ನಟ ಹಾಗೂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ 'ಉಪೇಂದ್ರ' ಸಿನಿಮಾದಲ್ಲಿ ಮೂವರು ನಾಯಕಿಯರನ್ನು ಬಳಸಿಕೊಂಡಿರುವುದಕ್ಕೆ ಕಾರಣ ರಿವೀಲ್ ಮಾಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಉಪೇಂದ್ರ ಸಿನಿಮಾದಲ್ಲಿ ಮೂವರು ನಟಿಯರನ್ನು ಸಿನಿಮಾದ ನಾಯಕಿಯರಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅದರಲ್ಲಿ ದಾಮಿನಿ ಲವರ್ ಆಗಿ, ರವೀನಾ ಟಂಡನ್ ಅಭಿಲಾಷೆ ತೀರಿಸಿಕೊಳ್ಳುವುದಕ್ಕಾಗಿ ಹಾಗೂ ಪ್ರೇಮಾ ಹೆಂಡತಿ ಜವಾಬ್ದಾರಿ ತೋರಿಸುವುದಕ್ಕಾಗಿ ಸೃಜಿಸಿರುವ ಮೂರು ಪಾತ್ರಗಳಾಗಿವೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಉಪೇಂದ್ರ ಸಿನಿಮಾದ ಅರ್ಥ ಏನೆಂದು ಕೇಳಿದರೆ 'ಉ' ಎಂದರೆ ಉಪೇಂದ್ರ, 'ಪೇ' ಎಂದರೆ ಪ್ರೇಮ, 'ದ' ಎಂದರೆ ದಾಮಿನಿ ಹಾಗೂ 'ರ್' ಒತ್ತಕ್ಷರಕ್ಕೆ ಎಂದರೆ ರವೀನಾ ಟಂಡನ್ ಎಂದು ಅರ್ಥ ಕಲ್ಪಿಸಲಾಗಿತ್ತು. ಒಂದರ್ಥದಲ್ಲಿ ಇದನ್ನು ಕೂಡ ಅಲ್ಲಗಳೆಯುವಂತಿಲ್ಲ. ಮೂವರು ನಟಿಯರ ಹೆಸರು, ನಾಯಕನ ಹೆಸರಲ್ಲಿ ಸೇರ್ಪಡೆ ಆಗಿ ಸಿನಿಮಾದ ಹೆಸರು ಕೂಡ ಇಟ್ಟಿದ್ದರು. ಇದು ಅವರ ಬುದ್ಧಿವಂತಿಕೆ ಎಂದು ಕೂಡ ಹೇಳಲಾಗುತ್ತಿತ್ತು.
undefined
ಗಂಡನ 2ನೇ ಮದುವೆ ನಿಲ್ಲಿಸಿದ ಮೊದಲ ಹೆಂಡತಿ; ನಾನವನಲ್ಲ ಎಂದ ಪತಿರಾಯ!
ಈಗ ನಟ ಉಪೇಂದ್ರ ಅವರು ಆಂಕರ್ ಅನುಶ್ರೀ ಅವರೊಂದಿಗೆ ಕೊಟ್ಟ ಸಂದರ್ಶನದಲ್ಲಿ ಉಪೇಂದ್ರ ಸಿನಿಮಾದ ಬಗ್ಗೆ ಮಾತನಾಡುತ್ತಾ ಮೂವರು ನಟಿಯರ ಪಾತ್ರಗಳ ವಿವರಣೆ ಪಡೆದುಕೊಂಡಿದ್ದಾರೆ. ಇನ್ನು ಈ ವಿಡಿಯೋ ಹಳೆಯಾದಾಗಿದ್ದರೂ ಉಪೇಂದ್ರ ಅವರ ಆಲೋಚನೆ ಹಾಗೂ ಪಾತ್ರಗಳ ಹಂಚಿಕೆ ಕುರಿತು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯದಿಂದ ನೋಡುವಂತಹ ವಿಡಿಯೋ ಅಗಿದೆ. ಉಪೇಂದ್ರ ಸಿನಿಮಾದಲ್ಲಿ ದಾಮಿನಿಯನ್ನು ಲವರ್ ಎಂದು ಹೇಳಿಕೊಂಡಿದ್ದಾರೆ. ಲವರ್ ಎಂದಾಕ್ಷಣ ಯಾವುದೇ ಕಾಮ, ಆಸೆ ಭಾವನೆ ಇಲ್ಲದೆ ಕಣ್ಣಲ್ಲಿಯೇ ಪ್ರೀತಿ ಮಾಡುವುದು ಎಂಬರ್ಥವನ್ನು ತಿಳಿಸಿದ್ದಾರೆ. ಇದಕ್ಕಾಗಿ ದಾಮಿನಿ ಎದುರಿಗೆ ತುಸು ದೂರದಲ್ಲಿ ಕುಳಿತುಕೊಂಡು ಲವ್ ಮಾಡು ಎಂದು ಕೇಳುತ್ತಾರೆ.
ಸರ್ಕಾರಿ ಬಸ್ಸಿನಲ್ಲಿ ಜನಿಸಿದ ಮಗುವಿಗೆ ಜೀವನಪೂರ್ತಿ ಉಚಿತ ಪ್ರಯಾಣದ ಕೊಡುಗೆ ಕೊಟ್ಟ ಸಾರಿಗೆ ಸಂಸ್ಥೆ!
ಆಗ ಪಕ್ಕದಲ್ಲಿ ಇಬ್ಬರು ಜೋಡಿ ಮುತ್ತಿಡುತ್ತಾ ರೊಮ್ಯಾನ್ಸ್ ಮಾಡುವುದನ್ನು ಉಪೇಂದ್ರಗೆ ತೋರಿಸಿ ಲವ್ ಮಾಡುವುದು ಎಂದರೆ ಅದು ಎಂದು ಹೇಳುತ್ತಾಳೆ. ಆದರೆ, ಅದು ಲವ್ ಅಲ್ಲ, ಟಿಟಿ ಎಂದು ಹೇಳುತ್ತಾರೆ. 'ಟಿಟಿ' ಎಂದರೆ ಏನೆಂದು ಕೇಳಿದರೆ 'ತೀಟೆ ತೀರಿಸಿಕೊಳ್ಳುವುದು' ಎಂದು ಉತ್ತರ ಕೊಡುತ್ತಾರೆ. ಇದು ಅವರ ಬುದ್ಧಿವಂತಿಕೆ ಅಗಿದೆ. ಇನ್ನು ಒಬ್ಬ ವ್ಯಕ್ತಿ ಜೀವನದಲ್ಲಿ ಬರುವ ಹೆಣ್ಣಿನ ಪಾತ್ರಗಳಾದ ಲವರ್, ಹೆಂಡತಿ ಹಾಗೂ ಮೋಹಕ್ಕೆ ಒಳಗಾಗುವವರ ಬಗ್ಗೆ ಸಿನಿಮಾದಲ್ಲಿ ತೋರಿಸಿದ್ದಾರೆ. ಅಂದರೆ ಪ್ರೀತಿಸಲು ದಾಮಿನಿ, ಆಸೆಗಳನ್ನು ತೀರಿಸಿಕೊಳ್ಳಲು ರವೀನಾ ಟೆಂಡನ್ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸು ಹೆಂಡತಿಯಾಗಿ ಪ್ರೇಮಾ ಮೂವರು ನಾಯಕಿಯರ ಪಾತ್ರ ಪರಿಚಯ ಮಾಡಿಕೊಡಲಾಗಿದೆ ಎಂದು ನಟ ಹಾಗೂ ನಿರ್ದೇಶಕ ಉಪೆಂದ್ರ ಹೇಳಿಕೊಂಡಿದ್ದಾರೆ.