
ಬೆಂಗಳೂರು (ಜ.26): ಕನ್ನಡ ಚಿತ್ರಂಗದಲ್ಲಿ ಪ್ರಜಾರಾಜ್ಯ ಸಿನಿಮಾ ಮಾಡಿದ್ದ ನಿರ್ದೇಶಕ ಹರ್ಷವರ್ಧನ್ ಖ್ಯಾತಿಯಾಗಿದ್ದಾರೆ. ಆದರೆ, ಹರ್ಷವರ್ಧನ್ ಜೊತೆಗೆ ಕೆಲವು ದಿನ ರಿಲೇಷನ್‌ಶಿಪ್‌ನಲ್ಲಿ ಮದುವೆ ಮಾಡಿಕೊಂಡಿದ್ದ ಹೆಂಡತಿ ನಟಿ ಶಶಿಕಲಾ ವಿರುದ್ಧ ಇದೀಗ ಹರ್ಷವರ್ಧನ್ ದೂರು ನೀಡಿದ್ದಾರೆ.
ಹರ್ಷವರ್ಧನ್ ಅವರಿ ಕನ್ನಡ ಚಿತ್ರರಂಗದಲ್ಲಿ 2020ರಲ್ಲಿ ನಿರ್ದೇಶಕರಾಗಿ ಹೊಸ ಸಿನಿಮಾದ ಶೂಟಿಂಗ್ ಶುರು ಮಾಡಿದ್ದರು. 2021ರ ಮಾರ್ಚ್ ನಲ್ಲಿ ಶೂಟಿಂಗ್ ಗೆ ಹೊಸ ಕಲಾವಿದೆಯಾಗಿ ಶಶಿಕಲಾ ಬಂದಿದ್ದರು. ಆಗ ಹರ್ಷವರ್ಧನ್ ನಂಬರ್ ಪಡೆದುಕೊಂಡಿದ್ದರು. ಇದಾದ ನಂತರ ಸಿನಿಮಾಗೆ ಹಣ ಹೂಡಿಕೆ ಮಾಡುತ್ತೇನೆ ಎಂದು ನಂಬಿಸಿ ತನ್ನೊಂದಿಗೆ ರಿಲೇಷನ್ ಶಿಪ್ ನಲ್ಲಿರುವಂತೆ ಒತ್ತಾಯ ಮಾಡಿದರು. ಆಗ ಸಿನಿಮಾಗೆ ಹಣ ಹೂಡಿಕೆ ಮಾಡುತ್ತಾರೆ, ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬಹುದು ಎಂದು ನಂಬಿಕೊಂಡು ಅವರಿಂದಿಗೆ ರಿಲೇಷನ್‌ಶಿಪ್‌ನಲ್ಲಿ ಇರುವುದಕ್ಕೆ ಹರ್ಷವರ್ಧನ್ ಒಪ್ಪಿಕೊಂಡಿದ್ದಾರಂತೆ.
ಆದರೆ, ನಟಿ ಶಶಿಕಲಾಗೆ ನಾನು ನಿಮ್ಮನ್ನು ಮದುವೆ ಆಗುವುದಿಲ್ಲ, ಸಿನಿಮಾಗೆ ಬಂಡವಾಳ ಹೂಡಿಕೆ ಮಾಡುವುದಾಗಿ ಭರವಸೆ ನೀಡುತ್ತಿದ್ದರಿಂದ ನಿಮ್ಮೊಂದಿಗೆ ಕೇವಲ ಸಂಬಂಧದಲ್ಲಿ ಇರುವುದಾಗಿ ಹರ್ಷವರ್ಧನ್ ಕಂಡೀಷನ್ ಹಾಕಿದ್ದರು. ಇದಕ್ಕೆ ನಟಿ ಶಶಿಕಲಾ ಕೂಡ ಒಪ್ಪಿಕೊಂಡಿದ್ದರಂತೆ. ಆದರೆ, ಸಂಬಂಧದಲ್ಲಿ ಇದ್ದ ಕೆಲವು ದಿನಗಳ ನಂತರ ಶಶಿಕಲಾ ತನ್ನನ್ನು ಮದುವೆ ಆಗುವಂತೆ ಬಲವಂತ ಮಾಡಿದ್ದಾರೆ. ನಂತರ, ಹರ್ಷವರ್ಧನ್ ಆಗಲ್ಲ ಎಂದು ಹೇಳಿದಾಗ ತಾವಿಬ್ಬರೂ ಫೋನಿನಲ್ಲಿ ಖಾಸಗಿಯಾಗಿ ಮಾತನಾಡಿದ ಎಲ್ಲ ಕಾಲ್ ರೆಕಾರ್ಡ್ ಇಟ್ಟುಕೊಂಡು ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: 80-90ರ ದಶಕದವರಿಗೆ ಈ ಸೊಸೈಟಿ ಮೆಂಟಾಲಿಟಿನೇ ಒಂಥರಾ ವಿಲನ್: ಡಿವೋರ್ಸ್ ಬಗ್ಗೆ ನಟಿ ಆಶಿತಾ ಓಪನ್ ಮಾತು
ಜೊತೆಗೆ, ಅದೇನು ಮಾಡ್ತೀರೋ ಮಾಡಿಕೊಳ್ಳಿ, ನಿಮ್ಮನ್ನು ಮದುವೆ ಆಗುವುದಿಲ್ಲ ಎಂದಾಗ ಹರ್ಷವರ್ಧನ್ ಕಚೇರಿಗೆ ಬಂದು ಹಲ್ಲೆ ಮಾಡಿದ್ದರು. ಆಗಲೂ ನಾನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಆದರೆ, ಇದಾದ ನಂತರ 2022ರಲ್ಲಿ ನನ್ನ ವಿರುದ್ಧ ಸುಳ್ಳು ದೂರು ನೀಡಿ ಜೈಲಿಗೆ ಹಾಕಿಸಿದ್ದಾರೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.
ಇನ್ನು ಹರ್ಷವರ್ಧನ್ ಜೈಲಿನಿಂದ ಹೊರ ಬಂದ ನಂತರ ನಿರ್ಮಾಪಕರು ಸಿನಿಮಾ ಮಾಡಲು ಬಿಡಲಿಲ್ಲ. ಕೆರಿಯರ್ ಹಾಳಾಗುತ್ತೆ ಅಂತ ಆಕೆಯ ಮದುವೆ ಆಗುವಂತೆ ಸಲಹೆ ನೀಡಿದ್ದರು. 2022ರ ಮಾರ್ಚ್ 5ನಲ್ಲಿ ಶಶಿಕಲಾ ಜೊತೆ ಮದುವೆಯಾಗಿದ್ದಾರೆ. ಮದುವೆ ನಂತರ ಮನೆಗೆ ನಿರ್ಮಾಪಕರು ಸೇರಿ ಹಲವು ಜನರ ಬರುತ್ತಿದ್ದರು. ನಾನು ಪ್ರಶ್ನೆ ಮಾಡಿದಾಗ ಮತ್ತೊಮ್ಮೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಿರ್ಮಾಪಕರು ಮನೆಗೆ ಬಂದಾಗ ನನ್ನನ್ನು ಬೇರೆಯವರ ಜೊತೆಗೆ ಮನೆಯಿಂದ ಹೊರ ಇರುವಂತೆ ಶಶಿಕಲಾ ಹೇಳುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಣ್ಣ ಬಂದಿದ್ದು ಅಪ್ಪಾಜಿ ಕಾಡಿನಿಂದ ವಾಪಸ್ ಬಂದಾಗಾಯ್ತು: ರಾಘವೇಂದ್ರ ರಾಜ್‌ಕುಮಾರ್
ಇದಾದ ನಂತರ 2024ರ ಅಗಸ್ಟ್‌ನಲ್ಲಿ ಜಗಳ ಮಾಡಿ ಶಶಿಕಲಾ, ಹರ್ಷವರ್ಧನ್‌ನನ್ನು ಮನೆಯಿಂದ ಹೊರ ಹಾಕಿದ್ದರಂತೆ. ಇದಾದ ನಂತರ ಆಕೆಯಿಂದ ದೂರ ಬಂದರೂ ಕೂಡ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಬ್ಲಾಕ್ ಮೇಲ್ ಮಾಡುತ್ತಾ ನನಗೆ ನೆಮ್ಮದಿಯಿಂದ ಇರಲು ಬಿಡುತ್ತಿಲ್ಲವೆಂದು ಶಶಿಕಲಾ ವಿರುದ್ಧ ನಿರ್ದೇಶಕ ಹರ್ಷವರ್ಧನ್ ಪುನಃ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.