ಮಗಳು ವಂಶಿಕಾಗೆ ಟ್ಯಾಲೆಂಟ್‌ ಬಂದಿರೋದು ನನ್ನಿಂದ ಅಂತಾರೆ ಆದರೆ ಅವರಮ್ಮ ಕೂಡ ಬೆಸ್ಟ್ ಡ್ಯಾನ್ಸರ್: ಮಾಸ್ಟರ್ ಆನಂದ್

Published : Feb 21, 2025, 12:40 PM ISTUpdated : Feb 21, 2025, 12:42 PM IST
ಮಗಳು ವಂಶಿಕಾಗೆ ಟ್ಯಾಲೆಂಟ್‌ ಬಂದಿರೋದು ನನ್ನಿಂದ ಅಂತಾರೆ ಆದರೆ ಅವರಮ್ಮ ಕೂಡ ಬೆಸ್ಟ್ ಡ್ಯಾನ್ಸರ್: ಮಾಸ್ಟರ್ ಆನಂದ್

ಸಾರಾಂಶ

ಮಾಸ್ಟರ್ ಆನಂದ್ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಮಗಳಿಗೆ ಹೆಚ್ಚು ಪ್ರೀತಿ ತೋರಿಸುತ್ತಿದ್ದಾರೆ ಎಂಬ ಟೀಕೆಗಳಿಗೆ ಆನಂದ್ ಪ್ರತಿಕ್ರಿಯಿಸಿದ್ದಾರೆ. ಮಗ ಗುರುಕುಲದಲ್ಲಿ ಹೊಂದಿಕೊಳ್ಳಲಾಗಲಿಲ್ಲ ಎಂದು ಪತ್ನಿ ಯಶಸ್ವಿನಿ ಹೇಳಿದ್ದಾರೆ. ಇಬ್ಬರೂ ಮಕ್ಕಳು ತಮಗೆ ಪ್ರಿಯರೆಂದು ಆನಂದ್ ಸ್ಪಷ್ಟಪಡಿಸಿದ್ದಾರೆ. ಮಕ್ಕಳ ಬಗ್ಗೆ ನಕಾರಾತ್ಮಕ ಕಾಮೆಂಟ್ ಮಾಡುವವರಿಗೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

ನಟ, ನಿರ್ದೇಶಕ ಮಾಸ್ಟರ್ ಆನಂದ್ ಫ್ಯಾಮಿಲಿ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದೆ. ಸಿನಿಮಾ ಕೆಲಸಗಳಲ್ಲಿ ಆನಂದ್ ಬ್ಯುಸಿಯಾಗಿದ್ದಾರೆ, ಪತ್ನಿ ಯಶಸ್ವಿನಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ ಹಾಗೆ ಮಕ್ಕಳಿಬ್ಬರು ಸ್ಕೂಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಸಮಾಜದ ದೃಷ್ಟಿಯಲ್ಲಿ ಮಗಳಿಗೆ ಕೊಡುತ್ತಿರುವ ಪ್ರೀತಿ ಮಗನಿಗೆ ಕೊಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಸ್ವತಃ ಅನಂದ್ ಉತ್ತರಿಸಿದ್ದಾರೆ.

ಆನಂದ್ ಪತ್ನಿ ಯಶಸ್ವಿನಿ ಮಾತು:  ಮಗ ಗುರುಕುಲದಲ್ಲಿ ಇದ್ದಾಗ ಏನಾದರೂ ಕಲಿಯುತ್ತಾನೆ ಅಂದುಕೊಂಡ್ವಿ ಆದರೆ ಹೋಮ್‌ ಸಿಕ್ ಆಗಿ ಸರಿಯಾಗಿ ಊಟ ಮಾಡುತ್ತಿರಲಿಲ್ಲ. ತುಂಬಾ ಚೆನ್ನಾಗಿ ತಿನ್ನುತ್ತಿದ್ದವನು ಊಟ ಮಾಡದೆ ಸಣ್ಣಗಾಗಿಬಿಟ್ಟ. ನಾವು ಭೇಟಿ ಮಾಡಿ ಬಂದ ಮೂರು ದಿನ ಬೇಸರದಲ್ಲಿ ಇರುತ್ತಿದ್ದ..ಅಮ್ಮ ನಿನ್ನ ದುಪಟಾ ಕೊಡು ತಬ್ಬಿಕೊಂಡು ಮಲಗುತ್ತೀನಿ ಎನ್ನುತ್ತಿದ್ದ. ಅವನು ತುಂಬಾ ಜೋವಿಯಲ್ ವ್ಯಕ್ತಿ ಆದರೆ ಅಲ್ಲಿ ಅಡ್ಜಸ್ಟ್‌ ಆಗಲಿಲ್ಲ.

ಅಯ್ಯೋ ದೇವ್ರೆ.....ವಿಜಯಲಕ್ಷ್ಮಿ ಧರಿಸಿರುವ ಈ ಸೀರೆ ಬೆಲೆಗೆ ಒಂದು ಮನೆ ಲೀಸ್‌ಗೆ ಹಾಕೋಬೋದಿತ್ತು ನೋಡಿ!

ಆನಂದ್: ನಮಗೆ ಇಬ್ಬರೂ ಮಕ್ಕಳು ಮುದ್ದು. ಮಗಳು ಟಿವಿ ಸಿನಿಮಾ ಮಾಡಲು ಶುರು ಮಾಡಿದ ತಕ್ಷಣ ಆಕೆಯನ್ನು ಹೆಚ್ಚಿಗೆ ಪ್ರೀತಿಸಲು ಹೇಗೆ ಸಾಧ್ಯ? ಅವನು ಮಾಡಲ್ಲ ಎಂದ ತಕ್ಷಣ ಪ್ರೀತಿ ಕಡಿಮೆ ಆಗುತ್ತೆ? ನೀವು 24 ಗಂಟೆ ಜೊತೆಗಿದ್ದೀರಾ? ನನ್ನ ಮಗ ಏನು, ನಾನು ಅವನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೀನಿ, ಅವನಲ್ಲಿ ಇರುವ ಒಳ್ಳೆ ಗುಣಗಳು ಏನು? ಇಷ್ಟೆಲ್ಲಾ ಪ್ರೂವ್ ಮಾಡುವುದಕ್ಕೆ ನಾನು ರೀಲ್ಸ್ ಮಾಡಿ ಹಾಕ್ಲಾ?. ಒಮ್ಮೆ ನಾನು ಟಿವಿಯಲ್ಲಿ ಹಾವುಗಳು ಅದರಲ್ಲೂ ಆನಕೊಂಡಾ ಮತ್ತು ಹಲ್ಲಿಗಳನ್ನು ನೋಡಿದಾಗ ಚೀ ಎನ್ನುತ್ತಿದ್ದೆ. ಆಗ ಅವನು ತುಂಬಾ ಕೂಲ್ ಆಗಿ ಯಾಕೆ ಹಾಗೆ ಹೇಳುತ್ತೀರಾ ಅದು ಇರುವುದೇ ಹಾಗೆ ಅದನ್ನು ಬದಲಾಯಿಸಲು ಆಗಲ್ಲ ನೀವು ಏನೇ ಹೇಳಿದ್ದರೂ ಇರುವುದು ಇದೇ ತರ ಮಿರಿಮಿರಿ ತರ ಇದ್ದರೆ ಅದನ್ನು ಬದಲಾಯಿಸಬಹುದು..... ಹೀಗೆ ಸಾಕಷ್ಟು ಹೇಳಿದ. ಅದನ್ನು ಕೇಳಿ ನಾನು ಶಾಕ್ ಆಗಿಬಿಟ್ಟಿ ಅಯ್ಯೋ ಇವನು ಇಷ್ಟು ಚಿಕ್ಕ ವಯಸ್ಸಿಗೆ ಹೀಗೆ ಯೋಚನೆ ಮಾಡ್ತಾನೆ. ಚಿಕ್ಕ ವಯಸ್ಸಿನಲ್ಲಿ ಮಗಗೂ ರಿಯಾಲಿಟಿ ಶೋ ಮಾಡಿದ್ದಾರೆ. ಪ್ರಪಂಚದಲ್ಲಿ ಒಂದು ಸ್ಕೇಲ್‌ ಇದೆ ಅದರ ಪ್ರಕಾರ ಅವನು ಬೆಳೆದರೆ ಮಾತ್ರ ಯಶಸ್ಸು ಅಂತಾರೆ ಇಲ್ಲ ಅಂದ್ರೆ ಇಲ್ಲ ಅಂತಾರೆ. ನಾವು ಯಾವುದೇ ಕಾರಣಕ್ಕೂ ಮಕ್ಕಳ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡುವವರಿಗೆ ಪ್ರತಿಕ್ರಿಯೆ ನೀಡಬಾರದು. ಮೊದಲು ಸೆಲೆಬ್ರಿಟಿಗಳ ಬಗ್ಗೆ ಕಾಮೆಂಟ್ ಬರೆಯುತ್ತಿದ್ದಿದ್ದು ಪೇಪರ್‌ ಅಥವಾ ಸೈಟ್‌ಗಳಲ್ಲಿ ಅದು ಜರ್ನಲಿಸ್ಟ್‌ಗಳು ಮಾತ್ರ ಬರೆಯುತ್ತಿದ್ದರು ಆದರೆ ಈಗ ಸೋಷಿಯಲ್ ಮೀಡಿಯಾದಿಂದ ಪ್ರತಿಯೊಬ್ಬರು ಬರೆಯಲು ಶುರು ಮಾಡಿದ್ದಾರೆ. ವಂಶಿಕಾ ಟ್ಯಾಲೆಂಟ್ ಇರುವುದು ಅನಂದ್‌ ಅವರಿಂದ ಎಂದು ಜನರು ಮಾತನಾಡುತ್ತಾರೆ ಆದರೆ ನನ್ನ ಹೆಂಡತಿ ಕೂಡ ಟ್ಯಾಲೆಂಟ್‌ ಜಾಸ್ತಿ. 

ಜೀವನದಲ್ಲಿ ಏನನ್ನೂ ಬದಲಾಯಿಸಲು ಆಗದೇ ಇದ್ದಾಗ ಹೊಸ ಲುಕ್‌ಗೆ ಬದಲಾಗಿ; ಚಂದನ್ ಶೆಟ್ಟಿ ಫೋಟೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ