
ಗಂಗಾವತಿ (ಸೆ.06): ಕೊರೋನಾ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಭಕ್ತರ ದರ್ಶನಕ್ಕೆ ನಿಷೇಧ ಹೇರಿರುವ ಕಾರಣ, ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಅಂಜನಾದ್ರಿಯ ಆಂಜನೇಯನ ದರ್ಶನ ಸಿಗದೇ, ನಟ ಪುನೀತ್ ರಾಜ್‌ಕುಮಾರ್ ವಾಪಸ್ ಆಗಿದ್ದಾರೆ.
ಈ ಸಂದರ್ಭದಲ್ಲಿ ಸಣ್ಣಾಪುರ ಜಲಾಶಯ ಮತ್ತು ನದಿ ತೀರದಲ್ಲಿರುವ ಗುಡ್ಡ, ಬೆಟ್ಟಗಳನ್ನು ವೀಕ್ಷಿಸಿದ್ದಾರೆ.
ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕೂತು ಊಟ ಮಾಡಿ ಸರಳತೆ ಮೆರೆದ ಪುನೀತ್ ರಾಜ್‌ಕುಮಾರ್
ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದರು. ಆದರೆ, ಬೆಟ್ಟ ಬಂದ್ ಆಗಿತ್ತು. ಹೀಗಾಗಿ, ಗಂಗಾವತಿ ಸಮೀಪದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರು ಸುತ್ತಾಟ ನಡೆಸಿದ್ದಾರೆ. ಈ ವೇಳೆ ಕಣ್ಣಿಗೆ ಬಿದ್ದ ಕುರಿಗಾಯಿಗಳನ್ನ ಭೇಟಿ ಮಾಡಿ ಅವರ ಜೊತೆ ಕೂತು ಊಟ ಮಾಡಿದ್ದಾರೆ.
ಹೊಸಪೇಟೆ ಕಮಲಾಪುರ ಹತ್ತಿರವಿರುವ ಆರೆಂಜ್ ಕೌಂಟಿ ಹೋಟೆಲ್ ನಲ್ಲಿ ಚಲನಚಿತ್ರ ಚಿತ್ರೀಕರಣ ಕಾರ್ಯದಲ್ಲಿ ತೊಡಗಿದ ಪುನೀತ್ ರಾಜ್ ಕುಮಾರ್ ಭಾನುವಾರ ಬಿಡುವು ಮಾಡಿಕೊಂಡು ಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದರು. ಆದ್ರೆ, ಕೊರೋನಾ ಕಾರಣ ಸರ್ವಜನಿಕ ದರ್ಶನಕ್ಕೆ ನಿಷೇಧ ಇದ್ದಿರಿಂದ ಅವರಿಗೆ ದರ್ಶನ ಭಾಗ್ಯ ಸಿಗಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.