ಅನಂತನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಕೊಡಿಸಿದ್ದು ಕನ್ನಡಿಗರಂತೆ; ಯಾರು ಆ ಕನ್ನಡಿಗ? ಅರ್ಪಿಸಿದ್ದು ಯಾರಿಗೆ?

Published : Jan 26, 2025, 03:44 PM ISTUpdated : Jan 26, 2025, 03:48 PM IST
ಅನಂತನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಕೊಡಿಸಿದ್ದು ಕನ್ನಡಿಗರಂತೆ; ಯಾರು ಆ ಕನ್ನಡಿಗ? ಅರ್ಪಿಸಿದ್ದು ಯಾರಿಗೆ?

ಸಾರಾಂಶ

ಹಿರಿಯ ಚಿತ್ರನಟ ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು, ಇದನ್ನು ಕನ್ನಡಿಗರೇ ಕೊಡಿಸಿದ್ದಾಗಿ ಹೇಳಿಕೊಂಡದ್ದಾರೆ. ಆದರೆ, ಆ ಕನ್ನಡಿಗ ಯಾರು ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ..

ಬೆಂಗಳೂರು (ಜ.26): ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಯನ್ನು ನಮ್ಮ ಕನ್ನಡಿಗರೇ ನನಗೆ ಕೊಡಿಸಿದ ಪ್ರಶಸ್ತಿಯಾಗಿದೆ. ಆದ್ದರಿಂದ ಈ ಪದ್ಮಭೂಷಣ ಪ್ರಶಸ್ತಿಯನ್ನ ನಮ್ಮ ಕನ್ನಡಿಗರಿಗೆ, ಕರ್ನಾಟಕಕ್ಕೆ, ಕನ್ನಡ ಚಿತ್ರರಂಗಕ್ಕೆ ಮತ್ತು ತಾಯಿ ಭುವನೇಶ್ವರಿಗೆ ಅರ್ಪಿಸುತ್ತೇನೆ ಎಂದು ಹಿರಿಯ ಚಿತ್ರನಟ ಅನಂತನಾಗ್ ಹೇಳಿದ್ದಾರೆ.

ಪದ್ಮವಿಭೂಷಣ ಪ್ರಶಸ್ತಿ ಘೋಷಣೆಯ ನಂತರ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದ ಪ್ರಜೆಗಳಾದ ನಾವು ಏನೇ ಸಾಧನೆ ಮಾಡಿದರೂ ಅದನ್ನು ಗುರುತಿಸಿ ಗೌರವಿಸುವ ಕೆಲಸ ದೇಶವನ್ನಾಳುವ ನಾಯಕರು ಮಾಡತ್ತಾರೆ. ಆದರೆ, ಪದ್ಮಭೂಷಣ ಪ್ರಶಸ್ತಿಯನ್ನು ನಮ್ಮ ಕನ್ನಡಿಗರೇ ನನಗೆ ಕೊಡಿಸಿದ ಪ್ರಶಸ್ತಿಯಾಗಿದೆ. ಆದ್ದರಿಂದ ಈ ಪದ್ಮಭೂಷಣ ಪ್ರಶಸ್ತಿಯನ್ನ ನಮ್ಮ ಕನ್ನಡಿಗರಿಗೆ, ಕರ್ನಾಟಕಕ್ಕೆ, ಕನ್ನಡ ಚಿತ್ರರಂಗಕ್ಕೆ ಮತ್ತು ತಾಯಿ ಭುವನೇಶ್ವರಿಗೆ ಅರ್ಪಿಸುತ್ತೇನೆ. ಪದ್ಮಭೂಷಣ ಪ್ರಶಸ್ತಿ ಸಿಕ್ಕಿದ್ದು ಖುಷಿಗಿಂತ ತೃಪ್ತಿಯಾಗಿದೆ ಎಂದು ಹೇಳಿದರು.

ಕಳೆದ 3 ವರ್ಷದ ಹಿಂದೆ ಪ್ರಧಾನಿ ಅವರು ಹೊಸ ವ್ಯವಸ್ಥೆಯನ್ನ ತಂದಿದ್ದಾರೆ. ಪದ್ಮ ಪ್ರಶಸ್ತಿ ಕೊಡುವುದರಲ್ಲಿ  ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ತಮ್ಮೆಲ್ಲರ ಮನಸ್ಸಿನಲ್ಲಿ ಯಾರಿಗೆಲ್ಲಾ ಪದ್ಮ ಪ್ರಶಸ್ತಿ ಕೊಡಬೇಕು ಅಂತ ಇದ್ದರೆ, ಅಂಥವರ ಹೆಸರನ್ನ ಈ ನಂಬರಿಗೆ ತಿಳಿಸಿ ಅಂತ ನಂಬರ್ ಕೊಟ್ಟಿದ್ದರು. ಸಾಮಾನ್ಯವಾಗಿ ನಮ್ಮ ಕನ್ನಡಿಗರು ಸ್ವಾಭಿಮಾನಿಗಳು ಯಾರನ್ನು ಏನು ಕೇಳುವುದಿಲ್ಲ. ಆದರೆ ಅಸಂಖ್ಯಾತ ಕನ್ನಡಿಗರು ಪದ್ಮ ಪ್ರಶಸ್ತಿಯನ್ನ ಕೊಡಬೇಕು ಅಂತ ಒತ್ತಾಯ ಮಾಡುತ್ತಿದ್ದರು. ಇದೀಗ ಮೂರು ವರ್ಷ ಆಯ್ತು. ಪ್ರತಿ ವರ್ಷವೂ ಅವರ ಕೇಳುತ್ತಿದ್ದರು. ಅದು ಈ ವರ್ಷ ಫಲಿಸಿತು ಎಂದರು.

ಇದನ್ನೂ ಓದಿ: 139 ಸಾಧಕರಿಗೆ ಪದ್ಮ ಪ್ರಶಸ್ತಿ ಗರಿ: 7 ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಕಟ

ನನಗೆ ಪದ್ಮಭೂಷಣ ಪ್ರಶಸ್ತಿಯನ್ನು ಒಂದು ರೀತಿ ನಮ್ಮ ಕನ್ನಡಿಗರೆ ನಮಗೆ ಕೊಡಿಸಿದಂತ ಪ್ರಶಸ್ತಿಯಾಗಿದೆ. ಆದ್ದರಿಂದ ಈ ಪದ್ಮಭೂಷಣವನ್ನ ನಮ್ಮ ಕನ್ನಡಿಗರಿಗೆ, ಕರ್ನಾಟಕಕ್ಕೆ, ಕನ್ನಡ ಚಿತ್ರರಂಗಕ್ಕೆ ಮತ್ತು ತಾಯಿ ಭುವನೇಶ್ವರಿಗೆ ಅರ್ಪಿಸುತ್ತೇನೆ. ಚಿತ್ರದಿಂದ ಚಿತ್ರಕ್ಕೆ ಬೇರೆ ಬೇರೆ ಅನುಭವಗಳು ಇರುತ್ತೆ. ಜನರಿಗೆ ಎಲ್ಲೂ ಬೇಸರವಾಗದ ರೀತಿಯಲ್ಲಿ ಚಿತ್ರಗಳನ್ನ ಕೊಡಲು ನಾನು ಇಷ್ಟಪಟ್ಟೆ. ಅದು ಜನರಿಗೆ ಇಷ್ಟ ಆಯ್ತು. ನಮ್ಮ ಹಿರಿಯರು ನಮಗೆ ಹಾಕಿಕೊಟ್ಟ ದಾರಿ ಅದು. ಇತ್ತೀಚೆಗೆ ಅದು ಬದಲಾಗುತ್ತಿದೆ. ಒಳ್ಳೆಯ ಪಾತ್ರ ಮತ್ತು ಕಥೆಯನ್ನ ಹಾರಿಸಿಕೊಂಡು ಬಂದಿದ್ದೇನೆ. ಅದು ನಮ್ಮ ಕನ್ನಡಿಗರಿಗೆ ಇಷ್ಟ ಆಗಿ, ಇವತ್ತು ಈ ಪ್ರಶಸ್ತಿ ಲಭಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ವಿಷ್ಣುವರ್ಧನ್, ಅನಂತನಾಗ್ ನಟನೆ ಈ ಸಿನಿಮಾಗಳನ್ನ ನೋಡಿಲ್ಲ ಅಂದ್ರೆ ಮಿಸ್ ಮಾಡದೇ ನೋಡಿ

ಜಾಗತಿಕ ಮಟ್ಟದಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗ ಬಂದ ನಂತರ ಚಿತ್ರಮಂದಿರಗಳಿಗೆ ಸಿನಿಮಾ ನೋಡಲು ಬರುವವರ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಕಾಲದಲ್ಲಿ ಥಿಯೇಟರ್ ಶೇ.50 ಮಹಿಳೆಯರೇ ಬರುತ್ತಿದ್ದರು. ಅಂದರೆ, ಮಹಿಳೆಯರೂ ಹೆಚ್ಚಾಗಿ ಸಿನಿಮಾ ನೋಡಲು ಬರುತ್ತಿದ್ದರು. ಆದರೆ, ಈಗ ಅವರ ಸಂಖ್ಯೆ ಅಷ್ಟಿರೋದಿಲ್ಲ. ಹಾಗಾಗಿ ಜನರಿಗೆ ಏನು ಕೊಡಬೇಕು ಅನ್ನೋದನ್ನ ಅರಿತು ಮನೋರಂಜನೆಯುಳ್ಳ ಸಿನಿಮಾ ನೀಡಬೇಕು. ಆದರೆ, ಜನರು ನಿರೀಕ್ಷಿಸುವ ರೀತಿ ಇತ್ತೀಚಿನ ದಿನ ಸಿನಿಮಾಗಳು ಬರುತ್ತಿಲ್ಲ. ಆಗ ಜನ ಅದನ್ನು ಸ್ವೀಕಾರ ಮಾಡುವುದಿಲ್ಲ. ಜನ ಥಿಯೇಟರ್‌ಗೆ ಬರೋದು ಕಡಿಮೆಯಾಗಿದೆ. ಅದರ ಚಾಲೆಂಜ್ ಸಿನಿಮಾ ಮೇಕರ್ಸ್‌ಗೆ ಹೆಚ್ಚಾಗುತ್ತದೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡಬೇಕು ಎಂದು ಹೇಳಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?