ಸೈಲೆಂಟಾಗಿ ಡೈರಿ ಬರೆದಿಟ್ಟ ಸ್ಪಂದನಾ; ಗುಟ್ಟು ಬಿಚ್ಚಿಟ್ಟ ಸೋದರಮಾವ

Published : Aug 17, 2023, 10:18 AM IST
ಸೈಲೆಂಟಾಗಿ ಡೈರಿ ಬರೆದಿಟ್ಟ ಸ್ಪಂದನಾ; ಗುಟ್ಟು ಬಿಚ್ಚಿಟ್ಟ ಸೋದರಮಾವ

ಸಾರಾಂಶ

ಅಚ್ಚು ಮುಖದಲ್ಲಿ ಕಾಂತಿ ಇದ್ದು ಆ ದೇವರು ಕರೆಸಿಕೊಂಡಿದ್ದಾರೆ ಎಂದು ಸ್ಪಂದನಾ ಸೋದರ ಮಾವ ಮಾತನಾಡಿದ್ದಾರೆ. 


ಸ್ಪಂದನಾ ವಿಜಯ್ ರಾಘವೇಂದ್ರ 11ನೇ ದಿನ ವೈಕುಂಠ ಸಮಾರಾಧನೆ ಮಲ್ಲೇಶ್ವರಂನ ಮೈದಾನದಲ್ಲಿ ನಡೆಯಿತ್ತು. ಕುಟುಂಬಸ್ಥರು, ಆಪ್ತರು ಮತ್ತು ಸಿನಿ ಸ್ನೇಹಿತರು ಭಾಗಿಯಾಗಿದ್ದರು. ಈ ವೇಳೆ ಸ್ಪಂದನಾ ನೆನೆದು ಕಣ್ಣೀರಿಟ್ಟವರೇ ಹೆಚ್ಚು. ಅಲ್ಲದೆ ಸ್ಪಂದನಾ ತಮ್ಮ ಕನಸುಗಳನ್ನು ಡೈರಿನಲ್ಲಿ ಬರೆಯುತ್ತಿದ್ದರಂತೆ. ಈ ವಿಚಾರವನ್ನು ಸ್ವತಃ ಅವರ ಸೋದರಮಾವ ಹೇಳಿದ್ದಾರೆ.

'ವಿಜಯ್ ರಾಘವೇಂದ್ರ ಅವರಿಗೆ ಪ್ರಪಂಚದಲ್ಲಿ ಅತ್ಯಂತ ಪ್ರೀತಿ ಅಂದ್ರೆ ಅದು ಸ್ಪಂದನಾ ಮತ್ತು ಮಗ.  ಇಡೀ ಕುಟುಂಬವನ್ನು ತಮ್ಮ ಕುಟುಂಬದ ಎಂದು ವಿಜಯ್ ರಾಘವೇಂದ್ರ ಪ್ರೀತಿ ಮಾಡುತ್ತಿದ್ದರು ಆದರೆ ಹೆಚ್ಚಿನ ಪ್ರೀತಿ ಅಮರ ಪ್ರೇಮಾ ಅನ್ಯೋನ್ಯತೆ ವಿಶ್ವಾಸ ಅವರಿಬ್ಬರಲ್ಲಿ ಇತ್ತು. ಹೆಚ್ಚು ಸಮಾಜದಲ್ಲಿ ವಿಜಯ್ ತೊಡಗಿಸಿಕೊಳ್ಳಬೇಕು ಎಂದು ಸ್ಪಂದನಾ ಸಪೋರ್ಟ್ ಮಾಡುತ್ತಿದ್ದಳು. ಸ್ಪಂದನಾಗೆ ನಿರ್ಮಾಪಕಿ ಆಗಬೇಕು ಹಲವು ತಂತ್ರಜ್ಞರಿಗೆ ಕೆಲಸ ಕೊಡಬೇಕು ಕಲಾವಿದರಿಗೆ ಆಸರೆ ಆಗಬೇಕು ಅನ್ನೋ ಆಸೆ ಇತ್ತು ಅಂತ ಡೈರಿಯಲ್ಲಿ ಬರೆದಿದ್ದಾಳೆ. ನಾನು ಡೈರಿಯನ್ನು ನೋಡಿಲ್ಲ ಸದ್ಯಕ್ಕೆ ಎಲ್ಲರು ದುಖಃದಲ್ಲಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಆ ಡೈರಿಯಲ್ಲಿ ಏನಿತ್ತು ಆಕೆ ಅಸೆಗಳು ಏನೆಂದು ನೋಡುತ್ತೇವೆ' ಎಂದು ಸೋದರಮಾವ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ.

ಬೊಂಬೆಗೆ ಆಹ್ವಾನಿಸಿ, ಮತ್ತೆ ಸುಟ್ಟಿದ್ದಾರೆ, 5 ತಿಂಗಳು ಮನೆ ಬಿಡ ಬೇಕಿಲ್ಲ; ಸ್ಪಂದನಾ ಸಂಸ್ಕಾರದ ಬಗ್ಗೆ ಪೂಜಾರಿ

'ಊರಿನಲ್ಲಿ ಯಾವ ಕೆಲಸ ಕಾರ್ಯಕ್ರಮಗಳಿದ್ದರೂ ಸ್ಪಂದನಾ ಬಂದು ಭಾಗವಹಿಸುತ್ತಿದ್ದಳು. ಇವತ್ತು ಅಚ್ಚು ಇಲ್ಲ ಎಂದು ಹೇಳಲು ಬೇಸರವಾಗುತ್ತದೆ ತುಂಬಾ ವ್ಯವಸ್ಥಿತ ಶಿಸ್ತು ಬದ್ದ ಹುಡುಗಿ ಆಕೆ. ಅವಳ ಹೆಸರನ್ನು ನಾವು ಅಚ್ಚು ಎಂದು ಕರೆಯುತ್ತಿದ್ದೆವು ಹಾಗೆ ಎಲ್ಲರಿಗೂ ಅಚ್ಚುಮೆಚ್ಚು ಆಗುತ್ತಿದ್ದಳು. ಕೊನೆ ಮಗಳ ಮಗಳು ಎಂದು ನಮ್ಮ ತಾಯಿ ತುಂಬಾ ಪ್ರೀತಿಸುತ್ತಿದ್ದರು. ವಿಜಯ್ ರಾಘವೇಂದ್ರ ಅವರು ಕೂಡ ತುಂಬಾ ಒಳ್ಳೆಯ ವ್ಯಕ್ತಿ. ಯಾವುದೇ ಕಾರ್ಯಕ್ರಮ ಇದ್ದರೂ ನಮ್ಮ ಊರಿಗೆ ಬಂದು ಉಳಿಯುತ್ತಿದ್ದರು. ಅಲ್ಲಿಗೆ ಬಂದರೆ ಖುಷಿಯಾಗುತ್ತಿದ್ದರು ಅಜ್ಜಿ ಮನೆಯಲ್ಲಿ ವಾಸಿಸುತ್ತಿರುವುದೇ ಖುಷಿ ಎನ್ನುತ್ತಿದ್ದರು. ಥೈಲ್ಯಾಂಡ್‌ನಲ್ಲಿ ಸ್ಪಂದನಾ ತೀರಿಕೊಂಡರೂ ಬೆಂಗಳೂರಿನಲ್ಲಿ ಆಕೆ ಅನೇಕರು ಕಂಬನಿ ಮಿಡಿದಿದ್ದಾರೆ. ಸ್ಪಂದನಾ ಮಗುವಾಗಿ ಬಂದಳು ತಾಯಿಯಾಗಿದ್ದಳು ಶಕ್ತಿ ದೇವತೆಯಾಗಿ ಹೋಗಿದ್ದಾಳೆ. ಅಗಲಿ ನಾಲ್ಕು ದಿನ ಆದ ಮೇಲೆನೂ ಆಕೆ ಮುಖದಲ್ಲಿ ಇದ್ದ ಕಳೆ ನೋಡಿದರೆ ದೇವರೇ ಕಳುಹಿಸಿ ದೇವರೇ ಕರೆದುಕೊಂಡಿದ್ದಾನೆ' ಎಂದು ಸೋದರಮಾವ ಹೇಳಿದ್ದಾರೆ. 

ವಿಜಯ್ ರಾಘವೇಂದ್ರ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಮರು ಪ್ರಶ್ನೆ ಹಾಕಿದ ವಿಜಯ್ ದೇವರಕೊಂಡ!

'ಅಚ್ಚು ಅಕ್ಕ ಕಳೆದ ಬಾರಿ ಊರಿಗೆ ಬಂದಾಗ 3 ತಿಂಗಳಿದ್ದರು. ನಮ್ಮನ್ನು ಕೆಲಸವರ ರೀತಿ ನೋಡುತ್ತಿರಲಿಲ್ಲ ತುಂಬಾ ಖುಷಿಯಿಂದ ಮಾತನಾಡಿಸುತ್ತಿದ್ದರು ಮನೆಯಲ್ಲಿ ಜನ ಹೆಚ್ಚಾದರೆ ಅವರೇ ಬಂದು ಅಡುಗೆ ಮಾಡಲು ಸಹಾಯ ಮಾಡುತ್ತಿದ್ದರು. ಟೀ ಕಾಫಿ ನಾನೇ ಕೊಡುತ್ತೀನಿ ನೀವು ಬೇರೆ ಕೆಲಸ ಮಾಡಿಕೊಳ್ಳಿ ಎನ್ನುತ್ತಿದ್ದರು. ಅಕ್ಕ ಡೈರಿ ಬರೆಯುತ್ತಿದ್ದರು ಅದರಲ್ಲಿ ಏನಿದೆ ಎಂದು ನನಗೆ ಗೊತ್ತಿಲ್ಲ ಆದರೆ ಅವರ ಆಸೆಗಳು ತುಂಬಾ ಇತ್ತಂತೆ' ಎಂದು ಬೆಳ್ತಂಗಡಿ ಮನೆ ಕೆಲಸವರು ಮಾತನಾಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್