ವಸಿಷ್ಠ ಸಿಂಹ ಕಣ್ಣೀರು ಹಾಕಿದ್ರು, ಗೋಲ್ಡನ್ ಸ್ಟಾರ್ ಗಣೇಶ್ ಸೇರಿ ಎಲ್ಲರ ಕಣ್ಣಲ್ಲಿ ಯಾಕಷ್ಟು ಕಂಬನಿ!

By Shriram Bhat  |  First Published Aug 21, 2024, 5:49 PM IST

ಅಪ್ಪನ ಜತೆಗೆ, ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತಿದ್ದ ನಟ ವಸಿಷ್ಠ ಸಿಂಹ ಅವರು, ಅಮ್ಮನ ಫೋಟೋ ನೋಡಿ 'ಆವತ್ತಿನಿಂದ ಇವತ್ತಿನವರೆಗೆ ನಾನು ಅಮ್ಮನನ್ನು ನೋಡುತ್ತಿರುವುದು ಹೀಗೆಯೇ.. ದಿನ ಬೆಳಗಾದ್ರೆ ಇದೇ ರೂಪದಲ್ಲಿ ನಾನು ಅವ್ರನ್ನ ನೋಡ್ತೀನಿ.. ಹೀಗೆಯೇ..


ಕನ್ನಡದ ಪ್ರಸಿದ್ಧ ಕಲಾವಿದ, ನಟ ವಸಿಷ್ಠ ಸಿಂಹ (Vasishta N Simha) ಅವರು ತಮ್ಮ ತಾಯಿ ಬಗ್ಗೆ ಮಾತನಾಡಿರುವ ವಿಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ನಟ ವಸಿಷ್ಠ  ಸಿಂಹ ಅವರು ತಮ್ಮ ತಾಯಿಯ ಬಗ್ಗೆ ಕಣ್ಣೀರು ಸುರಿಸುತ್ತ ಹೇಳಿದ ವಿಷಯ ಕೇಳಿ ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಅಲ್ಲಿದ್ದ ಎಲ್ಲರೂ ಕಣ್ಣೀರಾಗಿದ್ದಾರೆ. ವಸಿಷ್ಠ ಸಿಂಹ ಅವರ ತಂದೆ ಕೂಡ ಅಲ್ಲಿಯೇ ಇರೋದು ವಿಶೇಷ ಎನಿಸಿದೆ. 

ನಟ ವಸಿಷ್ಠ ಸಿಂಹ ಅವರು 'ನಂಗೆ ಅಮ್ಮ ಇಲ್ಲ ಅನ್ನೋದು.. ಹೋದ ಘಳಿಗೆ ಎಲ್ಲಾನೂ ನಾನು ಇರೋ ತನಕ ಇದ್ದೇ ಇರುತ್ತೆ ಜೊತೆನಲ್ಲಿ.. ನಾನು ಆಗಿನ್ನೂ ಚಿಕ್ಕ ಹುಡುಗ.. ಅಪ್ಪ ಊರಲ್ಲಿ ಇದ್ದೋರೇ ಅಲ್ಲ.. ಯಾವಾಗ್ಲೂ ಟ್ರಾವೆಲ್ಲಿಂಗು, ಓಡಾಟದಲ್ಲೇ ಇರೋರು.. ನಂಗೆ ಏನೇ ಬೇಕಂದ್ರೂ ಅಮ್ಮನೇ.. ನಂಗೆ ಹೋಮ್‌ವರ್ಕ್‌ ಬರೆಯೋಕೆ ಹೆಲ್ಪ್ ಮಾಡ್ತಿದ್ದಿದ್ದು ಕೂಡ ಅಮ್ಮನೇ.. ನಾನು 5ನೇ ಕ್ಲಾಸ್ ಇದ್ದಗಲೂ ನನ್ ಕೈ ಹಿಡಿದು ಬರೆಸಿದ್ದಾರೆ..

Tap to resize

Latest Videos

ವಿಶ್ವ ಸಿನಿಮಾದ ಮೇಲೆ ಟಾಕ್ಸಿಕ್ ಕಣ್ಣು! ಆಸ್ಕರ್​​​ನಲ್ಲಿ ಟಾಕ್ಸಿಕ್​-ಕಾಂತಾರ ರಾರಾಜಿಸೋದು ಪಕ್ಕನಾ..? 

ಆದ್ರೆ 6ನೇ ಕ್ಲಾಸ್‌ಗೆ ನಾನು ಬರೋ ಹೊತ್ತಿಗೆ ಅಮ್ಮಂಗೆ ಹುಶಾರು ಇರ್ಲಿಲ್ಲ. ಅವ್ರಿಗೆ ನನ್ನ ಕೈ ಹಿಡಿದು ಬರೆಸೋವಷ್ಟು ಶಕ್ತಿ ಇರ್ಲಿಲ್ಲ. ನಂಗೆ ಬರೆಯೋಕೆ ಬರ್ತಿರ್ಲಿಲ್ಲ ಅಂತಲ್ಲ, ನಂಗೆ ಹೋಮ್‌ವರ್ಕ್‌ ಮಾಡ್ಬೇಕು ಅಂದ್ರೆ ಆಗ್ತಾ ಇರ್ಲಿಲ್ಲ, ಅಸಡ್ಡೆ.. ಆಲಸ್ಯ. ಅಮ್ಮ ಕೈ ಹಿಡಕೊಂಡ್ರೆ ಮಾತ್ರ ಬರೀತಾ ಇದ್ದ ಹುಡುಗ ನಾನು.. 

ಆ ಒಂದು ದಿನ ಬರುತ್ತೆ.. ಬೇಸಿಗೆ ರಜಾದ ಕಾಲ ಅದು.. ರಜಾ ಕಳೆಯಲು ಬೆಂಗಳೂರಿಗೆ ಬಂದಿದ್ವಿ.. ತಲೆ ತಿರುಗಿ ಬೀಳ್ತಾರೆ.. ಅವ್ರನ್ನ ತಕ್ಷಣ ಆಸ್ಪತ್ರೆಗೆ ಸೇರ್ಸಿದಾರೆ.. ಅದಾದ್ಮೇಲೆ ಅವ್ರನ್ನ ತೋರಿಸೋದೇ ಇಲ್ಲ..'ಎಂದಿದ್ದಾರೆ ನಟ ವಸಿಷ್ಠ ಸಿಂಹ. ಜೊತೆಗೆ, 'ನಾನು ನಮ್ಮ ತಾಯಿ ಕೊಟ್ಟ ಮನೆಯ ಶಿಕ್ಷಣದ ಮೂಲಕವೇ ಇವತ್ತಿಗೂ ಬೆಳೆಯುತ್ತಿದ್ದೇನೆ.. ಹೀಗಾಗಿ ನಾನು ನನ್ನ ಅಮ್ಮನ ಮಿಸ್ ಮಾಡ್ಕೊತಾ ಇಲ್ಲ, ಯಾವತ್ತಿಗೂ ಅವಳ ಗೈಡೆನ್ಸ್‌ನಲ್ಲೇ ಇರ್ತೀನಿ..' ಎಂದಿದ್ದಾರೆ ವಸಿಷ್ಠ ಸಿಂಹ. 

ತಮ್ಮ ಅಪ್ಪನ ಜತೆಗೆ, ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತಿದ್ದ ನಟ ವಸಿಷ್ಠ ಸಿಂಹ ಅವರು, ಅಮ್ಮನ ಫೋಟೋ ನೋಡಿ 'ಆವತ್ತಿನಿಂದ ಇವತ್ತಿನವರೆಗೆ ನಾನು ಅಮ್ಮನನ್ನು ನೋಡುತ್ತಿರುವುದು ಹೀಗೆಯೇ.. ದಿನ ಬೆಳಗಾದ್ರೆ ಇದೇ ರೂಪದಲ್ಲಿ ನಾನು ಅವ್ರನ್ನ ನೋಡ್ತೀನಿ.. ಹೀಗೆಯೇ ಯಾವತ್ತೂ ನನ್ನಮ್ಮ ನನ್ ಜೊತೆ ಇರ್ತಾರೆ.. 

ರಶ್ಮಿಕಾ ಮಂದಣ್ಣ ಡಯಟ್ ಸೀಕ್ರೆಟ್ ಬಯಲಾಯ್ತು, ನಟಿ ಏನೇನೆಲ್ಲ ತಿಂತಾರೆ ನೋಡಿ!

ಅಮ್ಮ ಹೋದ್ಮೇಲೆ ಅಪ್ಪ ನಮ್ಮೊಟ್ಟಿಗೆ ಇದಾರೆ.. ಅವ್ರು ಯಾವುದಕ್ಕೂ ಕಂಟ್ರೋಲ್ ಮಾಡಲ್ಲ.. ನಮ್ಮಪ್ಪ ಜೀವನದ ಮೇಲೆ ಭರವಸೆ ಕೊಟ್ಟು 'ನನಗೆ ಅನ್ನಿಸಿದ್ದು ಮಾಡು.. ತಲೆನೇ ಕೆಡಿಸ್ಕೋಬೇಡ.. ನಿನಗೆ ಅನ್ನಿಸಿದ್ದು ಮಾಡು.. ನಾನು ನಿನ್ನ ಹತ್ರ ಒಂದು ರೂಪಾಯಿ ಕೂಡ ಕೇಳಲ್ಲ.., ನೀನೂ ಕೂಡ ಕೊಡ್ಬೇಡ.. ನೀನು ಹಾಳಾಗಲ್ಲ ಅನ್ನೋ ನಂಬಿಕೆ ಇದೆ.. ನೀನು ಹಾಳಾಗದೇ, ಮನೆಗೆ ಕೆಟ್ಟ ಹೆಸರು ತರದೇ ಏನು ಬೇಕಾದ್ರೂ ಮಾಡ್ಕೋ ಅಂದಿದಾರೆ ಅಪ್ಪ..' ಎಂದಿದ್ದಾರೆ ನಟ ವಸಿಷ್ಠ ಸಿಂಹ. 

ಒಟ್ಟಿನಲ್ಲಿ, ಕನ್ನಡದ ಹೆಸರಾಂತ ನಟರಾಗಿರುವ ವಸಿಷ್ಠ ಸಿಂಹ ಅವರು ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದಾರೆ ಎಂಬುದು ಈ ಮೂಲಕ ಹಲವರಿಗೆ ತಿಳಿಯಿತು. ಅಮ್ಮ ಹೇಳಿಕೊಟ್ಟ ಜೀವನಪಾಠವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರಂತೆ ನಟ ವಸಷ್ಠ ಸಿಂಹ. ಈಗ ತಂದೆ ಕೂಡ ಅವರ ಜೊತೆಗೇ ಇದ್ದಾರೆ ಎಂಬುದು ಅವರಿಗೂ ಖುಷಿಯ ವಿಚಾರ ಎಂಬುದನ್ನು ವಸಿಷ್ಠ ಸಿಂಹ ಅವರ ಮಾತಿನಿಂದಲೇ ತಿಳಿಯಬಹುದು. 

ಎಲ್ಲಿರುತ್ತೀರೋ ಅಲ್ಲಿಂದಲೇ ಹರಿಸಿ, ಹಾರೈಸಿ..ಆದಷ್ಟು ಬೇಗ ಸಿಗೋಣ: ಡಾಲಿ ಧನಂಜಯ್

 

click me!