
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೆಪ್ಟೆಂಬರ್ 2ರಂದು 50ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ಕಾಟದಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುವುದಿಲ್ಲ ಎಂದು ಸುದೀಪ್ ಪತ್ರದ ಮೂಲಕ ತಿಳಿಸಿದ್ದರು. ಆದರೆ 50 ತುಂಬಾ ಸ್ಪೆಷಲ್ ಆಗಿರುವ ಕಾರಣ ಆಪ್ತರೊಟ್ಟಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಸುದೀಪ್ ಹುಟ್ಟುಹಬ್ಬ ಸ್ಪೆಷಲ್ ಮಾಡಬೇಕು ಎಂದು ಕಿಚ್ಚನ ಬಯೋಗ್ರಫಿ ಆಡಿಯೋ ಬಿಡುಗಡೆ ಮಾಡಲಾಗಿದೆ. ಪತ್ರಕರ್ತ ಡಾ. ಶರಣ್ ಹುಲ್ಲೂರು ಅವರು ಬರೆದಿರುವ ಕಿಚ್ಚನ ಬಯೋಗ್ರಫಿ 'ಕನ್ನಡದ ಮಾಣಿಕ್ಯ ಕಿಚ್ಚ' ಪುಸ್ತಕ ಆಡಿಯೋ ರೂಪದಲ್ಲಿ ಬಂದಿದೆ. ಈ ಪುಸ್ತಕವನ್ನು ಇ-ಬುಕ್ ಆವೃತ್ತಿಯನ್ನು ಮೈಲ್ಯಾಂಗ್ ಒದಗಿಸುತ್ತಿದೆ. ಮೈಲ್ಯಾಂಗ್ ಆ್ಯಪ್‌ನಲ್ಲಿ ಈ ಪುಸ್ತಕ ಲಭ್ಯವಿದ್ದು, ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ಯ ಆಡಿಯೋಗೆ ಧ್ವನಿ ನೀಡಿದ್ದಾರೆ. ಕಳೆದ ವರ್ಷ ಸುದೀಪ್ ಅವರ ಬಯೋಗ್ರಫಿ ಪುಸ್ತಕ ರೂಪದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದ್ದರು.
'ಕನ್ನಡದ ಮಾಣಿಕ್ಯ ಕಿಚ್ಚ ಸುದೀಪ್ ಅವರ ಕುರಿತಾದ ಆಡಿಯೋ ಬಯೋಗ್ರಫಿ ಚಂದನ್ ಆಚಾರ್ ಅವರ ಧ್ವನಿಯಲ್ಲಿ ತಯಾರಾಗಿದ್ದು, ಕಿಚ್ಚನ ಹುಟ್ಟು ಹಬ್ಬಕ್ಕೆ ಬಿಡುಗಡೆಯಾಗಲಿದೆ' ಎಂದು ಚಂದನ್ ಆಚಾರ್ ಬರೆದುಕೊಂಡಿದ್ದರು. ಸುದೀಪ್ ಅವರ ಬರ್ತಡೇ ಸೆಲೆಬ್ರೇಷನ್‌ನಲ್ಲಿ ಭಾಗಿಯಾಗಿದ್ದ ಚಂದನ್ 'ನಿಮ್ಮ ಸುತ್ತ ಇರುವುದಕ್ಕೆ ಸದಾ ಖುಷಿಯಾಗುತ್ತದೆ. ನೀವು ಡಿಯರ್ ಸುದೀಪ್ ಸರ್, ಜೆಂಟಲ್ ವ್ಯಕ್ತಿ. ನೀವಿಬ್ಬರೂ ಅದ್ಭುತ ಕಪಲ್,' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.