
ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ಸತೀಶ್ ನೀನಾಸಂ ಕಾಂಬಿನೇಷನ್‌ನ ‘ಪೆಟ್ರೋಮ್ಯಾಕ್ಸ್’ ಚಿತ್ರದ ಡಬ್ಬಿಂಗ್ ಮುಗಿದಿದೆ. ವಿಡಿಯೋ ಹಾಗೂ ಫೋಟೋ ಹಂಚಿಕೊಳ್ಳುವ ಮೂಲಕ ಚಿತ್ರದ ಬಗ್ಗೆ ಸತೀಶ್ ಅಪ್ಡೇಟ್ ನೀಡುತ್ತಲೇ ಇರುತ್ತಾರೆ.
'ನಾಲ್ಕು ಜನ ಅನಾಥರು, ಜೊತೆಗೆ ಮೈಸೂರು, ಮೀನಾಕ್ಷಿಯ ತವರೂರು. ನೀವು ಕಂಡಿರದ, ಕಾಣದ ಕಥೆ 'ಪೆಟ್ರೋಮ್ಯಾಕ್ಸ್' ಎಂದು ಸತೀಶ್ ನೀನಾಸಂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾರೆ. ‘ನಗಿಸುತ್ತಲೇ ಒಂದು ಒಳ್ಳೆಯ ವಿಷಯ ಹೇಳಬೇಕು ಎಂಬುವುದು ನನ್ನ ಉದ್ದೇಶ. ಆ ನಿಟ್ಟಿನಲ್ಲಿ ಪೆಟ್ರೋಮ್ಯಾಕ್ಸ್ ಚಿತ್ರವನ್ನು ಕುಟುಂಬ ಸಮೇತರಾಗಿ ನೋಡಬಹುದು ಎನ್ನುವ ಭರವಸೆ ಕೊಡುತ್ತೇನೆ. ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡಲಿದ್ದೇವೆ. ನೀನಾಸಂ ಸತೀಶ್ ಹಾಗೂ ಹರಿಪ್ರಿಯಾ ಸೇರಿದಂತೆ ಎಲ್ಲ ಪಾತ್ರಧಾರಿಗಳು ಕತೆಗೆ ಸಂಪೂರ್ಣವಾಗಿ ನ್ಯಾಯ ಒದಗಿಸಿದ್ದಾರೆ,’ ಎನ್ನುತ್ತಾರೆ ನಿರ್ದೇಶಕ ವಿಜಯ್ ಪ್ರಸಾದ್.
ಪೆಟ್ರೋಮ್ಯಾಕ್ಸ್ ಓಟಿಟಿ ಬಿಡುಗಡೆಗೆ ಎಂದೇ ರೆಡಿ ಮಾಡಿರುವ ಸಿನಿಮಾ ಎಂದು ಈ ಹಿಂದೆ ವಿಜಯ್ ಪ್ರಸಾದ್ ಸಂದರ್ಶನದಲ್ಲಿ ಹೇಳಿದ್ದರು. 'ತೋತಾಪುರಿ' ಹಾಗೂ 'ಪೆಟ್ರೋಮ್ಯಾಕ್ಸ್' ನಂತರ 'ಪರಿಮಳ ಲಾಡ್ಜ್' ಬಾಗಿಲು ತೆಗೆಯಲು ರೆಡಿ ಆಗಿದ್ದಾರೆ. 'ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಭಾವನಾತ್ಮಕ ವಿಷಯ ಇದೆ. ಹಾಗಂತ ನಾನು ಬರೆದ 'ಸಿಲ್ಲಿ ಲಲ್ಲಿ' ಧಾರಾವಾಹಿ ಮರು ಜನ್ಮ ಅಂದು ಕೊಳ್ಳಬೇಡಿ. ಚಿತ್ರಕ್ಕೆ ಯಾರೂ ನಿರ್ಮಾಪಕರು ಬರಲಿಲ್ಲ ಅಂತ ನಾವೇ ನಿರ್ಮಾಪಕರು ಆಗಿದ್ದಲ್ಲ. ನಮಗೆ ದುಡಿಮೆಯ ಅಗತ್ಯವಿದೆ ಅಂತ ಸಿನಿಮಾ ಶುರು ಮಾಡಿದ್ದು. ಈ ರೀತಿ ಸಾಕಷ್ಟು ಸಣ್ಣ ಪುಟ್ಟ ಕತೆಗಳು ನನ್ನ ಬಳಿ ಇವೆ,' ಎಂದು ವಿಜಯ್ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.