ಪ್ರೀತಿಯ ಪತ್ನಿ ಫೋಟೋ ಶೇರ್‌ ಮಾಡಿ ಸವಿನೆನಪು ಹಂಚಿಕೊಂಡ ವಿಜಯರಾಘವೇಂದ್ರ; ನೆಟ್ಟಿಗರಿಂದ ಕಂಬನಿ

By Shriram Bhat  |  First Published Apr 20, 2024, 3:40 PM IST

ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು 'ನಾನು ನೋಡಿದ ಜೋಡಿಗಳಲ್ಲಿ ಇವರದು ತುಂಬಾ ಅದ್ಭುತವಾದ ಪ್ರೀತಿಯ ಹೊಂದಾಣಿಕೆಯ ಸೂಪರ್ ಜೋಡಿ. ಆದರೆ ಆ ದೇವರಿಗೂ ಸಹಿಸಲಿಕ್ಕೆ ಆಗಲಿಲ್ಲವೇನು? ಆದರೆ ಪ್ರೀತಿಗೆ ಸಾವಿಲ್ಲ..' ಎಂದು ಕಾಮೆಂಟ್ ಹಾಕಿದ್ದಾರೆ.


ನಟ ವಿಜಯರಾಘವೇಂದ್ರ  (Vijay Raghavendra) ಇಂದು, ಅಂದರೆ 20 ಏಪ್ರಿಲ್ 2024ರಂದು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ತಮ್ಮ ಹಾಗೂ ಸ್ಪಂದನಾರ (Spandana) ಎಂಗೇಜ್‌ಮೆಂಟ್ (Engagement Photo)ಸವಿನೆನಪನ್ನು ಹಂಚಿಕೊಂಡಿದ್ದಾರೆ. 'ಬದುಕು ನಿಶ್ಚಯಿಸಿದ ನಿಶ್ಚಿತಾರ್ಥ' ಎಂಬ ಟ್ಯಾಗ್‌ಲೈನ್ ಕೊಟ್ಟು ಸ್ಪಂದನಾ ಜೊತೆಯಿದ್ದ, ತಮ್ಮ 2007ರ ಎಂಗೇಜ್‌ಮೆಂಟ್ ಫೋಟೋವನ್ನು ಶೇರ್ ಮಾಡಿದ್ದಾರೆ. ಅದಕ್ಕೆ ಸಹಜವಾಗಿಯೇ ಬಹಳಷ್ಟು ಕಾಮೆಂಟ್‌ಗಳು ಹರಿದುಬಂದಿವೆ. 

ಸ್ಯಾಂಡಲ್‌ವುಡ್ ನಟ ವಿಜಯರಾಘವೇಂದ್ರರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ (Spandana Vijay Raghavendra) ಅವರು ಕಳೆದ ವರ್ಷ ಆಗಷ್ಟ್ 7 ರಂದು (07 ಆಗಷ್ಟ್ 2023) ರಂದು ಥೈಲ್ಯಾಂಡ್‌ (Thailand)ನ ಬ್ಯಾಂಕಾಕ್‌ (Bangkok)'ನಲ್ಲಿ ಹೃದಯ ಸ್ಥಂಬನ'ದಿಂದ ನಿಧನರಾದರು. ಸ್ಯಾಂಡಲ್‌ವುಡ್ ಸೇರಿದಂತೆ, ಇಡೀ ಕನ್ನಡನಾಡು ಅವರ ಸಾವಿಗೆ ಶೋಕತಪ್ತವಾಗಿ ಮರುಗಿತು. ಸ್ಪಂದನಾರ ಪತಿ, ನಟ ವಿಜಯರಾಘವೇಂದ್ರ ಅವರಂತೂ ಅಕ್ಷರಶಃ ಕುಸಿದುಬಿದ್ದಿದ್ದರು. ಈಗಲೂ ಅವರು ತಮ್ಮ ಪ್ರೀತಿಯ ಪತ್ನಿಯ ಸಾವಿಗಾಗಿ ಕೊರಗುತ್ತಲೇ ಇದ್ದಾರೆ ಎನ್ನಲಾಗುತ್ತಿದೆ.

Tap to resize

Latest Videos

ಕಲ್ಟ್ ಬಿಟ್ಟು 'ಪೃಥ್ವಿ ಅಂಬಾರ್' ಜತೆ ಸೇರಿ ಫ್ಯಾಮಿಲಿ ಕಥೆ ಹೇಳಲು ಸಜ್ಜಾದ ಚಂದ್ರಶೇಖರ್ ಬಂಡಿಯಪ್ಪ 

ಇಂದು, 17 ವರ್ಷಗಳ ಹಿಂದಿನ, ಇದೇ ದಿನದಂದು ನಡೆದಿದ್ದ ತಮ್ಮಿಬ್ಬರ ಎಂಗೇಜ್‌ಮೆಂಟ್ ಫೋಟೋವನ್ನು ಶೇರ್ ಮಾಡಿಕೊಂಡು ಸವಿನೆನಪು ಹಂಚಿಕೊಂಡಿದ್ದಾರೆ. ಅದನ್ನು ನೋಡಿ ಹಲವರು ಕಣ್ಣೀರಾಗಿದ್ದಾರೆ. ಬಹಳಷ್ಟು ಜನರು ಅವರ ಕುಟುಂಬದ ದುಃಖದಲ್ಲಿ ತಾವೂ ಭಾಗಿಯಾಗುವುದಾಗಿ ಹೇಳಿಕೊಂಡಿದ್ದಾರೆ. ಕೆಲವರು, ದೇವರು ತಮಗೆ ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ಬೇಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಭಿನ್ನ ಕಾಮೆಂಟ್‌ಗಳು ಹರಿದುಬಂದಿವೆ.

ಈಶ್ವರಿ 'ಶಾಂತಿ ಕ್ರಾಂತಿ' ಗಾಸಿಪ್‌ಗೆ ಇತಿಶ್ರೀ ಹಾಡಿದ ರವಿಚಂದ್ರನ್; ವೀರಾಸ್ವಾಮಿ ಹಾಗೆ ಹೇಳ್ಬಿಟಿದ್ರಾ?

ಸೋಷಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಯೊಬ್ಬರು 'ನಾನು ನೋಡಿದ ಜೋಡಿಗಳಲ್ಲಿ ಇವರದು ತುಂಬಾ ಅದ್ಭುತವಾದ ಪ್ರೀತಿಯ ಹೊಂದಾಣಿಕೆಯ ಸೂಪರ್ ಜೋಡಿ. ಆದರೆ ಆ ದೇವರಿಗೂ ಸಹಿಸಲಿಕ್ಕೆ ಆಗಲಿಲ್ಲವೇನು? ಆದರೆ ಪ್ರೀತಿಗೆ ಸಾವಿಲ್ಲ..' ಎಂದು ಕಾಮೆಂಟ್ ಹಾಕಿದ್ದಾರೆ. ಇನ್ನೊಬ್ಬರು 'ಎಂದು ಮರೆಯಲಾಗದ ಜೋಡಿ ಮಿಸ್ ಯು ಸೋ ಮಚ್ ಅಕ್ಕ..' ಎಂದು ಬರೆದಿದ್ದರೆ, ಮತ್ತೊಬ್ಬರು 'ಸವಿ ನೆನಪುಗಳು ನಿಮ್ಮ ಜೊತೆ ಸದಾ ಜೊತೆಯಾಗಿಯೇ ಸಾಗಿವೆ..' ಎಂದು ಬರೆದಿದ್ದಾರೆ. 

ವಿಷ್ಣುವರ್ಧನ್‌ಗೆ ಟಾಂಗ್ ಕೊಡಲು 'ದ್ರೋಹಿ' ಮಾಡಿದ್ರು ದ್ವಾರಕೀಶ್; ಯಾಕೆ ಮೂಡಿತ್ತು ವೈಮನಸ್ಯ?

ಒಟ್ಟಿನಲ್ಲಿ, ನಟ ವಿಜಯರಾಘವೇಂದ್ರ ಅವರು ಅಗಲಿರುವ ತಮ್ಮ ಪ್ರೀತಿಯ ಪತ್ನಿಯ ಫೋಟೋ ಹಾಕಿ, ಎಂಗೇಜ್‌ಮೆಂಟ್ ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಅವರಿಬ್ಬರ ಅಭಿಮಾನಿಗಳು ಸೂಕ್ತವಾಗಿ ರೆಸ್ಪಾನ್ಸ್ ಮಾಡಿದ್ದಾರೆ. ಅಂದು, ಇಂದು ಹಾಗು ಎಂದೆಂದಿಗೂ ಕನ್ನಡನಾಡು ಈ ಸ್ವೀಟ್‌ ಕಪಲ್‌ ಮರೆಯಲು ಅಸಾಧ್ಯ.

 

 

click me!