ಹಿರಿಯ ನಟಿ ಪ್ರತಿಮಾ ದೇವಿ ನಿಧನ/ ನಿರ್ದೇಶಕ ರಾಜೆಂದ್ರ ಸಿಂಗ್ ಬಾಬು ಅವರ ತಾಯಿ ಪ್ರತಿಮಾ ದೇವಿ/ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ನಿಧನ/ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರತಿಮಾ ದೇವಿ ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.
ಬೆಂಗಳೂರು(ಏ. 06) ಹಿರಿಯ ನಟಿ ಪ್ರತಿಮಾ ದೇವಿ ನಿಧನರಾಗಿದ್ದಾರೆ. ನಿರ್ದೇಶಕ ರಾಜೆಂದ್ರ ಸಿಂಗ್ ಬಾಬು ಅವರ ತಾಯಿ ಪ್ರತಿಮಾ ದೇವಿ ಅವರಿಗೆ 88 ವರ್ಷ ವಯಸ್ಸಾಗಿತ್ತು.
ಮಂಗಳವಾರ ಮಧ್ಯಾಹ್ನ ಹಿರಿಯ ನಟಿ ಕಲಾಲೋಕವನ್ನು ಅಗಲಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರತಿಮಾ ದೇವಿ ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.
ವರನಟ ಡಾ. ರಾಜ್ ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್ರ ಸಿನಿಮಾಗಳಲ್ಲಿ ಪ್ರತಿಮಾ ದೇವಿ ಕಾಣಿಸಿಕೊಂಡಿದ್ದರು. ತಾಯಿ ಪಾತ್ರಕ್ಕೆ ಜೀವ ತುಂಬುತ್ತಿದ್ದರು.
1947ರಲ್ಲಿ ಕೃಷ್ಣ ಲೀಲಾ ಸಿನಿಮಾ ಮೂಲಕ ಅಭಿನಯಕ್ಕೆ ಕಾಲಿಟ್ಟಿದ್ದ ಪ್ರತಿಮಾ ದೇವಿ ನಾಗಕನ್ಯೆ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ, ಧರ್ಮಸ್ಥಳ ಮಹಾತ್ಮೆ, ಧರಣಿ ಮಂಡಲ ಮಧ್ಯದೊಳಗೆ, ರಾಮಾ ಶಾಮಾ ಭಾಮಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಸುಮಾರು ಅರವತ್ತೈದು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತಿ ಪ್ರತಿಮಾ ದೇವಿ ಇನ್ನು ನೆನಪು ಮಾತ್ರ.
2001-02 ರಲ್ಲಿ ಜೀವಮಾನದ ಸಾಧನೆಗಾಗಿ ಡಾ. ರಾಜ್ ಕುಮಾರ್ ಪುರಸ್ಕಾರಕ್ಕೆ ಪಾತ್ರವಾಗಿದ್ದರು. ಮಗ ರಾಜೇಂದ್ರ ಸಿಂಗ್ ಬಾಬು ಕನ್ನಡ ಸೂಪರ್ ಹಿಟ್ಟ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಇಡೀ ಕುಟುಂಬವೇ ಸ್ಯಾಂಡಲ್ ವುಡ್ ನಲ್ಲಿ ತೊಡಗಿಕೊಂಡಿದೆ.