ಮಗನಿಗಾಗಿ ರಾತ್ರಿಯಿಡೀ ನಿದ್ದೆಗೆಟ್ಟ ನಟ ವಿಜಯ ರಾಘವೇಂದ್ರ: ವಿಧಿಯ ಆಟಕ್ಕೆ ಅಭಿಮಾನಿಗಳ ಕಂಬನಿ

Published : Feb 07, 2025, 05:35 PM ISTUpdated : Feb 08, 2025, 12:30 PM IST
ಮಗನಿಗಾಗಿ  ರಾತ್ರಿಯಿಡೀ ನಿದ್ದೆಗೆಟ್ಟ ನಟ  ವಿಜಯ ರಾಘವೇಂದ್ರ: ವಿಧಿಯ ಆಟಕ್ಕೆ ಅಭಿಮಾನಿಗಳ ಕಂಬನಿ

ಸಾರಾಂಶ

ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಪೋಷಕರ ಬೆಂಬಲ ಮುಖ್ಯ. ನಟ ವಿಜಯ್ ರಾಘವೇಂದ್ರ ತಮ್ಮ ಮಗನ ಪರೀಕ್ಷೆಗಾಗಿ ರಾತ್ರಿ ಜಾಗರಣೆ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ಸ್ಪಂದನಾ ಅಗಲಿಕೆಯ ನಂತರ ಮಗನಿಗಾಗಿ ಬದುಕು ಮುಡಿಪಾಗಿಟ್ಟಿರುವ ವಿಜಯ್ ರಾಘವೇಂದ್ರ ಅವರ ಕಾಳಜಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೌರ್ಯನ ಉಜ್ವಲ ಭವಿಷ್ಯಕ್ಕಾಗಿ ಹಾರೈಸಿದ್ದಾರೆ.

ಸಿನಿಮಾ ಕ್ಷೇತ್ರದ ತಾರೆಯರೇ ಆಗಿರಲಿ, ಯಾವುದೇ ಕ್ಷೇತ್ರದ ಸೆಲೆಬ್ರಿಟಿಗಳೇ ಆಗರಲಿ, ಶತಕೋಟ್ಯಧಿಪತಿಯೇ ಆಗಿರಲಿ... ಅಪ್ಪ- ಅಮ್ಮ ಎನ್ನುವ ಮಾತು ಬಂದಾಗ ಅವರು ಅವರ ಮಕ್ಕಳಿಗೆ ಅಪ್ಪ-ಅಮ್ಮನೇ. ಮನೆಯಲ್ಲಿ ಕಾಲಿಗೊಬ್ಬ, ಕೈಗೊಬ್ಬ ಆಳು-ಕಾಳುಗಳು ಇದ್ದರೂ ಬಹುತೇಕ ಗಣ್ಯರು ಕೂಡ ತಮ್ಮ ಮಕ್ಕಳಿಗಾಗಿ ವೈಕ್ತಿಗತ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಆ ಕ್ಷಣದಲ್ಲಿ ಅಪ್ಪ-ಅಮ್ಮನ ಪಾತ್ರ ನಿಭಾಯಿಸುತ್ತಾರೆ. ಹೇಳಿ-ಕೇಳಿ ಇರುವ ಪರೀಕ್ಷೆಯ ಸಮಯ. ಮಕ್ಕಳು ವರ್ಷಪೂರ್ತಿ ಓದಿದ್ದರೂ, ಪರೀಕ್ಷೆ ಸಮಯದಲ್ಲಿ ಬಹುತೇಕ ಎಲ್ಲಾ ವಿದ್ಯಾರ್ಥಿಗಳೂ ಓದನ್ನು ಜೋರು ಮಾಡುತ್ತಾರೆ. ಕೆಲವರು ನಿದ್ದೆಗೆಟ್ಟು ಓದುತ್ತಾರೆ. ಅದೇ ಸಂದರ್ಭದಲ್ಲಿ ಮಕ್ಕಳನ್ನು ಉತ್ತೇಜಿಸಲು ಹಲವು ಪಾಲಕರು ಕೂಡ ಮಕ್ಕಳ ಜೊತೆ ನಿದ್ದೆಗೆಡುವುದು ಉಂಟು.

ಸಾಮಾನ್ಯವಾಗಿ ಮನೆಗಳಲ್ಲಿ ಅಮ್ಮಂದಿರೇ ಮಕ್ಕಳ ಸಲುವಾಗಿ ನಿದ್ದೆಗೆಡುವುದು ಸಹಜ. ಆಕೆ ನೌಕರಿಗೆ ಹೋಗುತ್ತಿರಲಿ ಇಲ್ಲವೇ ಮನೆಕೆಲಸಗಳಲ್ಲಿ ಬಿಜಿ ಇರಲಿ, ನಸುಕಿನಲ್ಲಿಯೇ ಏಳುವ ಅನಿವಾರ್ಯತೆಯೂ ಇರಲಿ... ಕುಟುಂಬ, ಮಕ್ಕಳ ವಿಷಯ ಬಂದಾಗ ಎಲ್ಲರ ಮನೆಯಲ್ಲಿ ಅಲ್ಲದಿದ್ದರೂ ಬಹುತೇಕರ ಮನೆಯಲ್ಲಿ ಅಮ್ಮಂದೇ ಕಾಳಜಿ ಹೆಚ್ಚು, ಅದರಲ್ಲಿಯೂ ಮಕ್ಕಳು ಪರೀಕ್ಷೆಯ ಸಮಯದಲ್ಲಿ ನಿದ್ದೆಗೆಟ್ಟು ಓದುತ್ತಿದ್ದರೆ, ಅವರಿಗೆ ಮಧ್ಯರಾತ್ರಿ ಬೇಕಾದ ತಿಂಡಿ, ಪಾನೀಯ ಪೂರೈಕೆ ಮಾಡಬೇಕಲ್ಲ, ಅದಕ್ಕಾಗಿಯಾದರೂ ಅಮ್ಮಂದಿರು ಎದ್ದಿರುತ್ತಾರೆ.

ಮದುವೆಯ ಬಿಗ್​ ಅಪ್​ಡೇಟ್​ ಕೊಟ್ಟ ಬಿಗ್​ಬಾಸ್​ ಐಶ್ವರ್ಯಾ ಸಿಂಧೋಗಿ: ಹುಡುಗನ ಡಿಟೇಲ್ಸ್​ ಹೇಳಿದ್ದು ಹೀಗೆ...

ಇದೀಗ ನಟ ವಿಜಯ ರಾಘವೇಂದ್ರ ಅವರೂ ನಿದ್ದೆಗೆಟ್ಟು ಒಂದು ವಿಡಿಯೋ ಮಾಡಿ ಅದನ್ನು ಅಪ್​ಲೋಡ್​  ಮಾಡಿದ್ದಾರೆ. ಅವರು ಅದರಲ್ಲಿ ನಿದ್ದೆಗೆಟ್ಟು ಕಾಯುತ್ತಿರುವುದನ್ನು ನೋಡಬಹುದು. ಅವರು ಮಾತಿನಲ್ಲಿ ಏನೂ ಹೇಳದಿದ್ದರೂ, ಅವರ ಹಿಂದುಗಡೆ ಮಗ ಓದುತ್ತಿರುವುದನ್ನು ನೋಡಬಹುದಾಗಿದೆ. ಪರೀಕ್ಷೆಯ ಸಮಯ ಎಂದು ವಿಜಯ್​ ರಾಘವೇಂದ್ರ ಶೀರ್ಷಿಕೆ ಕೊಟ್ಟಿರು ಕಾರಣ, ಮಗನಿಗಾಗಿ ಅಪ್ಪ ರಾತ್ರಿ ಜಾಗರಣೆ ಮಾಡುತ್ತಿರುವುದು ತಿಳಿಯುತ್ತದೆ.

ಅಂದಹಾಗೆ ವಿಜಯ ರಾಘವೇಂದ್ರ ಮತ್ತು ಸ್ಪಂದನಾ 2007ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಗ ಶೌರ್ಯನಿಗೆ ಪಾಲಕರಾಗಿದ್ದಾರೆ. ಅದರೆ ಸ್ಪಂದನಾ ಅವರು 2023ರಲ್ಲಿ ಎಲ್ಲರನ್ನೂ ಬಿಟ್ಟು ಅಗಲಿದರು. ಇದೀಗ ಮಗನಿಗಾಗಿ ಜೀವನವನ್ನು ಮುಡುಪಾಗಿಟ್ಟಿದ್ದಾರೆ ವಿಜಯ್​ ಅವರು. ಮಗನ ಪರೀಕ್ಷೆಯ ಸಂದರ್ಭದಲ್ಲಿ ವಿಜಯ್​ ರಾಘವೇಂದ್ರ ಜೊತೆ ಪತ್ನಿ ಸ್ಪಂದನಾ ಕೂಡ ಹೀಗೆ ಕಾಳಜಿ ತೋರುತ್ತಿದ್ದರು. ವಿಧಿಯ ಆಟದ ಮುಂದೆ ಏನು ಹೇಳಬೇಕು ಎಂದು ಅಭಿಮಾನಿಗಳು ವಿಜಯ್​ ಅವರ ವಿಡಿಯೋಗೆ ಕಮೆಂಟ್​ ಮೂಲಕ ಕಂಬನಿ ಮಿಡಿಯುತ್ತಿದ್ದಾರೆ. ಮಗ ಶೌರ್ಯನಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸುತ್ತಿದ್ದಾರೆ. ಆತ ಕೂಡ ಅಪ್ಪನಂತೆ ಸಿನಿಮಾದಲ್ಲಿ ಮಿಂಚಲಿ ಎನ್ನುವುದು ಅಭಿಮಾನಿಗಳ ಹಾರೈಕೆ. 

ತಮ್ಮದೇ ಫಸ್ಟ್​ ನೈಟ್​ ವಿಡಿಯೋ ನೋಡಿ ನಾಚಿ ನೀರಾದ ಕಿಚ್ಚ ಸುದೀಪ್​! ತುಂಟತನಕ್ಕೆ ಫ್ಯಾನ್ಸ್​ ಫಿದಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ