ಗೀತಕ್ಕ..: ಆಪರೇಷನ್ ನಂತ್ರ ಎಲ್ಲಾ ಸರಿಹೋಗಿದೆ ಅಂತ ಹೇಳಿ ಮತ್ತೆ ಹಾರ್ಟ್ ಸಮಸ್ಯೆ ಇದೆ ಅಂದ್ರು!

Published : Jan 26, 2025, 01:47 PM IST
ಗೀತಕ್ಕ..: ಆಪರೇಷನ್ ನಂತ್ರ ಎಲ್ಲಾ ಸರಿಹೋಗಿದೆ ಅಂತ ಹೇಳಿ ಮತ್ತೆ ಹಾರ್ಟ್ ಸಮಸ್ಯೆ ಇದೆ ಅಂದ್ರು!

ಸಾರಾಂಶ

'ನಾನು ಯಾವುದೇ ತಯಾರಿ ಮಾಡಿಕೊಂಡಿರಲಿಲ್ಲ.. ದೇವರ ಮೇಲೆ ಭಾರ ಹಾಕಿದ್ದೆ.. ವೈದ್ಯರೇ ನಮ್ಮ‌ಪಾಲಿನ ದೇವರು, ವೈದ್ಯ‌ ಮುರುಗೇಶ್ ಅವರು.. ನಂಗೆ ಆಪರೇಷನ್ ದಿನ ತುಂಬಾ ಭಯ ಅಗಿತ್ತು... ಆದ್ರೆ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ...

ಕರುನಾಡು ಚಕ್ರವರ್ತಿ ಬಿರುದಿನ ನಟ ಶಿವರಾಜ್‌ಕುಮಾರ್ (Shivarajkumar) ಅವರು ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಬಳಿಕ ಇಂದು, ಅಂದರೆ 26 ಜನವರಿ 2025ರಂದು ಬೆಂಗಳೂರಿಗೆ ಮರಳಿದ್ದಾರೆ. ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ನಟ ಶಿವಣ್ಣ 'ಹೋಗಬೇಕಾದ್ರೆ ನಾನು ತುಂಬಾ ಎಮೋಷನಲ್ ಆಗಿದ್ದೆ. ಏನೇ ಆದ್ರೂ ಜೀವನದಲ್ಲಿ ಫೇಸ್ ಮಾಡಬೇಕು. ಮಾಡೋಣ ನೋಡೋಣ ಅಂದ್ರೆ ಆಗಲ್ಲ, ಎದುರಿಸಲೇಬೇಕು. ನಂಗೆ ಮನೆಯಲ್ಲಿ ಎಲ್ಲರ ಸಪೋರ್ಟ್ ಇತ್ತು, ಮುಂಚೆ ನಂಗೆ ಭಯವಿತ್ತು, ನಾನು Blessed ಅನಿಸ್ತಿದೆ..' ಎಂದಿದ್ದಾರೆ.

ಜೊತೆಗೆ, ನಟ ಶಿವಣ್ಣ ಅವರು 'ಫ್ಲೈಟ್ ಟ್ರಾವೆಲ್ ನಲ್ಲೆ ಭಯ ಇತ್ತು. ಅಲ್ಲಿ ಹೋದ ಮೇಲೆ ಕಾನ್ಫಿಡೆನ್ಸ್ ಬಂತು. 6 ಗಂಟೆ ಮನೆಯವರಿಗೂ ಟೆನ್ಶನ್ ಇತ್ತು. ಆಪರೇಷನ್ ಬಳಿಕ ಟೈಮ್ ತೆಗೊಂಡು ವಾಕಿಂಗ್ ಶುರು ಮಾಡಿದೆ. ಹೆಣ್ಣುಮಕ್ಕಳಿಗೆ ತುಂಬಾ ಕಷ್ಟ ಈ ಸಮಯದಲ್ಲಿ ಎಲ್ಲರ ಸಪೋರ್ಟ್ ಇದೆ. 1 ತಿಂಗಳು ಪ್ರತಿಯೊಬ್ಬರೂ ನನ್ ಜೊತೆ ಇದ್ರು. ಈಗ ತುಂಬಾ ಸ್ಟ್ರಾಂಗ್ ಆಗಿದೀನಿ.' ಎಂದಿದ್ದಾರೆ. 

ಶಿವಣ್ಣ ಬಂದಿದ್ದು ಅಪ್ಪಾಜಿ ಕಾಡಿನಿಂದ ವಾಪಸ್ ಬಂದಾಗಾಯ್ತು: ರಾಘವೇಂದ್ರ ರಾಜ್‌ಕುಮಾರ್

ಇನ್ನು ಈ ಬಗ್ಗೆ ಮಾತನ್ನಾಡಿರುವ ಶಿವಣ್ಣ ಪತ್ನಿ ಗೀತಾ ಶಿವರಾಜ್‌ಕುಮಾರ್ (Geetha Shivarajkumar) 'ನಾನು ಯಾವುದೇ ತಯಾರಿ ಮಾಡಿಕೊಂಡಿರಲಿಲ್ಲ.. ದೇವರ ಮೇಲೆ ಭಾರ ಹಾಕಿದ್ದೆ.. ವೈದ್ಯರೇ ನಮ್ಮ‌ಪಾಲಿನ ದೇವರು, ವೈದ್ಯ‌ ಮುರುಗೇಶ್ ಅವರು.. ನಂಗೆ ಆಪರೇಷನ್ ದಿನ ತುಂಬಾ ಭಯ ಅಗಿತ್ತು... ಆದ್ರೆ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ... ಶಿವಣ್ಣ ಸರ್ಜರಿ ಯಶಸ್ವಿಯಾಗಿದೆ, ಶಿವಣ್ಣ ಈಗ ಆರೋಗ್ಯವಾಗಿದ್ದಾರೆ.

ಆದ್ರೆ, ಅಂದು ಆಪರೇಷನ್ ಆದ ನಂತ್ರ ಎಲ್ಲಾ ಸರಿಹೋಗಿದೆ ಅಂತ ಹೇಳಿ ಮತ್ತೆ ಹಾರ್ಟ್ ಸಮಸ್ಯೆ ಇದೆ ಅಂತ ಹೇಳಿದ್ರು.. ಆಗ ನನಗೆ ನಿಜವಾಗಿಯೂ ತುಂಬಾ ಭಯ ಆಗಿತ್ತು...ಆದ್ರೆ ಎಲ್ಲರ ಆಶೀರ್ವಾದ, ಇನ್ನೇನೂ ಸಮಸ್ಯೆ ಆಗಲಿಲ್ಲ' ಎಂದಿದ್ದಾರೆ ಗೀತಾ ಶಿವರಾಜ್‌ಕುಮಾರ್. 

ಅಮೆರಿಕಾದಲ್ಲಿ ಇಡೀ ದಿನ ಆಪರೇಷನ್ ಒಂದು ಸರ್ಕಸ್ ತರ ಆಯ್ತು: ಶಿವರಾಜ್‌ಕುಮಾರ್

ಅಮೆರಿಕಾದಿಂದ ಬಂದ ಶಿವಣ್ಣ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಮಾತನ್ನಾಡಿದ್ದಾರೆ. ಈ ಬಗ್ಗೆ ನಟ ಹಾಗೂ ಶಿವರಾಜ್‌ಕುಮಾರ ಸಹೋದರ ರಾಘವೇಂದ್ರ ರಾಜ್ ಕುಮಾರ್ 'ಕೊನೆಗೂ ಈ ದಿನ ಬಂತು. ನನಗೆ ಅಪ್ಪಾಜಿ ಕಾಡಿನಿಂದ ವಾಪಸ್ ಬಂದಾಗಾಯ್ತು..ಶಿವಣ್ಣನನ್ನ ನೋಡಿ ನಾನು ಅಪ್ಪಾಜಿ ನೋಡಿದಂತೆ ಆಯ್ತು...ನನ್ನ ಅಯಸ್ಸು ಕೂಡ ಶಿವಣ್ಣನಿಗೆ ಇರಲಿ‌..' ಎಂದಿದ್ದಾರೆ. 

ಶಿವಣ್ಣ ಆರೋಗ್ಯವಾಗಿದ್ದಾರೆ ಅಂತ ವಿಷ್ಯ ಗೊತ್ತಾದಾಗ ನನಗೆ ತುಂಬಾ ಖುಷಿ ಆಯ್ತು...ಟ್ರೀಟ್ ಮೆಂಟ್ ಸಮಯದಲ್ಲೂ ನಾನು ಸಾಕಷ್ಟು ಬಾರಿ ಮಾತಾಡಿದ್ದು‌. ಕ್ಯಾನ್ಸರ್ ಇಲ್ಲ ಅಂತ ಗೊತ್ತಾದಾಗ ನನಗೆ ತುಂಬ ಖುಷಿ ಆಯ್ತು..ಈ ತರ ನಿಮ್ಮ ಲೈಫ್ ನಲ್ಲೂ ಅದ್ರೂ ಶಿವುನೇ ಸ್ಫೂರ್ತಿ.. ಅವನಲ್ಲೂ ಕೂಡ ಭಯ ಇತ್ತು..ಆದರೆ ಅದನ್ನು ಅವನು ತೋರಿಸಿಕೊಳ್ಳಲಿಲ್ಲ..

ಶಿವಣ್ಣನಿಗೆ ನಾವಷ್ಟೇ ಅಲ್ಲ.. ಇಡೀ ಅಭಿಮಾನಿಗಳೇ ಶ್ರೀ ರಕ್ಷೆ...ಹಳೇ ಶಿವರಾಜ್ ಕುಮಾರ್ ಇನ್ಮುಂದೆ ಇರಲ್ಲ.. ಇನ್ನೆರೆಡು ತಿಂಗಳಲ್ಲಿ ನೋಡಿ.. ಎಲ್ಲಾ ಕಡೆ ಕಾಣಿಸಿಕೊಳ್ತಾನೆ...ಅಪ್ಪಾಜಿ ಹುಟ್ಟಿದ ದಿನ 24 ನೆ ತಾರೀಖು.. ಶಿವಣ್ಣ ಆಪರೇಷನ್ ಆಗಿ ಕ್ಯಾನ್ಸರ್ ಗೆದ್ದಿದ್ದು 24ನೇ ತಾರೀಖಿನಂದೇ.. ಹೀಗಾಗಿ ನಮ್ಮ ಕುಟುಂಬಕ್ಕೆ 24ನೇ ದಿನಾಂಕ ತುಂಬಾ ವಿಶೇಷ' ಎಂದಿದ್ದಾರೆ. 

'ಅದು ಕೊಡ್ತೀಯಾ' ಎಂದು ಕೇಳುವವರ ಮಧ್ಯೆ ಹುಚ್ಚ ವೆಂಕಟ್ ಒಳ್ಳೆಯ ವ್ಯಕ್ತಿ: ಸೌಮ್ಯಾ ರಾವ್!

ಇನ್ನು ಶಿವಣ್ಣ, 'ಏನೇ ಮಾಡಿದ್ರೂ ಅದು‌ತಾನಾಗೆ ಬರುತ್ತೆ.. ನಾನು ಯಾವುದನ್ನು ಪ್ಲಾನ್ ಮಾಡಲ್ಲ.. ಗೋ ವಿಥ್ ಫ್ಲೋ ಅಷ್ಟೇ...ಪ್ರತೀ ದಿನ ಕಲಿಯೋದೆ.. ಅನುಭವಕ್ಕೆ ನಾವು ಗೌರವ ಕೊಡೋದು ಮುಖ್ಯ...' ಎಂದಿದ್ದಾರೆ. ಒಟ್ಟಿನಲ್ಲಿ, ನಟ ಶಿವಣ್ಣ ಈಗ ಆರೋಗ್ಯವಾಗಿದ್ದಾರೆ, ಅಮೆರಿಕದಿಂದ ತಾಯ್ನಾಡಿಗೆ, ತಮ್ಮ ಮನೆಗೆ ಮರಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ