
ಸ್ಯಾಂಡಲ್‌ವುಡ್ ಡಾಲಿ ಎಂದೇ ಖ್ಯಾತಿಗಳಿಸಿರುವ ನಟ ಧನಂಜಯ್ (Dolly Dhananjay) ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನಟನಾಗಿ, ನಿರ್ಮಾಪಕನಾಗಿ ಖ್ಯಾತಿಗಳಿಸಿರುವ ಡಾಲಿ ಧನಂಜಯ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. 'ಕಾಮನ್ ಮ್ಯಾನ್ ಹೀರೋ' ಅಂತನೇ ಬಿರುದು ಪಡೆದಿರುವ ಡಾಲಿ ಈ ಬಾರಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಧನಂಜಯ್ ಹುಟ್ಟುಹಬ್ಬ ಇದೇ 23ರಂದು. ಒಂದು ತಿಂಗಳ ಹಿಂದಿನಿಂದಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ. ಡಾಲಿ ಉತ್ಸವಕ್ಕೆ ಅಭಿಮಾನಿಗಳು ಈಗಾಗಲೇ ಭರದ ಸಿದ್ಧತೆ ಮಾಡಿಕೊಂಡಿದ್ದು, ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.
ಅವರ ಹುಟ್ಟುಹಬ್ಬದ ನಿಮಿತ್ತ ಉತ್ತರಾಕಾಂಡ (Uttarakanda) ಸಿನಿಮಾದ ಟೀಸರ್ ಸಹ ರಿಲೀಸ್ ಆಗಲಿದೆ. ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಡಾಲಿ ಉತ್ಸವ ಹೆಸರಿನಲ್ಲಿ ಆಚರಿಸುತ್ತಿದ್ದಾರೆ. ಡಾಲಿ ಉತ್ಸವ ಎಂದು ಹೆಸರಿಟ್ಟು 'ಅಭಿಮಾನದ ತೇರು ಎಳೆಯೋಣ ಬನ್ನಿ' ಎಂದು ಟ್ಯಾಗ್ ಲೈನ್ ಇಡಲಾಗಿದೆ. ಅಂದಹಾಗೆ ಈ ಬಾರಿಯ ಧನಂಜಯ್ ಹುಟ್ಟುಹಬ್ಬ ತುಂಬನೇ ವಿಶೇಷ. 4 ವರ್ಷಗಳ ಬಳಿಕ ಅದ್ದೂರಿಯಾಗಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಜೊತೆಗೆ ಡಾಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಧನಂಜಯ್ ಅವರಿಗೆ ತುಂಬಾ ವಿಶೇಷವಾಗಿದೆ.
ಕನ್ನಡ ಬರಿಯಲು ಕಲಿತಿದ್ದಾರೆ ಪೂಜಾ ಗಾಂಧಿ ಅಮ್ಮ: ನಟಿಯ ಪೋಸ್ಟ್ಗೆ ಭೇಷ್ ಭೇಷ್ ಅಂತಿರೋ ಕನ್ನಡಿಗರು
ಒಂದೆಡೆ ಅಭಿಮಾನಿಗಳು ಡಾಲಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರೆ, ಹುಟ್ಟುಹಬ್ಬದ ಅಪ್‌ಡೇಟ್ಸ್ (Updates) ನೀಡಿದ್ದಾರೆ ಡಾಲಿ ಧನಂಜಯ್ ಅವರು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಧನಂಜಯ್ ಅವರು ಹೇಳಿದ್ದೇನೆಂದರೆ, 'ಹಾಯ್ ಎಲ್ಲರಿಗೂ ನಮಸ್ಕಾರ. ಎಲ್ಲ ನನ್ನ ಅಭಿಮಾನಿ ದೊರೆಗಳಿಗೆ ನನ್ನ ನಮಸ್ಕಾರ. ಪ್ರತಿ ವರ್ಷ ಎಲ್ಲರೂ ಹುಟ್ಟಿದ ಹಬ್ಬವನ್ನು ತುಂಬಾ ಚೆನ್ನಾಗಿ ಆಚರಿಸ್ತಿದ್ವಿ. ಪ್ರತಿ ವರ್ಷ ಮನೆ ಹತ್ರ ಎಲ್ರೂ ಬರ್ತಾ ಇದ್ರಿ. 2018ರಲ್ಲಿ ಶಾಲಿನಿ ಗ್ರೌಂಡ್ಸ್‌ನಲ್ಲಿ ಆಚರಿಸಿದ್ದೇ ಲಾಸ್ಟ್ ಅನಿಸುತ್ತೆ. ತುಂಬ ಜನ ಸೇರಿದ್ರಿ. ಸ್ಕೂಲ್ ಸ್ನೇಹಿತರೂ ಸೇರಿದ್ರು. ಅದಾದ ಮೇಲೆ ಕೋವಿಡ್ ಅದೂ ಇದೂ ಹೀಗೆ ನಾನಾ ಕಾರಣಗಳಿಂದ ಹುಟ್ಟಿದ ಹಬ್ಬವನ್ನು ನಿಮ್ಮ ಜತೆಗೆ ಆಚರಿಸಿಕೊಳ್ಳಲು ಆಗಿರಲಿಲ್ಲ. ಈ ಸಲ ಈ ದಿನವನ್ನು ನಿಮ್ಮ ಜತೆಗೇ ಆಚರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ' ಎಂದಿದ್ದಾರೆ ಡಾಲಿ ಧನಂಜಯ್.
ಈ ದಿನದ ಬಗ್ಗೆ ಮತ್ತಷ್ಟು ಹೇಳಿರುವ ನಟ, 'ಅಂದು ಬೆಂಗಳೂರಿನಲ್ಲಿಯೇ (Bangalore) ಇರುತ್ತೇನೆ. ಆದರೆ ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ಮನೆ ಹತ್ರ ಯಾರೂ ಬರಬೇಡಿ. ಮಂಗಳವಾರ ಸಂಜೆ ಅಂದರೆ 22ರ ಸಂಜೆ, ಸಂತೋಷ್ ಚಿತ್ರಮಂದಿರದಲ್ಲಿ ನಮ್ಮ ಉತ್ತಕಾಂಡ ಸಿನಿಮಾದ ಟೀಸರ್ ರಿಲೀಸ್ ಆಗ್ತಿದೆ. ಅಲ್ಲಿ ಸೆಲೆಬ್ರೇಷನ್‌ಗೆ ಸಿಗ್ತೀನಿ. ನಂತರ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ರಾತ್ರಿ 11ರ ನಂತರ ನಿಮ್ಮ ಜೊತೆ ಕೇಕ್ ಕಟ್ ಮಾಡ್ತೀನಿ. 23ರ ಬೆಳಗ್ಗೆ ಬೇರೆ ಬೇರೆ ಊರುಗಳಿಂದ ಬಂದ ಅಭಿಮಾನಿಗಳ ಜತೆಗೂ ಮಧ್ಯಾನ್ಹದ ವರೆಗೂ ಕೇಕ್ ಕಟ್ ಮಾಡುತ್ತೇನೆ. ಯಾರೆಲ್ಲ ಬರಬೇಕು ಅಂದುಕೊಂಡಿದ್ದೀರೋ, ಈ ಸ್ಥಳಗಳಿಗೆ ಬನ್ನಿ ಸಿಗೋಣ. ಯಾವುದೇ ಕಾರಣಕ್ಕೂ, ಹಾರ, ಕೇಕ್ ಯಾವುದೂ ತರಬೇಡಿ ನಿಮ್ಮ ಆಶೀರ್ವಾದವಷ್ಟೇ ಇರಲಿ" ಎಂದು ಧನಂಜಯ್ ಮನವಿ ಮಾಡಿದ್ದಾರೆ. ಅಂದಹಾಗೆ ನಟ 36ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಜೊತೆಜೊತೆಯಲಿ 'ಅನು' ಹಾಟ್ ವಿಡಿಯೋ ವೈರಲ್: ಉಫ್ ನಿಜಕ್ಕೂ ನೀವು ಅವ್ರೇನಾ ಕೇಳಿದ ಫ್ಯಾನ್ಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.