ಸ್ಪಂದನಾ...ನಾನೆಂದು ನಿನ್ನವ: ಭಾವುಕ ಸಾಲುಗಳನ್ನು ಬರೆದ ವಿಜಯ್ ರಾಘವೇಂದ್ರ

Published : Aug 18, 2023, 12:44 PM ISTUpdated : Aug 19, 2023, 09:07 AM IST
ಸ್ಪಂದನಾ...ನಾನೆಂದು ನಿನ್ನವ: ಭಾವುಕ ಸಾಲುಗಳನ್ನು ಬರೆದ ವಿಜಯ್ ರಾಘವೇಂದ್ರ

ಸಾರಾಂಶ

ಪತ್ನಿ ನೆನೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ವಿಜಯ್ ರಾಘವೇಂದ್ರ. ನಿನ್ನನ್ನು ಉಸಿರಾಡುತ್ತಿರುವೆ ಚಿನ್ನ.......  

ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಗಲಿ 11 ದಿನ ಕಳೆದಿದೆ. ವೈಕುಂಠ ಸಮಾರಾಧನೆ ಕಾರ್ಯಕ್ರಮದ ಮುಗಿನ ನಂತರ ಪತ್ನಿ ಬಗ್ಗೆ ವಿಜಯ್ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಸ್ಪಂದನಾಳನ್ನು ವಿಜಯ್ ವರ್ಣಿಸಿರುವ ರೀತಿ ಕಂಡು ಪ್ರತಿಯೊಬ್ಬರು ಭಾವುಕರಾಗಿದ್ದಾರೆ. 

ವಿಜಯ್ ಪೋಸ್ಟ್:

'ಸ್ಪಂದನಾ....ಹೆಸರಿಗೆ ತಕ್ಕ ಜೀವ...ಉಸಿರಿಗೆ ತಕ್ಕ ಭಾವ..ಅಳತೆಗೆ ತಕ್ಕ ನುಡಿ....ಬದುಕಿಗೆ ತಕ್ಕ ನಡೆ..ನಮಗೆಂದೇ ಮಿಡಿದ ನಿನ್ನ ಹೃದಯವ...ನಿಲ್ಲದು ನಿನ್ನೊಂದಿಗಿನ ಕಲರವ....ನಾನೆಂದು ನಿನ್ನವ...ಕೇವಲ ನಿನ್ನವ..' ಎಂದು ವಿಜಯ್ ರಾಘವೇಂದ್ರ ಬರೆದುಕೊಂಡಿದ್ದಾರೆ. 'ನಿನ್ನನ್ನು ಹುಸಿರಾಡುತ್ತಿರುವೆ...ಚಿನ್ನ' ಎಂದು ಚಿನ್ನಾರಿ ಮುತ್ತ ಹೇಳಿದ್ದಾರೆ. 

ಭಗವಂತ ಕೊಟ್ಟಿರುವ ದುಃಖಕ್ಕೆ ಅವನೇ ಮೂಲಾಮು ಹಚ್ಚಬೇಕು: ನಾಗೇಂದ್ರ ಪ್ರಸಾದ್‌

8 ದಿನಗಳ ಕಾಲ ಸ್ಪಂದನಾ ವಿಜಯ್ ರಾಘವೇಂದ್ರ ಫ್ಯಾಮಿಲಿ ಜೊತೆ ಥೈಲ್ಯಾಂಡ್ ಪ್ರವಾಸ ಮಾಡಿದ್ದಾರೆ. ಪ್ರವಾಸದ ಕೊನೆಯ ದಿನ ವಿಜಯ್ ಚಿತ್ರೀಕರಣ ಮುಗಿಸಿಕೊಂಡು ಸ್ಪಂದನಾ ಅವರನ್ನು ಥೈಲ್ಯಾಂಡ್‌ನಲ್ಲಿ ಭೇಟಿ ಮಾಡಿದ್ದಾರೆ. ಇಡೀ ದಿನ ಶಾಪಿಂಗ್ ಮಾಡಿಕೊಂಡು ರೂಮ್‌ಗೆ ಬಂದಿರುವ ಸ್ಪಂದನಾ ಸುಸ್ತಾಗಿದ್ದಾರೆ ಬೆಳಗ್ಗೆ 6 ಗಂಟೆ ವರೆಗೂ ನಿದ್ರೆ ಮಾಡಿರಲಿಲ್ಲ ಆದರೂ ರಾಘು ಮಲಗಬೇಕು ಎಂದು ಒತ್ತಾಯ ಮಾಡಿದಕ್ಕೆ ಕೆಲವು ನಿಮಿಷಗಳ ಕಾಲ ವಿಶ್ರಾಂತಿ ಪಡೆಯಲು ಮುಂದಾದವರು ಎದ್ದೇ ಇಲ್ಲ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಸ್ಪಂದನಾ ಲೋ ಬಿಪಿ ಆಗಿ ಅಗಲಿರುವುದು ಎನ್ನಲಾಗಿದೆ. ಸ್ಪಂದನಾ ಸಾವಿನ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಡಯಟ್ ಮಾಡುತ್ತಿದ್ದರು ಏನೋ ಪೌಡರ್ ಕುಡಿದು 16 ಕೆಜಿ ತೂಕ  ಇಳಿಸಿಕೊಂಡಿದ್ದರು ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದ ಕಾರಣ ಹಾರ್ಟ್‌ ಅಟ್ಯಾಕ್ ಆಗಿದೆ ಹೀಗೆ ಏನ್ ಏನೋ ಕೇಳಿ ಬಂದಿತ್ತು ಆದರೆ ಕುಟುಂಬಸ್ಥರಿಂದ ಯಾವ ಮಾಹಿತಿ ಬಂದಿಲ್ಲ.

ಹೋದೋರು ಹೊರಟು ಹೋಗ್ತಾರೆ, ಇರೋರು ಕಷ್ಟ ಪಡ್ತಾರೆ: ಸ್ಪಂದನಾ ನೆನೆದು ಭಾವುಕರಾದ ರಾಘಣ್ಣ

5ನೇ ದಿನದ ಕಾರ್ಯ:

'ವಿಜಯ್ ರಾಘವೇಂದ್ರ ಧರ್ಮಪತ್ನಿ ಕಾರ್ಯಕ್ರಮವನ್ನು ಕ್ರಮವಾಗಿ ಮಾಡಲಾಗಿದೆ. ಶ್ರೀರಂಗ ಪಟ್ಟಣದ ಕಾವೇರಿ ತೀರದಲ್ಲಿ ಅಸ್ತಿ ವಿಸರ್ಜನಿ ಕಾರ್ಯಕ್ರಮ ಹಾಗೂ ಹೋಮ ಮಾಡಬೇಕು ಎಂದು ಚೆನ್ನೇಗೌಡರು ಹೇಳಿದ್ದರು. ಉತ್ತರಾಭಾದ್ರ ನಕ್ಷತ್ರದಲ್ಲಿ ಸ್ಪಂದಾನ ತೀರಿಕೊಂಡಿರುವ ಕಾರಣ ಶಾಂತಿ ಹೋಮ ಮಾಡಿಸಲಾಗಿದೆ. ಅದಕ್ಕೂ ಮುನ್ನ ವಿಜಯ್ ರಾಘವೇಂದ್ರ ಮಗ ಶೌರ್ಯ ಅವರಿಗೆ ಮುಡಿ ಕೊಡುವ ಶಾಸ್ತ್ರ ಮಾಡಿಸಿ ಹೋಮ ಮಾಡಲಾಗಿದೆ. ಒಂದು ಬೊಂಬೆಗೆ ಸ್ಪಂದನಾ ಅವರನ್ನು ಆಹ್ವಾಹನ ಮಾಡಿ ಅದನ್ನು ಸುಟ್ಟು ಹಾಕಲಾಗಿದೆ. ಅದನ್ನು ಮತ್ತೆ ಅಸ್ತಿ ಜೊತೆಗೆ ಸೇರಿಸಿಕೊಂಡು ಅಸ್ತಿನಾರಾಯಣ ಸ್ವಾಮಿ ಪೂಜೆಯನ್ನು ಕ್ರಮವಾಗಿ ರುಧ್ರ ಮತ್ತು ಸೂಕ್ತ ಕ್ರಮದಿಂದ ಪೂಜೆ ಮಾಡಿಸಿದ್ದೀವಿ. ಪಂಚಾಮೃತ ಅಂತಾ...ತುಪ್ಪ ಹಾಲು ಸಕ್ಕರ ಮೊಸರು ಜೇನುತುಪ್ಪ ಎಳನೀರು ಅಭಿಷೇಕ ಮಾಡಿ ಆ ಅಸ್ತಿಗೆ ಪೂಜೆ ಮಾಡುತ್ತೀವಿ. ಅವರಿಗೆ ಹಸಿವು ಬಾಯಾರಿಕೆ ಇರುತ್ತದೆ ಅದಿಕ್ಕೆ ಪಿಂಡ ಪ್ರಧಾನ ಮತ್ತು ಬಲಿ ಪ್ರಧಾನ ಮಾಡಲಾಗಿದೆ. ಆಗಮಿಸಿದ ಅವರು ಸ್ನೇಹಿತರು ಮತ್ತು ಬಂಧುಗಳು ಎಲ್ಲರ ಮೂಲಕ ಅವರಿಗೆ ಅರ್ಪಣೆ ಮಾಡಿದ ಫಲ ಮತ್ತು ಲಾಜ ಎನ್ನುತ್ತಾರೆ ನಮ್ಮ ಸಂಸ್ಕೃತದಲ್ಲಿ ಅದನ್ನು ಪೂರಿ ಎನ್ನುತ್ತಾರೆ. ಸ್ಪಂದನಾ ಅವರಿಗೆ ಸದ್ಗತಿ ಸಿಗಲಿ ಎಂದು ಅವುಗಳನ್ನು ಅರ್ಪಣೆ ಮಾಡಿ ಆ ಅಸ್ತಿಯನ್ನು ಕಾವೇರಿ ಜಲದಲ್ಲಿ ಅರ್ಪಣೆ ಮಾಡಿದ್ದಾರೆ. ಆದಷ್ಟು ಧಾರ್ಮಿಕ ಸ್ಥಳದಲ್ಲಿ ಈ ಪೂಜೆ ಮಾಡಬೇಕು, ಬಂದಿದ್ದು ತಡವಾದರೂ ಶ್ರದ್ಧೆಯಿಂದ ಮಾಡಿದ್ದಾರೆ' ಎಂದು ಪೂಜಾರಿಗಳು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. 

'ನಕ್ಷತ್ರ ಹೋಮ ಮಾಡಲು ಒಂದು ಕಾರಣವಿದೆ. ಸ್ಪಂದನಾ ತೀರಿಕೊಂಡಾಗ ಧನಿಷ್ಟಾ ಪಂಚಕ ನಕ್ಷತ್ರ ಮತ್ತು ತ್ರಿಪಾದಿ ನಕ್ಷತ್ರಗಳು ಅಂತ ಇದೆ...ಒಂದು ವೇಳೆ ಧನಿಷಾ ಪಂಚಕ ನಕ್ಷತ್ರದಲ್ಲಿ ವ್ಯಕ್ತಿ ತೀರಿಕೊಂಡರೆ ಅದು ಮನೆಯಲ್ಲಿ ಆಗಿದ್ದರೆ 5 ತಿಂಗಳುಗಳ ಕಾಲ ಮನೆ ಬಿಡಬೇಕು ಅಂತಿದೆ ಆದರೆ ಸ್ಪಂದನಾ ಮನೆಯಲ್ಲಿ ತೀರಿಕೊಂಡಿಲ್ಲ ಆದರೂ ದೋಷ ಪರಿಹಾರ ಆಗಬೇಕು ಎಂದು ಉತ್ತರಾಭಾದ್ರ ನಕ್ಷತ್ರದಲ್ಲಿ ಹೋಮ ಮಾಡಲಾಗಿದೆ. ವಿಜಯ್ ಅವರು ಮನೆ ಬಿಡುವ ಅಗತ್ಯವಿಲ್ಲ ಏಕೆಂದರೆ ಸ್ಪಂದನಾ ಹೊರಗಡೆ ಹೋದಾಗ ತೀರಿಕೊಂಡಿರುವುದು. ಅವರು ಕುಟುಂಬಕ್ಕೆ ಯಾವ ತೊಂದರೆ ಆಗುವುದಿಲ್ಲ ಏಕೆಂದರೆ ಸಂಸ್ಕಾರವನ್ನು ಕ್ರಮವಾಗಿ ಮಾಡಲಾಗಿದೆ' ಎಂದು ಪೂಜಾರಿ ಹೇಳಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡೆವಿಲ್ ಸಿನಿಮಾ ಬಿಡುಗಡೆಗೂ ಮುನ್ನವೇ ದರ್ಶನ್‌ಗೆ ಗುಡ್ ನ್ಯೂಸ್; ಅಭಿಮಾನಿಗಳೂ ಫುಲ್ ಖುಷ್!
ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?