'ವೀರ ಕಂಬಳ'ನಿರ್ಮಾಪಕನಿಂದ ಕೋಟ್ಯಂತರ ರೂ ದೋಖಾ; ಅರುಣ್ ರೈ ತೋಡಾರ್ ಎಸ್ಕೇಪ್!

Published : Dec 01, 2024, 03:56 PM ISTUpdated : Dec 01, 2024, 04:13 PM IST
'ವೀರ ಕಂಬಳ'ನಿರ್ಮಾಪಕನಿಂದ ಕೋಟ್ಯಂತರ ರೂ ದೋಖಾ; ಅರುಣ್ ರೈ ತೋಡಾರ್ ಎಸ್ಕೇಪ್!

ಸಾರಾಂಶ

ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಹೆಸರು ಹೇಳಿ ಮೋಸ ಎಸಗಿದ್ದು, ಸದ್ಯ ರಾಜೇಂದ್ರ ಸಿಂಗ್ ಬಾಬು ಜೊತೆ ವೀರಕಂಬಳ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಈ ನಿರ್ಮಾಪಕ ಅರುಣ್ ರೈ ತೋಡಾರ್. ಡೆಡ್ಲಿ ಆದಿತ್ಯ ನಾಯಕನಟನಾಗಿ ನಟಿಸ್ತಿರೋ ವೀರ ಕಂಬಳ..

ಇದು ಸ್ಯಾಂಡಲ್ ವುಡ್ ನಿರ್ಮಾಪಕನ ಕುರಿತ ವಂಚನೆಯ ಸ್ಟೋರಿ.. ವಂಚನೆ ಮಾಡಿದ್ದು ಒಂದೋ ಎರಡೋ ಕೋಟಿಯಲ್ಲ, ಬರೋಬ್ಬರಿ 9 ಕೋಟಿ 60ಲಕ್ಷ ಬೃಹತ್ ಮೊತ್ತದ ಹಣ..! ಮೋಸ ಮಾಡಲು ಖ್ಯಾತ ನಿರ್ದೇಶಕನ ಹೆಸರು ದುರುಪಯೋಗ ಮಾಡಿಕೊಳ್ಳಲಾಗಿದೆ.. ರಾಷ್ಟ್ರ ಪ್ರಶಸ್ತಿ ಪಡೆದ ನಿರ್ಮಾಪಕನಿಂದಲೇ ಕೋಟ್ಯಂತರ ರೂ ದೋಖಾ, ರಾಷ್ಟ್ರ ಪ್ರಶಸ್ತಿ ನಿರ್ದೇಶಕನ ಹೆಸರು ಹೇಳಿಕೊಂಡು ಮೋಸ ಎಸಗಲಾಗಿದೆ. 

ಹಾಗಿದ್ರೆ ಈ ಸ್ಟೋರಿ ಏನು? ಇಲ್ಲಿದೆ ನೋಡಿ ಡೀಟೇಲ್ಸ್‌.. 'ವೀರ ಕಂಬಳ' ಚಿತ್ರ ನಿರ್ಮಾಪಕ ಅರುಣ್ ರೈ ತೋಡಾರ್ ಕೋಟ್ಯಂತರ ರೂ ದೋಖಾ ಮಾಡಿದ್ದಾರೆ. 'ವೀರ ಕಂಬಳ ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್, 'ಜೀಟಿಗೆ' ತುಳು ಚಿತ್ರದ ನಿರ್ಮಾಣಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ನಿರ್ಮಾಪಕ ಅರುಣ್ ವಿರುದ್ಧ RMC ಯಾರ್ಡ್ ಠಾಣೆಯಲ್ಲಿ FIR ದಾಖಲಾಗಿದೆ ಎನ್ನಲಾಗಿದೆ. 

ಅಮೆರಿಕಾಗೆ ಹೊರಟುನಿಂತ ಕ್ಷಣದಲ್ಲಿ ಶಿವಣ್ಣ ಫ್ಯಾನ್ಸ್‌ಗೆ ಕೊಟ್ಟಿದ್ದೇನು?

ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಹೆಸರು ಹೇಳಿ ಮೋಸ ಎಸಗಿದ್ದು, ಸದ್ಯ ರಾಜೇಂದ್ರ ಸಿಂಗ್ ಬಾಬು ಜೊತೆ ವೀರಕಂಬಳ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಈ ನಿರ್ಮಾಪಕ ಅರುಣ್ ರೈ ತೋಡಾರ್. ಡೆಡ್ಲಿ ಆದಿತ್ಯ ನಾಯಕನಟನಾಗಿ ನಟಿಸ್ತಿರೋ ವೀರ ಕಂಬಳ ಸಿನಿಮಾ, ಚಿತ್ರದಲ್ಲಿ ಪ್ರಕಾಶ್ ರೈ, ಆರ್ಮುಗಂ ರವಿಶಂಕರ್ ಅಭಿನಯ ಮಾಡುತ್ತಿದ್ದಾರೆ. ಸಿನಿಮಾ ಹೆಸರಲ್ಲಿ ಅರುಣ್ ರೈ ಕೋಟಿ ಕೋಟಿ ದೋಖಾ ಎಸಗಿ, ಇದೀಗ ಖಾಕಿ ಕಣ್ಣಿಗೆ ಬೀಳದೆ ತಲೆಮರೆಸಿಕೊಂಡಿದ್ದಾರೆ!

ವೀರ ಕಂಬಳ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ೀ ವೀರ ಕಂಬಳ ಚಿತ್ರವು ಇನ್ನೂ ಶೂಟಿಂಗ್‌ ಹಂತದಲ್ಲೇ ಇದೆ. ಹಣಕ್ಕಾಗಿ ವರದರಾಜು ಎಂಬ ಉದ್ಯಮಿಯ ಜೊತೆ ಸ್ನೇಹ ಬೆಳೆಸಿ 9 ಕೋಟಿ 60 ಲಕ್ಷ ಹಣ ದೋಚಿದ್ದರು ಅರುಣ್ ಎನ್ನಲಾಗಿದೆ. ತಾನು, ತನ್ನ ನಿರ್ದೇಶಕರಿಬ್ಬರೂ ರಾಷ್ಟ್ರ ಪ್ರಶಸ್ತಿ ವಿಜೇತರು ಎಂದಿದ್ದ ಅರುಣ್, ಗೋಡಂಬಿ ಬ್ಯುಸಿನೆಸ್ ಮಾಡ್ತೀನಿ ಅಂದಿದ್ರಂತೆ. 

ದೊಡ್ಡಸ್ತಿಕೆ ಇರೋದು ನಮ್ಗೆ ಜೀವ ಕೊಡೋರನ್ನ ಬದುಕಿಸಿಕೊಳ್ಳೋದ್ರಲ್ಲಿ: ಕಿಚ್ಚ ಸುದೀಪ್!

ಗೋಡೌನ್ ನಲ್ಲಿ 40 ಕೋಟಿ ಮಾಲ್ ಇದೆ, ಡೆಲ್ಲಿ, ಮುಂಬೈನಲ್ಲಿ 400 ಕೋಟಿ ಹಣ ಲಾಕ್ ಆಗಿದೆ ಎಂದಿದ್ದ ಅರುಣ್ ರೈ, 10 ಕೋಟಿ ಕೊಟ್ರೆ ಡಬಲ್ ಕೊಡ್ತೇನೆ ಎಂದಿದ್ದರು. ಅವರ ಮಾತನ್ನು ನಂಬಿ ವರದರಾಜ್ ಎಂಬವರು ನಿರ್ಮಾಪಕ ಅರುಣ್ ಮಾತು ಕೇಳಿ 9 ಕೋಟಿ 60 ಲಕ್ಷದ ಹಣವನ್ನು ವೈಟ್ ನಲ್ಲಿಯೇ ನೀಡಿದ್ದರು ಎನ್ನಲಾಗಿದೆ. ವಂಚನೆಯ ವಿಚಾರ ಗೊತ್ತಾದ ಕೂಡಲೆ ಅಲರ್ಟ್ ಆದ ವರದರಾಜ್, ಬೆಂಗಳೂರಿನ ಯಶವಂತಪುರ RMC ಯಾರ್ಡ್ ಠಾಣೆಗೆ ದೂರು ನೀಡಿದ್ದಾರೆ. ದೂರು, ದಾಖಲಾದ ಕೂಡಲೇ ಅರುಣ್ ರೈ ತೋಡಾರ್ ಎಸ್ಕೇಪ್ ಆಗಿದ್ದಾರೆ ಎಂಬ ಮಾಹಿತಿ ಇದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ