‘ದೃಶ್ಯ 2’ ಚಿತ್ರದಲ್ಲಿ ಆಘಾತದಿಂದ ಡಿಪ್ರೆಶನ್‌ಗೆ ತುತ್ತಾದ ಮಗಳ ಪಾತ್ರದಲ್ಲಿ ಆರೋಹಿ ನಾರಾಯಣ್ ನಟಿಸಿದ್ದಾರೆ. ರವಿಚಂದ್ರನ್ ಹಾಗೂ ನವ್ಯಾ ನಾಯರ್ ನಾಯಕ, ನಾಯಕಿ. ಪಿ ವಾಸು ನಿರ್ದೇಶನ, ಸಿ.ವಿ. ಸಾರಥಿ ನಿರ್ಮಾಪಕರಾಗಿರುವ ಚಿತ್ರದ ಶೂಟಿಂಗ್ ಬಗ್ಗೆ ಆರೋಹಿ ನೀಡಿದ ಅಪ್‌ಡೇಟ್ಸ್ ಇಲ್ಲಿವೆ.
- ದೃಶ್ಯ 2 ಚಿತ್ರದಲ್ಲಿ ನನ್ನದು ಆಘಾತದಲ್ಲಿರುವ ರವಿಚಂದ್ರನ್ ಅವರ ಹಿರಿಯ ಮಗಳ ಪಾತ್ರ. ಇಡೀ ಸಿನಿಮಾದಲ್ಲಿ ಬಹಳ ಮಹತ್ವದ ಪಾತ್ರ. ಅದನ್ನು ಅರ್ಥಮಾಡಿಕೊಂಡು ನಟಿಸೋದು ಚಾಲೆಂಜಿಂಗ್.
- ಬೆಂಗಳೂರಿನಲ್ಲಿ ಈ ಚಿತ್ರದ ಮಹತ್ವದ ಭಾಗಗಳ ಶೂಟಿಂಗ್ ಮುಕ್ತಾಯವಾಗಿದೆ. ಇಲ್ಲಿ ರವಿಚಂದ್ರನ್ ಸಾರ್ ಜೊತೆಗೆ ಹಿರಿಯ ನಟಿ ನವ್ಯಾ ನಾಯರ್, ಪ್ರಮೋದ್ ಶೆಟ್ಟಿ, ಶಿವಾಜಿ ಗಣೇಶನ್ ಮಗ ಶಿವಾಜಿ ಪ್ರಭು, ನನ್ನ ತಂಗಿ ಪಾತ್ರ ಮಾಡಿದವರು ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಸೆಟ್‌ನಲ್ಲಿ ಮನೆಯ ವಾತಾವರಣ ಇತ್ತು. ಖುಷಿಯಿಂದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೆ.
'ದೃಶ್ಯಂ 2' ಚಿತ್ರದಲ್ಲಿ ಡಿಪ್ರಷನ್‌ಗೆ ಒಳಗಾದ ಮಗಳ ಪಾತ್ರದಲ್ಲಿ ಆರೋಹಿ ನಾರಾಯಣ್!- ಮುಂದಿನ ಭಾಗದ ಶೂಟಿಂಗ್ ಕೊಡಗಿನಲ್ಲಿ ನಡೆಯಬೇಕಿದೆ. ಅಲ್ಲಿ ಅತಿಯಾದ ಮಳೆಯಿದ್ದ ಕಾರಣ ಸದ್ಯಕ್ಕೆ ಅಲ್ಲಿ ನಡೆಯಬೇಕಿದ್ದ ಶೂಟಿಂಗ್ ಕೊಂಚ ಕಾಲ ಮುಂದೆ ಹೋಗಿದೆ. ಜೊತೆಗೆ ನನಗೆ ಅನಾರೋಗ್ಯವೂ ಆಗಿತ್ತು. ಮಳೆ ಕಡಿಮೆ ಆಗಿ ಪರಿಸ್ಥಿತಿ ಸುಧಾರಿಸಿದ ಬಳಿಕ ಮುಂದಿನ ಭಾಗದ ಶೂಟಿಂಗ್‌ಗೆ ನಾವೆಲ್ಲ ಕೊಡಗಿಗೆ ಹೋಗಲಿದ್ದೇವೆ.
- ಹಿರಿಯ ನಟ ಅನಂತ್‌ನಾಗ್ ಸಾರ್ ಜೊತೆಗೆ ನನ್ನ ಕಾಂಬಿನೇಶನ್ ಇರಲಿಲ್ಲ. ಹೀಗಾಗಿ ಅವರ ಜೊತೆಗೆ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಸಿಗಲಿಲ್ಲ.