ಹಳೆಯ ಸಿನಿಮಾ ಡೈಲಾಗನ್ನು ಕೂಡ ಕೇಳಿ 'ಮಾತಂದ್ರೆ ಇದು..' ಅಂತ ತಲೆದೂಗುತ್ತಾರೆ. ಕೆಲವರಂತೂ ಅವರ ರೀಲ್ ಡೈಲಾಗ್‌ಗಳನ್ನು ರಿಯಲ್ ಲೈಫ್‌ನಲ್ಲಿ ಸೀರಿಯಸ್ ಆಗಿ ತಗೊಂಡು ಫಾಲೋ ಮಾಡುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಯಶ್ ಸಿನಿಮಾ..
ಕನ್ನಡದ ರಾಕಿಂಗ್ ಸ್ಟಾರ್, ಕೆಜಿಎಫ್ ಪ್ಯಾನ್ ಇಂಡಿಯಾ ತಾರೆ ಯಶ್ (Yash) ಹಳೆಯ ವೀಡಿಯೋಗಳೆಲ್ಲವೂ ವೈರಲ್ ಆಗುತ್ತಿವೆ. ಅವರು ಯಾವತ್ತೋ ಏನೋ ಹೇಳಿದ್ದು ವೈರಲ್ ಆಗುವುದಷ್ಟೆ ಅಲ್ಲ, ಸಿನಿಮಾದಲ್ಲಿ ಅವರು ಹೇಳಿರುವ ಅದೆಷ್ಟೋ ಡೈಲಾಗ್‌ಗಳೂ ಕೂಡ ಈಗ ವೈರಲ್ ಆಗಿ ಲೈಕ್ಸ್ ಹಾಗೂ ಕಾಮೆಂಟ್ಸ್ ಗಿಟ್ಟಿಸುತ್ತಿವೆ. ಯಶ್ ಈಗ ಗ್ಲೋಬಲ್ ಸ್ಟಾರ್ ಆಗಲು ಹೊರಟಿರೋ ನ್ಯಾಷನಲ್ ಸ್ಟಾರ್.
ಸದ್ಯ ನಟ ಯಶ್ ಅವರು ಅದೇನು ಹೇಳಿದರೂ ಜನರು ಸೀರಿಯಸ್ ಆಗಿ ತಗೋತಾರೆ. ಈಗ ಹೇಳಿದ್ದು ಮಾತ್ರವಲ್ಲ, ಅವರ ಹಳೆಯ ಸಿನಿಮಾ ಡೈಲಾಗನ್ನು ಕೂಡ ಕೇಳಿ 'ಮಾತಂದ್ರೆ ಇದು..' ಅಂತ ತಲೆದೂಗುತ್ತಾರೆ. ಕೆಲವರಂತೂ ಅವರ ರೀಲ್ ಡೈಲಾಗ್‌ಗಳನ್ನು ರಿಯಲ್ ಲೈಫ್‌ನಲ್ಲಿ ಸೀರಿಯಸ್ ಆಗಿ ತಗೊಂಡು ಫಾಲೋ ಮಾಡುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಯಶ್ ಸಿನಿಮಾದಲ್ಲಿ ಹೇಳಿದ್ದ ಹಳೆಯ ಡೈಲಾಗ್ ಒಂದು ಸಖತ್ ವೈರಲ್ ಆಗುತ್ತಿದೆ. ಅದೇನು ನೋಡಿ..
ನ್ಯಾಷನಲ್ ಅವಾರ್ಡ್ ಡ್ರೀಮ್‌ನಲ್ಲಿ ನ್ಯಾಷನಲ್ ಕ್ರಶ್; ಗೆಲ್ತಾರಾ ರಶ್ಮಿಕಾ ಮಂದಣ್ಣ?
'ನಾವು ಹುಡುಗ್ರು ಒಂದ್ ಸಾರಿ ಯಾವುದಾದ್ರೂ ಹುಡುಗಿನ್ನ ಪ್ರೀತಿಸಿಬಿಟ್ರೆ ಮುಗೀತು, ಅವ್ಳೇ ಸರ್ವಸ್ವ.. ಅವ್ಳ ಜಾಗದಲ್ಲಿ ಐಶ್ವರ್ಯಾ ರೈ ಬಂದ್ರೂ ಊಹೂಂ ಇಷ್ಟ ಆಗಲ್ಲ. ಅದೇ ಅದೇ ನಮ್ ಮೈನಸ್ಸು.. ' ಅಂತಿದೆ ಯಶ್ ಡೈಲಾಗ್. ಈಗ ಅದೊಂಥರಾ ವೇದವಾಕ್ಯ ಆದಂತೆ ಆಗೋಗಿದೆ ಹದಿಹರೆಯದ ಹುಡುಗರಿಗೆ. 'ಇದಪ್ಪಾ ಮಾತು ಅಂದ್ರೆ' ಕೆಲವು ಹುಡುಗರು ಕಾಮೆಂಟ್ ಮಾಡಿದ್ದಾರೆ. ಆದರೆ, ಸಿನಿಮಾದ ಡೈಲಾಗ್ ಸಿನಿಮಾದಲ್ಲೇ ಚೆಂದ ನಿಜಜೀವನದಲ್ಲಿ ಅಂತ ಹಲವರು ಅದಕ್ಕೆ ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ, ನಟ ಯಶ್ ಅವರು ಸದ್ಯ ರಾಮಾಯಣ ಹಾಗೂ ಟಾಕ್ಸಿಕ್ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಗೀತೂ ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಸದ್ಯ ಶೂಟಿಂಗ್ ಹಂತದಲ್ಲಿದ್ದು ಬಿಗ್ ಬಜೆಟ್ ಚಿತ್ರವಾಗಿದೆ. ಅದರಂತೆ, ಬಾಲಿವುಡ್ ಮೇಕಿಂಗ್ ರಾಮಾಯಣ ಕೂಡ ಬಿಗ್ ಬಜೆಟ್ ಹೊಂದಿದ್ದು ಈ ಚಿತ್ರಕ್ಕೆ ನಟ ಯಶ್ ಕೂಡ ನಿರ್ಮಾಪಕರಾಗಿದ್ದಾರೆ. ರಾಮಾಯಣದಲ್ಲಿ ನಟ ಯಶ್ ರಾವಣಪಾತ್ರ ಧಾರಿಯಾಗಿದ್ದು, ಬಾಲಿವುಡ್ ನಟ ರಣಬೀರ್ ಕಪೂರ್ ರಾಮನ ಪಾತ್ರ ಮಾಡಲಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ನಟಸುತ್ತಿದ್ದಾರೆ.
ಅಮೆರಿಕಾಗೆ ಹೊರಟುನಿಂತ ಕ್ಷಣದಲ್ಲಿ ಶಿವಣ್ಣ ಫ್ಯಾನ್ಸ್‌ಗೆ ಕೊಟ್ಟಿದ್ದೇನು?
ಸದ್ಯ ಈ ಎರಡೂ ಚಿತ್ರಗಳು ಅಪಾರ ನಿರೀಕ್ಷೆ ಹುಟ್ಟಿಸಿದ್ದು, ಗ್ಲೋಬಲ್ ಸಿನಿಮಾ ಆಗುವತ್ತ ದೃಷ್ಟಿ ನೆಟ್ಟಿವೆ. ಕನ್ನಡ ನಟರ ಸಿನಿಮಾಗಳು ಪ್ರಪಂಚದಲ್ಲಿ ಹೆಸರು ಮಾಡಿದರೆ ಕನ್ನಡಿಗರಿಗೆ ಅದು ಖಂಡಿತ ಖುಷಿಯ ಸಂಗತಿಯೇ ಸರಿ! ಯಶ್ ಅಭಿನಯದ ಕೆಜಿಎಫ್ ಜಗತ್ ಪ್ರಸಿದ್ಧಿ ಪಡೆದಿರವುದು ಗೊತ್ತೇ ಇದೆ.