಸುಧೀರ್ ಮಾತ್ರ ಯಾವುದೇ ಸುಳಿವನ್ನೂ ನೀಡದೇ ಜು.27ರಂದು ಅನೌನ್ಸ್ ಮಾಡುವುದಾಗಿ ತಿಳಿಸಿದ್ದರು. ಅದೇ ರೀತಿ ಜು.22ರ ಸೋಮವಾರ ಸಿನಿಮಾ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನದ ಮಾದರಿಯಲ್ಲಿಯೇ ನಟಿ ಸೋನಲ್ ಮೊಂಥೆರೋ ಅವರನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ಮದುವೆ ದಿನಾಂಕವನ್ನೂ ಘೋಷಣೆ ಮಾಡಿದ ತರುಣ್:
ನಿರ್ದೇಶಕ ತರುಣ್ ಸುಧೀರ್ ಅವರ ಆಪ್ತ ಸ್ನೇಹಿತ ನಟ ದರ್ಶನ್ ಸ್ವತಃ ತರುಣ್ ಮತ್ತು ಸೋನಲ್ ಅವರ ಮದುವೆ ದಿನಾಂಕವನ್ನು ನಿಗದಿ ಮಾಡಿದ್ದರು. ಆದರೆ, ನಟ ದರ್ಶನ್ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಮದುವೆ ಮಾಡಿಕೊಳ್ಳಬೇಕೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದ್ದ ತರುಣ್ ಇತ್ತೀಚೆಗೆ ನಟ ದರ್ಶನ್ ಭೇಟಿ ಮಾಡಲು ಜೈಲಿಗೆ ಹೋಗಿ ಬಂದಿದ್ದರು. ಈ ವೇಳೆ ನಟ ದರ್ಶನ್ ನನಗಾಗಿ ನೀನು ನಿನ್ನ ಮದುವೆ ದಿನಾಂಕ ಮುಂದೂಡಿಕೆ ಮಾಡಿಕೊಳ್ಳಬೇಡ. ಅದೇ ದಿನಾಂಕದಲ್ಲಿ ನೀನು ಮದುವೆ ಮಾಡಿಕೋ, ನಾನು ಅಷ್ಟರೊಳಗೆ ಜೈನಿಂದ ಹೊರಗೆ ಬರುವುದಾಗಿ ಭರವಸೆ ನೀಡಿದ್ದಾರಂತೆ. ಹೀಗಾಗಿ, ಸಿನಿಮಾ ಮಂದಿರದಲ್ಲಿ ತಮ್ಮ ಮದುವೆ ದಿನಾಂಕ ಆ.11ರಂದು ಎಂದು ಘೋಷಣೆ ಮಾಡಿದ್ದಾರೆ. ಆ.9ರಿಂದ ಆ.11ರವರೆಗೆ ಮದುವೆ ಶಾಸ್ತ್ರಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಪ್ರೇಮ ವಿವಾಹ ಮಾಡಿಕೊಳ್ಳುತ್ತಿರುವ ಜೋಡಿ: ತರುಣ್ ಸುಧೀರ್ ಅವರು ನಟಿ ಸೋನಲ್ ಅವರನ್ನು ನೋಡಿ ಇಷ್ಟಪಟ್ಟಿದ್ದಾರೆ. ಆದರೆ, ಪ್ರೀತಿ ಹೇಳಿಕೊಳ್ಳಲು ಒದ್ದಾಡುತ್ತಿರುವಾಗ ನಟ ದರ್ಶನ್ ಇವರ ಪ್ರೀತಿಗೆ ಸಹಾಯ ಮಾಡಿದ್ದಾರೆ. ಜೊತೆಗೆ, ಮದುವೆಯ ಪ್ರಸ್ತಾಪವನ್ನೂ ಮುಂದಿಟ್ಟಿದ್ದಾರೆ. ಇದಕ್ಕೆ ನಟಿ ಸೋನಲ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈ ವಿಚಾರವನ್ನು ತಿಳಿದ ತರುಣ್ ಅವರ ತಾಯಿ ನಟ ದರ್ಶನ್ ಅವರನ್ನು ಹಾಡಿ ಹೊಗಳಿದ್ದರು. ನನ್ನ ಇನ್ನೊಬ್ಬ ಮಗ ನೀನು ಎಂದು ಹೇಳಿಕೊಂಡು ಪ್ರೀತಿ ತೋರಿಸಿದ್ದರು. ಇದರ ಬೆನ್ನಲ್ಲಿಯೇ ನಟ ದರ್ಶನ್ ಕೊಲೆ ಕೇಸಿನಲ್ಲಿ ಜೈಲಿಗೆ ಹೋದಾಗ ಆತ ನನ್ನ ಮಗ ತಪ್ಪು ಮಾಡಿರಲು ಸಾಧ್ಯವಿಲ್ಲ, ಬೇಗನೇ ಜೈಲಿನಿಂದ ಹೊರಗೆ ಬರುತ್ತಾನೆ ಎಂದು ತರುಣ್ ಸುಧೀರ್ ಅವರ ತಾಯಿ ಅಳಲು ತೋಡಿಕೊಂಡಿದ್ದರು.
ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ?
ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಜೋಡಿ ಆಗಿರುವ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಮದುವೆ ದಿನಾಂಕವನ್ನು ಅನೌನ್ಸ್ ಮಾಡಿಯಾಗಿದೆ. ಆದರೆ, ಇವರಿಬ್ಬರ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 11 ವರ್ಷವಾಗಿದೆ. ನಿರ್ದೇಶಕ ತರುಣ್ ಸುಧೀರ್‌ಗೆ 41 ವರ್ಷ ವಯಸ್ಸಾಗಿದೆ. ಇನ್ನು ನಟಿ ಸೋನಲ್ ಮೊಂಥೆರೋಗೆ 29 ವರ್ಷ ವಯಸ್ಸಾಗಿದೆ. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗುತ್ತಿರುವುದರಿಂದ ವಯಸ್ಸಿನ ಅಂತರ ಲೆಕ್ಕಕ್ಕೆ ಬರುವುದಿಲ್ಲ. ಇನ್ನು ಇವರಿಬ್ಬರ ವಯಸ್ಸಿನ ಅಂತರಕ್ಕಿಂತ ತುಂಬಾ ವಯಸ್ಸಿನ ಅಂತರ ಇರುವ ಜೋಡಿಗಳೇ ಚೆನ್ನಾಗಿ ಜೀವನ ಮಾಡುತ್ತಿದ್ದು, ಈ ಮುದ್ದಾದ ಜೋಡಿಗೂ ಎಲ್ಲರೂ ಶುಭ ಹಾರೈಸಿದ್ದಾರೆ. ಇನ್ನು ಸ್ಯಾಂಡಲ್‌ವುಡ್‌ನ ತಾರಾಬಳಗದಿಂದ ಮದುವೆ ಡೇಟ್ ಅನೌನ್ಸ್ ಮಾಡಿದ ನಿರ್ದೇಶಕ ತರುಣ್ ಸುಧೀರ್‌ಗೆ ಅಭಿನಂದನೆಗಳ ಸುರಿಮಳೆ ಬಂದಿದೆ.