ಅಪರ್ಣಾ, ಜೀವನವನ್ನು ನೋಡಿದ ಪರಿಯೇ ಸೊಗಸು... ಸಂದರ್ಶನವೊಂದರ ವಿಡಿಯೋ ತುಣುಕೀಗ ವೈರಲ್​

Published : Jul 12, 2024, 04:20 PM IST
ಅಪರ್ಣಾ, ಜೀವನವನ್ನು ನೋಡಿದ ಪರಿಯೇ ಸೊಗಸು... ಸಂದರ್ಶನವೊಂದರ ವಿಡಿಯೋ ತುಣುಕೀಗ ವೈರಲ್​

ಸಾರಾಂಶ

ನಿರೂಪಕಿ ಅಪರ್ಣಾ ನಿಧನದ ಬೆನ್ನಲ್ಲೇ ಅವರು ಜೀವನವನ್ನು ಕಂಡ ಬಗೆಯ ವಿಡಿಯೋ ತುಣುಕೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.    

  ಅದೆಷ್ಟೋ ಮಂದಿಯನ್ನು ಕಣ್ಣೀರಿನಲ್ಲಿ ತೇಲಿಸಿ ಹೋದರು ನಿರೂಪಕಿ ಅಪರ್ಣಾ ವಸ್ತಾರೆ. ಆ ನಗು, ಆ ಕಂಠಸಿಹಿ, ನಿರೂಪಣೆಯ ಮಾಧುರ್ಯ, ಕರ್ಕಶವಿಲ್ಲದೇ ಮೃದುವಾಗಿ ನಿರೂಪಿಸುವ ಪರಿ, ಆ ಶುದ್ಧ ಕನ್ನಡ... ಅಬ್ಬಾ... ಎನ್ನುವಂಥ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ ಅಪರ್ಣಾ. ಎರಡು ವರ್ಷಗಳಿಂದ ಕ್ಯಾನ್ಸರ್​ ಎನ್ನುವ ಮಹಾಮಾರಿಯನ್ನು ದೇಹದಲ್ಲಿ ಇಟ್ಟುಕೊಂಡರೂ, ನೀವಿನ್ನು ಬದುಕುವುದು ಆರೇ ತಿಂಗಳು ಎಂದು ವೈದ್ಯರು ಹೇಳಿದ್ದರೂ ಬದುಕಿ ತೋರಿಸುತ್ತೇನೆ ಎಂದು ಎರಡು ವರ್ಷ ಸಾವನ್ನು ಕಣ್ಣೆದುರೇ ಇಟ್ಟುಕೊಂಡು ಬದುಕಿದ ಜೀವವಿದು. ಕಳೆದ ಆರು ತಿಂಗಳುಗಳಿಂದ ಸಾಯುವುದು ನಿಶ್ಚಿತ ಎಂದು ಗೊತ್ತಾದ ಮೇಲೂ ಅಪರ್ಣಾ ಅವರು ಬದುಕಿದ್ದ ಪರಿಯೇ ಅಪೂರ್ವವಾದದ್ದು. ಈಗ ಅಪರ್ಣಾ ಕುರಿತು ಒಂದೊಂದೇ ವಿಷಯಗಳು ಹೊರಕ್ಕೆ ಬರುತ್ತಿವೆ.

ಕೆಲ ವರ್ಷಗಳ ಹಿಂದೆ ಅಪರ್ಣಾ ಬದುಕಿನ ಕುರಿತು ನೀಡಿರುವ ಸಂದೇಶ, ಅವರ ಮಾತೊಂದನ್ನು inspire_here_official ಇನ್​ಸ್ಟಾಗ್ರಾಮ್​  ಖಾತೆಯಿಂದ ಶೇರ್​ ಆಗಿದ್ದು, ಅದೀಗ ವೈರಲ್​ ಆಗುತ್ತಿದೆ. ಬದುಕನ್ನು ಅಪರ್ಣಾ ನೋಡಿದ ರೀತಿಯೇ ಕುತೂಹಲವಾದದ್ದು ಎಂದು ಇದನ್ನು ಕೇಳಿದರೆ ಅನಿಸುವುದು ಉಂಟು. ಈ ಮಾತನ್ನು ಕೇಳಿದರೆ ಅವರಿಗೆ ಸಾವಿನ ಬಗ್ಗೆ ಆಗಲೇ ತಿಳಿದಿತ್ತಾ ಎನ್ನುವ ಸಂದೇಹ ಕೂಡ ಕಾಡುವುದು ಇದೆ. ಅದರಲ್ಲಿ ಅಪರ್ಣಾ ಅವರು ಹೇಳಿದ ಮಾತು ಹೀಗಿದೆ... 

ಕಣ್ಣೆದುರೇ ಸಾವಿದ್ದರೂ ಇಂಥ ತುಂಟ ನಗು ಸಾಧ್ಯವೆ? ಅಪರ್ಣಾರನ್ನು ಬಿ.ಆರ್.​ಛಾಯಾ ಭೇಟಿಯಾದ ಸಮಯದ ವಿಡಿಯೋ...

ಅವರಿಗೇನಪ್ಪಾ ಆರಾಮಾಗಿ ಇರ್ತಾರೆ ಅಂತಾರೆ. ಅದು ತಪ್ಪು. ಎಲ್ಲರ ಬೆನ್ನಹಿಂದೆಯೂ ಒಂದು ಕಥೆ ಇರುತ್ತೆ. ಒಂದು ಕಷ್ಟ ಇರುತ್ತದೆ.  ಆ ಕಷ್ಟವನ್ನು ಮೆಟ್ಟುನಿಂತು ಅದು ಇಲ್ಲದ ಹಾಗೆ ಬದುಕನ್ನು ಸವಾಲಾಗಿ ಸ್ವೀಕರಿಸುವುದೇ ಬದುಕು ಎಂದು ನಾನು ಹೇಳುವುದು... ಎಂದಿದ್ದರು ಅಪರ್ಣಾ. ಇಷ್ಟು ವರ್ಷದ ಬದುಕಿನಲ್ಲಿ ಕಂಡುಕೊಂಡಿದ್ದ ಮೂರ್ನಾಲ್ಕು ಸತ್ಯಗಳು ಎಂದರೆ, ಜೀವನ ಒಂದು ನಿತ್ಯೋತ್ಸವ. ಹಕ್ಕಿ ಹಾಡೋದು ಸಂಭ್ರಮ, ಹೂವು ಅರಳೋದು ಸಂಭ್ರಮ. ಅದನ್ನು ನೋಡುವ ದೃಷ್ಟಿ ನಮಗೆ ಬರಬೇಕು. ಇಷ್ಟು ಕೋಟಿ ಜನರು ಇದ್ದಾರೆ ಎಂದರೆ ಅಷ್ಟು ಕೋಟಿ ಮನಸ್ಸುಗಳು ಇರುತ್ತವೆ. ಅಷ್ಟು ಕೋಟಿ ಆಸೆ ಆಕಾಂಕ್ಷೆ, ಪರ-ವಿರೋಧ ನಿಲುವು ಇರುತ್ತವೆ. ಸರಿ ಹೋದರೆ ಒಪ್ಪಿಕೊಳ್ಳಿ, ಸರಿ ಇಲ್ಲ ಎನಿಸಿದರೆ ಬಿಟ್ಟಾಕಿ. ಮತ್ತೆ ನಗೋಣ... ಅಷ್ಟೇ... ಇದಿಷ್ಟು ನಾನು ತುಂಬಾ ನೇರವಾಗಿ ಕಲಿತದ್ದು ಎಂದಿದ್ದರು. 

ಇದರ ವಿಡಿಯೋ ಈಗ ವೈರಲ್​ ಆಗುತ್ತಿದೆ.  ಇದೇ ವೇಳೆ ಛಾಯಾ ಮತ್ತು ಇನ್ನೋರ್ವ ಗಾಯಕಿ ಸುನಿತಾ ಅವರು ಕ್ಯಾನ್ಸರ್​ನಿಂದ ಹಾಸಿಗೆ ಹಿಡಿದಿದ್ದ ಅಪರ್ಣಾ ಅವರನ್ನು ನೋಡಲು ಹೋದ ಸಮಯದ ವಿಡಿಯೋ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ಕಿಮೋಥೆರಪಿಯಿಂದ ಅಪರ್ಣಾ ಅವರ ಕೂದನ್ನು ಕತ್ತರಿಸಲಾಗಿತ್ತು. ಅವರು ಹಾಸಿಗೆಯ ಮೇಲೆ ಇದ್ದರು. ಆದರೂ ಅದೇ ನಗು, ಅದೇ ತುಂಟಾಟ. ತಮ್ಮ ಹೊಸ ಹೇರ್​ಸ್ಟೈಲ್​ ತೋರಿಸಿ ಅಪರ್ಣಾ ಹೇಗಿದೆ ಎಂದು ನಕ್ಕಿದ್ದಾರೆ. ಅದಕ್ಕೆ ಛಾಯಾ ಮತ್ತು ಸುನಿತಾ ಅವರು ನೀನು ಬಿಡಮ್ಮಾ, ಸ್ವೀಟ್​ 16 ಎಂದು ಹೇಳಿದ್ದಾರೆ. ನಿಜ ನಿಜ ನಾನು ಸ್ವೀಟ್​ ಸಿಕ್ಸ್​ಟೀನೇ... ಎಂದಾಗ ಛಾಯಾ ಅವರು ಹುಚ್ಚು ಕೋಳಿ ಮನಸ್ಸು ಅದು ಹದಿನಾರರ ವಯಸ್ಸು ಹಾಡು ಹಾಡಿದ್ದಾರೆ. ಆಗ ಅಪರ್ಣಾ ತಮ್ಮ ಎಂದಿನ ನಗುವಿನಿಂದ ದೊಡ್ಡ ಸ್ಮೈಲ್​ ಕೊಟ್ಟು ವಾವ್ಹ್​ ಎಂದಿದ್ದಾರೆ. ಇದೇ ವೇಳೆ ಛಾಯಾ ಮತ್ತು ಸುನಿತಾ ಹಲವು ಹಾಡುಗಳನ್ನು ಹೇಳುವ ಮೂಲಕ ಅಪರ್ಣಾ ಅವರ ಜೊತೆಗೂಡಿದ್ದಾರೆ. ಈ ವಿಡಿಯೋ ಕೂಡ ಇದೀಗ ವೈರಲ್​ ಆಗಿದೆ.

ಕನ್ನಡಕ್ಕೆ ಎಂದೆಂದಿಗೂ ನೀವೇ ಮಹಾ ನಿರೂಪಕಿ: ಅಪರ್ಣಾಗೆ ಅನುಶ್ರೀ ಕಂಬನಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?