Chandan Shetty: ಹೊಸ ಲುಕ್ ನೋಡಿ ಚಂದನ್‌ ಶೆಟ್ಟಿಗೆ ಕೇಳ್ತಿದ್ದಾರೆ ಫ್ಯಾನ್ಸ್, 'ಏನ್ ಬಾಸ್.. ಗುಡ್ ನ್ಯೂಸ್ ಆಆ..!

Published : Feb 20, 2025, 06:50 PM ISTUpdated : Feb 20, 2025, 06:54 PM IST
Chandan Shetty: ಹೊಸ ಲುಕ್ ನೋಡಿ ಚಂದನ್‌ ಶೆಟ್ಟಿಗೆ ಕೇಳ್ತಿದ್ದಾರೆ ಫ್ಯಾನ್ಸ್, 'ಏನ್ ಬಾಸ್.. ಗುಡ್ ನ್ಯೂಸ್ ಆಆ..!

ಸಾರಾಂಶ

ನಟ ಚಂದನ್ ಶೆಟ್ಟಿ ಹೊಸ ಲುಕ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಮೀಸೆ, ಗಡ್ಡ ತೆಗೆದು ಕುರುಚಲು ಗಡ್ಡದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಬದಲಾವಣೆಗೆ ಹಲವರು ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯಕ್ಕೆ ಯಾವುದೇ ಸಿನಿಮಾ ಶೂಟಿಂಗ್ ಇಲ್ಲದ ಕಾರಣ, ರಿಲ್ಯಾಕ್ಸ್ ಮೂಡ್‌ನಲ್ಲಿ ಈ ರೀತಿ ಲುಕ್ ಬದಲಾಯಿಸಿಕೊಂಡಿದ್ದಾರೆ ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.

ಸಿಂಗರ್ ಹಾಗೂ ನಟ ಚಂದನ್ ಶೆಟ್ಟಿಯವರು (Chandan Shetty) ಸದ್ಯ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಭಾರಿ ವೈರಲ್ ಆಗ್ತಿದಾರೆ. ಕಾರಣ, ಇಂದು ಅವರು ಮಾಡಿಕೊಂಡ ಹೊಸ ಲುಕ್..! ಮೀಸೆ, ದಾಡಿ ತೆಗೆದು, ಗಲ್ಲದ ಬಳಿ ಕುರುಚಲು ಗಡ್ಡ ಇಟ್ಟು ಫೋಟೋ ತೆಗೆದು ಚಂದನ್ ಶೆಟ್ಟಿಯವರು ತಮ್ಮ ಆಫೀಶಿಯಲ್ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದನ್ನು ನೋಡಿ ಹಲವರು ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡತೊಡಗಿದ್ದಾರೆ. 

ಕೆಲವರು 'ನೀವೀಗ ಮುಸ್ಲಿಂ ತರ ಕಾಣ್ತೀರ ಅಂದ್ರೆ ಇನ್ನೂ ಕೆಲವು ಬೆಂಕಿ ಅಂತ ಇಮೋಜಿ ಹಾಕಿದ್ದಾರೆ. ಯಾರೋ ಒಬ್ರು ಕೆಲವರು 'ಹಳೇ ಚಂದು ಈಸ್ ಬ್ಯಾಕ್' ಅಂತ ಹಾಕಿದ್ರೆ ಹಲವರು ಊಹಿಸಲಾಗದ ವಿಭಿನ್ನ ಕಾಮೆಂಟ್ ಹಾಕಿದ್ದಾರೆ. ಆದರೆ, ಚಂದನ್ ಶೆಟ್ಟಿ ಯಾಕೆ ಹೀಗೆ ವಿಭಿನ್ನವಾಗಿ ತಮ್ಮ ಲುಕ್ ಬದಲಾಯಿಸಿದ್ದಾರೆ ಎಂದು ಹಲವರು ಕುತೂಹಲದಿಂದ ಕೇಳಿದ್ದಾರೆ. ಯಾರೋ ಒಬ್ಬರು ತಮಾಷೆಯಾಗಿ 'ಮಾಡಲು ಕೆಲಸವಿಲ್ಲದೇ ಮೀಸೆ ತೆಗೆದ್ರಾ ಚಂದನ್ ಶೆಟ್ಟಿ..' ಅಂತ ಕಾಲೆಳೆದಿದ್ದಾರೆ!

ಈ ಬಗ್ಗೆ ಸ್ವತಃ ಚಂದನ್ ಶೆಟ್ಟಿ ಅವರು ಏನಂತಿದಾರೆ? ಇಲ್ನೋಡಿ ಉತ್ತರ.. ಸದ್ಯ ಕಾಟನ್ ಕ್ಯಾಂಡಿ ಮ್ಯೂಸಿಕ್ ವಿಡಿಯೋ ಸಖತ್ ಹಿಟ್ ಆಗಿದ್ದು ಅದರ ಖುಷಿ ಹಾಗೂ ಸಕ್ಸಸ್ ಮೀಟ್ ಸೆಲೆಬ್ರೇಟ್ ಮಾಡ್ತಿದೀನಿ. ನನ್ ಟೀಮ್ ಜೊತೆ ಡಿನ್ನರ್ ಮಾಡಿ ಇಡೀ ಟೀಮ್‌ ಜೊತೆ ಸಂತೋಷ್ ಶೇರ್ ಮಾಡ್ಕೊಂಡೆ. ಕೈನಲ್ಲಿ ಇರೋ ಸಿನಿಮಾಗಳ ಶೂಟಿಂಗ್ ಸದ್ಯಕ್ಕೆ ಇಲ್ಲ. ಜೊತೆಗೆ, ನನ್ನ ಸಿನಿಮಾಗಳ ಸಂಗೀತ ನಿರ್ದೇಶನ ನಡಿತಾ ಇದೆ. ಆದ್ರೆ ಯಾವುದೇ ಶೂಟಿಂಗ್ ಇನ್ನು ಎರಡು ವಾರ ಇಲ್ಲ. ಸೋ, ಈ ನ್ಯೂ ಗೆಟಪ್..' ಎಂದಿದ್ದಾರೆ. 

ಅಂದ್ರೆ, ಚಂದನ್ ಶೆಟ್ಟಿಯವರು ಸದ್ಯ ರಿಲಾಕ್ಸ್ ಮೂಡನಲ್ಲಿ ಇದ್ದಾರೆ. ಹೌದು, ಸಿಕ್ಕಾಪಟ್ಟೆ ಕೆಲಸ, ಬೇಜಾನ್ ಸಕ್ಸಸ್, ಜಾಸ್ತಿ ಓಡಾಟ ಆದ್ಮೆಲೆ ಒಂದ್ ಸ್ವಲ್ಪ ರಿಲ್ಯಾಕ್ಸ್ ಮಾಡ್ಬೇಕಲ್ಲ..! ಇದು ಹಾಗೆ ಅಂದ್ಕೋಬಹುದು. ಹಿಮಾಚಲ ಪ್ರದೇಶದ ಟೂರ್ ಆಯ್ತು, ಆಸ್ಟ್ರೇಲಿಯಾ ಹೋಗಿ ಬಂದಿದ್ದಾಯ್ತು, ಕಾಟನ್ ಕ್ಯಾಂಡಿ ಮ್ಯೂಸಿಕ್ ಆಲ್ಬಂ ಸೂಪರ್ ಹಿಟ್ ಆಗಿದ್ದೂ ಆಯ್ತು.. ಈಗೇನಿದ್ರೂ ಸ್ವಲ್ಪ ರಿಲಾಕ್ಸ್.. ಅದು ಸರಿನೇ, ತಪ್ಪನಿದೆ ಅದ್ರಲ್ಲಿ ಅಲ್ವಾ...?

ಆದ್ರೂ ಕೆಲವು ಆತ್ಮೀಯರು ಹಳೆಯದನ್ನು ಮರೆಯದೇ, 'ಸಿಂಗಲ್ ಲೈಫೇ ಬೆಸ್ಟ್ ಮಚ್ಚಾ..' ಎಂದು, ಹಾಗೂ 'ಏನ್ ಹೊಸ ಸ್ಟೈಲ್ ಗುರೂ..? ಏನಾದ್ರೂ ಹೊಸ ನ್ಯೂಸ್ ಇದ್ಯಾ.. ಆ..?' ಅಂತ ಕಾಮೆಂಟ್ ಮಾಡಿದಾರೆ. ಆದ್ರೆ ಅದ್ಯಾವುದಕ್ಕು ಚಂದನ್ ಶೆಟ್ಟಿ ರಿಪ್ಲೈ ಮಾಡಿಲ್ಲ. ಸದ್ಯ ಅವರು 'ಸಿಂಗಲ್ ಲೈಫ್ ಚೆನ್ನಾಗಿ ಎಂಜಾಯ್ ಮಾಡ್ತಿದೀನಿ, ಸದ್ಯಕ್ಕೆ ಮತ್ತೆ ಮಿಂಗಲ್ ಆಗೋ ಯಾವುದೇ ಯೋಚ್ನೆ ಇಲ್ಲ' ಅಂತ ಸಾಕಷ್ಟು ಸಾರಿ ಹೇಳಿದ್ದಾಗಿದೆ. ಮತ್ತೆ ಮತ್ತೆ ಅದೇ ಪ್ರಶ್ನೆಗೆ ಮತ್ತೆ ಮತ್ತೆ ಅದೇ ಉತ್ತರ ಕೊಡುವುದು ಅವರಿಗೆ ಇಷ್ಟವಿಲ್ಲ ಅನ್ಸುತ್ತೆ.. ಅದಕ್ಕೇ ಅದೇ ಉತ್ತರವನ್ನು 'ಮೌನ'ದ ರೂಪದಲ್ಲಿ ಕೊಡುತ್ತಿದ್ದಾರೆ ಅಷ್ಟೇ...!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ