
ಕನ್ನಡ ಚಿತ್ರರಂಗದ ಸಿಂಪಲ್ ಹಾಗೂ ಹಂಬಲ್ ನಟ ವಿಜಯ್ ರಾಘವೇಂದ್ರ ಅಭಿನಯದ 50ನೇ ಸಿನಿಮಾ ‘ಸೀತಾರಾಮ್ ಬಿನೋಯ್’ ಇಂದು (ಆಗಸ್ಟ್ 15) 5.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಸಿನಿಮಾ ಆಗಸ್ಟ್ 16ರಂದು ಬಿಡುಗಡೆಯಾಗಲಿದ್ದು, ಥಿಯೇಟರ್‌ಗಿಂತ ಮೊದಲೇ ಟಿವಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಎಂಬ ಹೆಗ್ಗಳಿಕೆ ಹೊಂದಿದೆ.
ದೇವಿಪ್ರಸಾದ್ ಶೆಟ್ಟಿ ನಿರ್ದೇಶನದ ಚಿತ್ರವಿದು. ದೇವಿಪ್ರಸಾದ್ ಶೆಟ್ಟಿ, ಸಾತ್ವಿಕ್ ಹೆಬ್ಬಾ, ಎಂಆರ್‌ಪಿ ಸಂಸ್ಥೆ ನಿರ್ಮಿಸಿದೆ. ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಯೂಟ್ಯೂಬ್ ಚಾನಲ್‌ನಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಮೆಚ್ಚುಗೆ ಗಳಿಸಿತ್ತು. ಚಿತ್ರದಲ್ಲಿ ವಿಜಯ್ ರಾಘವೇಂದ್ರ ಜೊತೆಗೆ ಶ್ರೀಹರ್ಷ, ನಾಗರಾಜ್, ಸಾತ್ವಿಕ್ ಹೆಬ್ಬಾರ್, ದೇವಿ ಪ್ರಕಾಶ್, ಅಕ್ಷತಾ, ಬಿಂದು, ಸುರೇಶ್ ಹಾಗೂ ಮಂಜು ಅಭಿನಯಿಸಿದ್ದಾರೆ.
ಸಿನಿಮಾಗಳಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲೂ ವಿಜಯ್ ರಾಘವೇಂದ್ರ ತೊಡಗಿಸಿಕೊಂಡಿದ್ದಾರೆ. ಗುಲಾಬ್ ಜಾಮುನ್, ಸ್ವೀಟ್ ಪೇಡ ಎಂದು ಅಡ್ಡ ಹೆಸರು ಕರೆಸಿಕೊಂಡು ವೀಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಇದೇ ಮೊದಲ ಬಾರಿ ಚಿತ್ರಮಂದಿರಕ್ಕೂ ಮುನ್ನ ಟಿವಿಯಲ್ಲಿ ಪ್ರಸಾರವಾಗುತ್ತಿರುವುದು. ಇಡೀ ಚಿತ್ರತಂಡಕ್ಕೆ ಶುಭವಾಗಲಿ ಎಂದು ಆರೈಸೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.