
ಉತ್ತರ ಕನ್ನಡ ಜಿಲ್ಲೆಯಲ್ಲೂ ಕರಾವಳಿ ಇದೆ. ಆದರೆ ಬಹಳಷ್ಟು ಜನರು ಕರಾವಳಿ ಎಂದರೆ ಮಂಗಳೂರು ಅಂತಲೇ ಭಾವಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ ಹಾಗೂ ಅಂಕೋಲಾ ಭಾಗಗಳಲ್ಲಿ ಕರಾವಳಿಯ ಬಹಳಷ್ಟು ತೀರಗಳು ಇವೆ. ಜತೆಗೆ, ಅಲ್ಲಿನ ಕರಾವಳಿಯ ಜನರ ಭಾಷೆ, ಬದುಕು ಹಾಗೂ ಸಂಪ್ರದಾಯ-ಆಚರಣೆಗಳು ಬೇರೆಯದೇ ರೀತಿಯಲ್ಲಿವೆ. ಈ ಸಂಗತಿಗಳ ಬಗ್ಗೆ ಹೊಸಬರ ಮತ್ಸ್ಯಗಂಧ ಸಿನಿಮಾ ಟೀಮ್ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಟೀಸರ್ ಬಿಡುಗಡೆ ಮಾಡಿರುವ ಮತ್ಸ್ಯಗಂಧ ಸಿನಿಮಾ ಟೀಮ್ 'ನಮ್ಮದು ಕರುನಾಡು.. ಹಲವಾರು ಸಂಸ್ಕೃತಿ, ಸಂಪ್ರದಾಯ, ಭಾಷೆಗಳ ಬೆರೆತ ನಾಡು..ಕೆಲವೊಂದು ಚಿರಪರಿಚಿತ ವಿದೆ, ಇನ್ನೂ ಕೆಲವು ಜಿಲ್ಲೆಯ ಭಾಷೆ, ಸಂಪ್ರದಾಯಗಳ ಪರಿಚಯ ನಮಗಿರುವುದಿಲ್ಲ. ಹಾಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಅಂದರೆ ಮಂಗಳೂರು ಎನ್ನುವುದುಂಟು. ಕರಾವಳಿ ಎಂದರೆ ಅದು ಮಂಗಳೂರು ಎಂಬ ಊಹೆ, ಮನಸ್ಥಿತಿ ಹಲವರಿಗಿದೆ.
ಆಗರ್ಭ ಶ್ರೀಮಂತೆ, ಐರ್ಲೆಂಡ್‌ನಲ್ಲಿ ಮಗ; ಮದ್ವೆಯಾದ್ರೂ ಒಂಟಿ ಬಾಳು, ಹೇಮಾ ಚೌಧರಿಗೆ ಇದೆಂಥ ಗೋಳು!
ಆದರೆ ನಮ್ಮದು ಮಂಗಳೂರಲ್ಲ, ಉತ್ತರ ಕನ್ನಡ ಜಿಲ್ಲೆ. ಇಲ್ಲಿಯ ಭಾಷೆ ,ವೈವಿದ್ಯತೆ ಬೇರೆ . ಅದನ್ನು ನಾವು ನಮ್ಮ ಮತ್ಸ್ಯಗಂಧ ಚಿತ್ರದ ಮೂಲಕ ಹೊರಜಗತ್ತಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದೇವೆ. ದಯವಿಟ್ಟು ಟೀಸರ್ ನೋಡಿ ನಮ್ಮನ್ನು ಪ್ರೋತ್ಸಾಹಿಸಿ, ಬಳಿಕ, ಸಿನಿಮಾ ನೋಡಿ ಆಶೀರ್ವದಿಸುವುದನ್ನುಮರೆಯಬೇಡಿ' ಎಂದು ಟೀಸರ್ ಲಾಂಚ್ ಸಂಬಂಧ ಮಾಡಿರುವ ಪೋಸ್ಟ್‌ನಲ್ಲಿ ಬರೆದುಕೊಂಡಿದೆ ಮತ್ಸ್ಯಗಂಧ ಸಿನಿಮಾ ಟೀಮ್.
ಕಪ್ಪು ಮೈ ಬಣ್ಣ, ಗೂನು ಬೆನ್ನಿನ ನಟಿ, 'ಮಿನುಗು ತಾರೆ' ಕಲ್ಪನಾ ದುರಂತ ಕಥೆಗೆ 'ಕಾರಣಕರ್ತ' ಯಾರು..!?
ಅಂದಹಾಗೆ, ಮತ್ಸ್ಯಗಂಧ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಉಳಿದಂತೆ ಭಜರಂಗಿ ಲೋಕಿ, ಶರತ್ ಲೋಹಿತಾಶ್ವ, ನಾಗರಾಜ್ ಬೈಂದೂರು, ಕಿರಣ್ ನಾಯಕ್, ದಿಶಾ ಶೆಟ್ಟಿ, ಪಿಡಿ ಸತೀಶ್ ಸೇರದಂತೆ ಹಲವು ಕಲಾವಿದರು ನಟಿಸಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಇದೇ ತಿಂಗಳು ಅಂದರೆ ಫೆಬ್ರವರಿ 2024ರಲ್ಲಿ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿದೆ. ಅಂದಹಾಗೆ ಈ ಚಿತ್ರವನ್ನು ದೇವರಾಜ್ ಪೂಜಾರಿ ನಿರ್ದೇಶನ ಮಾಡಿದ್ದಾರೆ.
ಅಂದು ಫ್ಯಾಮಿಲಿಗಾಗಿ ಹೋರಾಡಿ ಒಬ್ಬಂಟಿಯಾದ್ರು, ಮಿಲ್ಲಾ ದತ್ತು ಪಡೆದು ಸದ್ಯ ಜಂಟಿಯಾದ್ರು ನಟಿ ಶಕೀಲಾ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.