ಹೆಡ್‌ ಬುಷ್‌' ಚಿತ್ರ ತಂಡಕ್ಕೆ ಶ್ರುತಿ ಹರಿಹರನ್, ವಸಿಷ್ಠ ಸಿಂಹ ಎಂಟ್ರಿ!

By Suvarna News  |  First Published Sep 6, 2021, 10:46 AM IST

ಲೂಸ್ ಮಾದ ಯೋಗಿ ನಂತರ ಹೆಡ್‌ ಬುಷ್ ತಂಡ ಸೇರಿದ ವಸಿಷ್ಠ ಸಿಂಹ ಮತ್ತು ಶ್ರುತಿ ಹರಿಹರನ್.


ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಡಾಲಿ ಅಂದ್ರೆ ಧನಂಜಯ್. ಡಾಲಿ ಬಹುನಿರೀಕ್ಷಿತ ಸಿನಿಮಾ ಹೆಡ್‌ ಬುಷ್‌. ಈ ಚಿತ್ರತಂಡಕ್ಕೆ ಇಡೀ ಕನ್ನಡ ಚಿತ್ರರಂಗವೇ ಸಾಥ್ ನೀಡುತ್ತಿದೆ. ಏಕೆಂದರೆ ದಿನೇ ದಿನೇ ತಂಡಕ್ಕೆ ದೊಡ್ಡ ದೊಡ್ಡ ಸ್ಟಾರ್‌ಗಳು ಸೇರಿಕೊಳ್ಳುತ್ತಿದ್ದಾರೆ. 

ಹೌದು! ನಟ ವಸಿಷ್ಠ ಸಿಂಹ ಎಂಟ್ರಿ ನೀಡುವ ಬಗ್ಗೆ ಸ್ವತಃ ಧನಂಜಯ್ ಅವರೇ ಟ್ಟೀಟ್ ಮಾಡಿ ಬಹಿರಂಗಪಡಿಸಿದ್ದಾರೆ. 'ಡಿಯರ್ ದೋಸ್ತ್ ವೆಲ್ಕ್ ಆನ್‌ ಬೋರ್ಡ್' ಎಂದು ಬರೆದುಕೊಂಡಿದ್ದಾರೆ. ಇದೀಗ ನಟಿ ಶ್ರುತಿ ಹರಿಹರನ್ ಕೂಡ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ.  ವಸಿಷ್ಠ ಮತ್ತು ಶ್ರುತಿ ಇಬ್ಬರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲಿ ಅವರ ಪಾತ್ರದ ಬಗ್ಗೆ ಚಿತ್ರತಂಡ ರಿವೀಲ್ ಕೂಡ ಮಾಡಲಿದೆ . 

ನಟ ಧನಂಜಯಗೆ ಜೋಡಿಯಾಗಿ ಪಾಯಲ್; ಹೆಡ್‌ಬುಶ್‌ ತಯಾರಿ ಶುರು!

Tap to resize

Latest Videos

ಅಗ್ನಿ ಶ್ರೀಧರ್ ಬರೆದಿರುವ ಈ ಕತೆಯನ್ನು ಶೂನ್ಯ ನಿರ್ದೇಶನ ಮಾಡುತ್ತಿದ್ದಾರೆ. ಎಂಪಿ ಜಯರಾಜ್ ಪಾತ್ರದಲ್ಲಿ ಧನಂಜಯ್ ನಟಿಸುತ್ತಿದ್ದು, ಇತ್ತೀಚಿಗಷ್ಟೇ ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಿದ್ದಾರೆ. ಈಗ ಒಬ್ಬೊರಾಗಿ ಖಡಕ್ ಕಲಾವಿದರು ಹೆಡ್‌ಬುಷ್‌ಗೆ ಜತೆಯಾಗುವ ಮೂಲಕ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದ್ದಾರೆ.  ಆರ್‌ಎಕ್ಸ್ 100 ಖ್ಯಾತಿಯ ಪಾಯಲ್ ರಜಪೂತ್‌ ಈ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.  

2019ರಲ್ಲಿ ತೆರೆಕಂಡ ವಧಂ ವೆಬ್‌ ಸೀರಿಸ್‌ನಲ್ಲಿ ನಟಿಸಿ ಶ್ರುತಿ ಹೆಡ್‌ ಬುಷ್‌ ಚಿತ್ರದ ಮೂಲಕ ರೀ- ಎಂಟ್ರಿ ನೀಡಿದ್ದಾರೆ.

 

Welcome on board dear dosta 🎉🎉 pic.twitter.com/Y7E60apggD

— Dhananjaya (@Dhananjayaka)
click me!