
ಕಾಂತಾರ ಎಂದರೆ ದಟ್ಟಅಡವಿ ಎಂದರ್ಥ. ಕಠಿಣ ದಾರಿ ಎಂಬ ಅರ್ಥವೂ ಉಂಟು. ಅಡವಿ ನಿಗೂಢತೆಯನ್ನು ತನ್ನೊಗಿಟ್ಟುಕೊಂಡಿರುತ್ತದೆ. ಅದೇ ಥರ ಕಾಂತಾರ ಕೂಡ ನಿಗೂಢತೆಯನ್ನು ತನ್ನೊಳಗೆ ಇಟ್ಟುಕೊಂಡಿರುವ ಕತೆ ಅನ್ನುವುದು ರಿಷಬ್ ಶೆಟ್ಟಿಮಾತು. ಅರಣ್ಯ ಮತ್ತು ಮಾನವನ ನಡುವಿನ ಸಂಘರ್ಷದ ಕಥಾ ಹಂದರ ಹೊಂದಿರುವ ಸಿನಿಮಾ ಇದು. ಪ್ರಸ್ತುತ ಬಿಡುಗಡೆಯಾಗಿರುವ ಪೋಸ್ಟರಿನಲ್ಲಿ ಅರಣ್ಯವನ್ನು ಧರಿಸಿರುವ ದೈವದ ಕಾಲು, ಕಾಡ್ಗಿಚ್ಚು, ಕೋಣ ಓಡಿಸುತ್ತಿರುವ ತರುಣ, ದಿಕ್ಕೆಟ್ಟು ಹೋಗುತ್ತಿರುವ ಹಂದಿಗಳು ಕಾಣಿಸಿಕೊಳ್ಳುತ್ತವೆ. ಆ ಪ್ರಕಾರ ಹೇಳುವುದಾದರೆ ಈ ಸಿನಿಮಾದಲ್ಲಿ ದಕ್ಷಿಣ ಕನ್ನಡದ ಸಂಸ್ಕೃತಿ, ಸಂಪ್ರದಾಯವನ್ನು ಕಾಡುವಂತೆ ಚಿತ್ರಿಸಲಾಗುತ್ತದೆ.
ಇದೇ ಮೊದಲ ಬಾರಿಗೆ ಧೈರ್ಯ ಮಾಡಿ ನನ್ನ ನಿರ್ದೇಶನದ ಸಿನಿಮಾದಲ್ಲಿ ನಾನೇ ನಟಿಸುವ ಮನಸ್ಸು ಮಾಡಿದ್ದೇನೆ. ನಿಗೂಢ ಅರಣ್ಯದಲ್ಲಿ ಸಿಗುವುದೆಲ್ಲಾ ಅಚ್ಚರಿಯೇ. ಸದ್ಯ ಊರಲ್ಲಿದ್ದೇನೆ. ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗುತ್ತಿದ್ದೇವೆ.- ರಿಷಬ್ ಶೆಟ್ಟಿ
ನಿರ್ದೇಶಕ ರಿಷಬ್ ಶೆಟ್ಟಿಆ ಮಾತನ್ನು ಅನುಮೋದಿಸುತ್ತಲೇ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸುತ್ತಾರೆ. ‘ಎರಡು ವರ್ಷದ ಹಿಂದಿನಿಂದಲೂ ಹೊಂಬಾಳೆ ಫಿಲಂಸ್‌ಗೆ ಸಿನಿಮಾ ಮಾಡುವ ಮಾತುಕತೆ ನಡೆಯುತ್ತಿತ್ತು. ಆದರೆ ಒಂದು ಒಳ್ಳೆಯ ಕತೆ ಬೇಕಿತ್ತು. ಈ ಸಲ ಲಾಕ್‌ಡೌನ್ ಸಂದರ್ಭ ಊರಿಗೆ ಹೋದಾಗ ಈ ಕತೆ ಬರೆದೆ. ನನ್ನ ಊರು ಕುಂದಾಪುರದ ಕೆರಾಡಿಯಲ್ಲಿ ಬಹುತೇಕ ಚಿತ್ರೀಕರಣ ನಡೆಯುತ್ತದೆ. ಆ.27ರಿಂದ ಶೂಟಿಂಗ್ ಶುರು’ ಎನ್ನುತ್ತಾರೆ ರಿಷಬ್.
ರಿಷಬ್ ಶೆಟ್ಟಿಕನ್ನಡ ಚಿತ್ರರಂಗದ ಹೆಮ್ಮೆ. ಈಗಾಗಲೇ ಅವರು ತಮ್ಮ ನಿರ್ದೇಶನ ಚಾತುರ್ಯವನ್ನು ತೋರಿಸಿದ್ದಾರೆ. ಅವರ ಜೊತೆ ಸಿನಿಮಾ ಮಾಡುತ್ತಿರುವುದಕ್ಕೆ ಖುಷಿ ಇದೆ.- ವಿಜಯ್ ಕಿರಗಂದೂರು
ಸಿನಿಮಾದಲ್ಲಿ ರಿಷಬ್ ಶೆಟ್ಟಿಹೊರತಾಗಿ ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನುಳಿದ ವಿವರಗಳು ನಿಧಾನಕ್ಕೆ ಲಭ್ಯವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.