ಪತಿ ತೀರಿಕೊಂಡ ದಿನವೇ ನಿಧನರಾದ ದಿ. ಉದಯ್ ಕುಮಾರ್ ಪತ್ನಿ!

By Suvarna NewsFirst Published Dec 12, 2019, 11:01 AM IST
Highlights

ಹಿರಿಯ ಕಲಾವಿದ ದಿವಂಗತ ನಟ ಉದಯ್ ಕುಮಾರ್ ಪತ್ನಿ ಕಮಲಮ್ಮ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. 

ಕನ್ನಡ ಚಿತ್ರರಂಗ ಕಂಡ ಮಹಾನ್ ಕಲಾವಿದ, 'ಕಾಲ ಕೇಸರಿ' ಎಂದೇ ಜನಪ್ರಿಯರಾಗಿದ್ದ ನಟ ದಿವಂಗತ  ಉದಯ್ ಕುಮಾರ್ ಅವರ ಧರ್ಮಪತ್ನಿ ಕಮಲಮ್ಮ ವಯೋಸಜಹ ಅನಾರೋಗ್ಯದಿಂದ ಕೊನೆಯುಸಿರೆಳೆದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಬುಧವಾರ ಬೆಳಗ್ಗೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಆನೇಕಲ್‌ನಲ್ಲಿ ಬುಧವಾರ ಸಂಜೆ 4 ಗಂಟೆಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

BB7: ಸಿನಿಮಾ ಇಲ್ಲದೇ ಕ್ಯಾಂಟೀನ್ ತೆರೆದ ಶಂಕರ್ ನಾಗ್, ಸತ್ಯಕಥೆ ಬಿಚ್ಚಿಟ್ಟ ಜೈ ಜಗದೀಶ್!

ಆನೇಕಲ್‌ನಲ್ಲಿ ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ವಾಸವಿದ್ದ ಕಮಲಮ್ಮ, ಕಳೆದ ನವೆಂಬರ್‌‌ನಲ್ಲಿ ತಮ್ಮ 85ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಉದಯ್‌ ಕುಮಾರ್‌ ತೀರಿಕೊಂಡ ದಿನವೇ ಕಮಲಮ್ಮನವರೂ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಪುತ್ರ ತಿಳಿಸಿದ್ದಾರೆ. ‘ನಮ್ಮ ತಂದೆಯವರದ್ದು ಅಕಾಲಿಕ ಮರಣ. ನಾವು ತಂದೆಯ ಶ್ರಾದ್ಧಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೆವು. ಇದ್ದಕ್ಕಿದ್ದಂತೆ ತಾಯಿ ಅಸೌಖ್ಯಕ್ಕೆ ಒಳಗಾದರು. ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ತಂದೆ ತೀರಿಕೊಂಡ ದಿನವೇ ತಾಯಿಯೂ ನಮ್ಮನ್ನು ಅಗಲಿದರು,’ ಎಂದು ಉದಯ್‌ ಕುಮಾರ್‌, ಕಮಲಮ್ಮ ದಂಪತಿಯ ಪುತ್ರ ವಿಕ್ರಮ್‌ ತಿಳಿಸಿದ್ದಾರೆ.

ಕಮಲಮ್ಮನ ಸಾಂಸ್ಕೃತಿಕ ಸೇವೆ ಅಪಾರ:

'ಪವನಸುತ ಕೇಸರಿ ಕಲಾ ಶಾಲಾ' ಸ್ಥಾಪಿಸಿದವರು ಕಮಲಮ್ಮ,  ಕಲಾ ಕೇಸರಿ ತಂಡದಿಂದ ಕನ್ನಡ ಭಾಷೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ರೀತಿಯಲ್ಲಿ ಸೇವೆ ಸಲಿಸುತ್ತಾ ಬಂದ್ದರು. ಆನೇಕಲ್‌ನಲ್ಲಿರುವ ಕಲಾ ಶಾಲೆ ಇಂದಿಗೂ ಶಾಸ್ತ್ರಿಯ ಸಂಗೀತ , ಭರತನಾಟ್ಯ ಹಾಗೂ  ಇನ್ನಿತರ ಕಲಾ ಪ್ರಾಕಾರಗಳನ್ನು ಕಲಿಯುವ ಅವಕಾಶವಿದೆ. ಕಮಲಮ್ಮ ಅವರ ಕನಸಿನ ಸಂಸ್ಥೆಯಾಗಿದ್ದ ಕಾರಣ ಅವರ ಅಂತಿಮ ಕಾರ್ಯಗಳನ್ನು ಅನೇಕಲ್‌ನಲ್ಲಿ ನಡೆಸಲಾಯಿತು. 

60-70 ದಶಕದಲ್ಲಿ ಕನ್ನಡ ಚಿತ್ರರಂಗ ಆಳಿದ ಕಲಾವಿದ ಉದಯ್ ಕುಮಾರ್‌ ಹಾಗೂ ಕಮಲಮ್ಮ ಅವರಿಗೆ ಪುತ್ರ  ವಿಕ್ರಂ ಉದಯ್ ಕುಮಾರ್ ಹಾಗೂ ಪುತ್ರಿ ಯಾದ ಶ್ಯಾಮಲಾ.

click me!