3 ವರ್ಷ ಪರಿಶ್ರಮದ ಬಳಿಕ ಮಾ.17 'ಕಬ್ಜ' ರಿಲೀಸ್; ಪ್ರಮೋಷನ್ ಅಖಾಡದಲ್ಲಿ ಆರ್‌.ಚಂದ್ರು

By Kannadaprabha NewsFirst Published Feb 3, 2023, 8:56 AM IST
Highlights

ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ ಕಬ್ಜ ಸಿನಿಮಾ ಕಬ್ಜ ಸಿನಿಮಾ ಮಾ.17 ಅದ್ಧೂರಿ ಬಿಡುಗಡೆ ಕಾಣಲಿದೆ. ಮೂರು ವರ್ಷಗಳ ಕಾಲ ಈ ಸಿನಿಮಾ ಚಿತ್ರೀಕರಣವಾಗಿದೆ. ಹೀಗಾಗಿ ಆರ್‌. ಚಂದ್ರು ಪ್ರಚಾರ ಆರಂಭಿಸಿದ್ದಾರೆ. 

ಸುಸ್ತು, ನೆಮ್ಮದಿ, ಸಮಾಧಾನ ಮತ್ತು ಆತಂಕ. ಇವೆಲ್ಲವೂ ನಿರ್ದೇಶಕ ಆರ್‌. ಚಂದ್ರು ಮುಖದಲ್ಲಿ ಕಾಣಿಸುತ್ತಿದೆ. ಅವರು ಕಬ್ಜ ಪ್ರಮೋಷನ್‌ಗಾಗಿ ಫೀಲ್ಡಿಗಿಳಿದಿದ್ದಾರೆ. ಶಾಂತಿ ಸಂಕೇತ ಬಿಳಿ ಷರ್ಚ್‌ ಧರಿಸಿದ್ದರೂ ಧಗಧಗ ಉರಿಯುವಷ್ಟುಬ್ಯುಸಿಯಾಗಿದ್ದಾರೆ. ಮೂರು ವರ್ಷಗಳ ಪರಿಶ್ರಮದ ಬಳಿಕ ಉಪೇಂದ್ರ, ಸುದೀಪ್‌ ಅಭಿನಯದ ‘ಕಬ್ಜ’ ಬಿಡುಗಡೆಗೆ ಸಿದ್ಧವಾಗಿದೆ. ಮಾ.17ರಂದು ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ದಿನ ಐದು ಭಾಷೆಗಳಲ್ಲಿ ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.

ಅವರು ಕಟ್ಟಿದ ಅನೇಕ ಸೆಟ್‌ಗಳು ಬಿದ್ದು, ಅದನ್ನು ಮತ್ತೆ ಕಟ್ಟಿಅದ್ದೂರಿಯಾಗಿ ಮೇಕಿಂಗ್‌ ಮಾಡಿದ ಸುಸ್ತು ಅವರಲ್ಲಿದೆ. ಚಿತ್ರ ಸುಂದರವಾಗಿ ಮೂಡಿಬಂದಿದೆ ಎಂಬ ವಿಶ್ವಾಸ ಅವರಿಗೆ ನೆಮ್ಮದಿ ಕೊಟ್ಟಿದೆ. ಎಲ್ಲಾ ಕಡೆ ಒಳ್ಳೆಯ ವ್ಯಾಪಾರ ನಡೆದಿರುವುದರಿಂದ ಸಮಾಧಾನ ಇದೆ. ಥಿಯೇಟರ್‌ನಲ್ಲಿ ಹೇಗಾಗುತ್ತದೋ ಎಂಬ ಆತಂಕವೂ ಇದೆ. ಅವೆಲ್ಲದರ ಜೊತೆ ಅವರ ಫೇವರಿಟ್‌ ಅಖಾಡ ಪ್ರಮೋಷನ್‌ಗೆ ಇಳಿದಿದ್ದಾರೆ.

ಈ ಹೊತ್ತಲ್ಲಿ ಅವರ ಮಾತಲ್ಲಿ ಛಲ, ನಂಬಿಕೆ, ಹೋರಾಟದ ಕೆಚ್ಚು ಎಲ್ಲವನ್ನೂ ಸಹೃದಯ ಓದುಗರು ಹುಡುಕಿಕೊಳ್ಳಬಹುದು

'ಕಬ್ಜ' ಆಡಿಯೋ ಹಕ್ಕು ಮಾರಾಟ ಎಷ್ಟು ಕೋಟಿಗೆ ಗೊತ್ತಾ?: ನಿರೀಕ್ಷೆ ಹುಟ್ಟಿಸಿದೆ 'ರವಿ ಬಸ್ರೂರು' ಸಂಗೀತ

- ಕೆಜಿಎಫ್‌ ನನಗೆ ಸ್ಫೂರ್ತಿ. ಅವರು ದೊಡ್ಡ ದಾರಿ ಹಾಕಿಕೊಟ್ಟಿದ್ದಾರೆ. ಆ ದಾರಿಯಲ್ಲಿ ಎಲ್ಲರೂ ಹೋಗಬೇಕು. ಬೇರೆಯವರು ರಾರ‍ಯಂಕ್‌ ಬಂದರೆ ನಾನೂ ಕಷ್ಟಪಟ್ಟು ಓದಿ ರಾರ‍ಯಂಕ್‌ ಬರಬೇಕು ಅಂದುಕೊಳ್ಳುತ್ತೇನೆ. ಕೆಜಿಎಫ್‌ ದಾರಿಯಲ್ಲಿ ಸಾಗಿ ದೊಡ್ಡ ಸಿನಿಮಾ ಮಾಡಿದ್ದೇನೆ.

- ಕಾರ್ಪೋರೇಟ್‌ ಜಗತ್ತಲ್ಲಿ ಒಳ್ಳೆಯ ಕಂಟೆಂಟ್‌ಗೆ, ಅದ್ಭುತ ಮೇಕಿಂಗ್‌ಗೆ ಒಳ್ಳೆಯ ಮರ್ಯಾದೆ ಸಿಗುತ್ತದೆ. ಅವರಿಗೆ ಒಳ್ಳೆಯ ಪ್ರೊಡಕ್ಟ್ ಬೇಕು. ನನ್ನ ಸಿನಿಮಾ ಉತ್ತಮ ಬೆಲೆಗೆ ಅಮೆಜಾನ್‌ ಪ್ರೈಮ್‌ ಖರೀದಿ ಮಾಡಿದೆ. ಹಾಗಂತ ಅವರು ಸುಮ್ಮನೆ ಖರೀದಿ ಮಾಡಿಲ್ಲ. ನಾನು ನನ್ನ ಕಂಟೆಂಟ್‌ ಅನ್ನು ಅವರಿಗೆ ತೋರಿಸಿದ ಮೇಲೆಯೇ ಅವರು ನನ್ನ ಸಿನಿಮಾ ಖರೀದಿ ಮಾಡಿದ್ದಾರೆ.

- ನನ್ನ ಸಿನಿಮಾದ ವಿತರಣೆ ಹಕ್ಕು ಖರೀದಿಗೆ ಬೇರೆ ಭಾಷೆಗಳಿಂದ ಅವರಾಗಿಯೇ ಮುಂದೆ ಬಂದರು. ಹಿಂದಿಯಲ್ಲಿ ಆನಂದ್‌ ಪಂಡಿತ್‌, ತೆಲುಗಿನಲ್ಲಿ ಸ್ಟಾರ್‌ ನಟ ನಿತಿನ್‌ ತಂದೆ ಸುಧಾಕರ್‌ ರೆಡ್ಡಿ, ಮಲಯಾಳಂನಲ್ಲಿ ಬಾಂಬೆ ರಮೇಶ್‌ ತೆಗೆದುಕೊಂಡಿದ್ದಾರೆ. ತಮಿಳಿನಲ್ಲಿ ಲೈಕಾದವರು ಖರೀದಿ ಮಾಡುವ ಸಾಧ್ಯತೆ ಇದೆ. ನಾನು ಬೆಲೆಯಲ್ಲಿ ಕಾಂಪ್ರೋಮೈಸ್‌ ಆಗುವುದಿಲ್ಲ. ನಾನು ಒಳ್ಳೆಯ ಸಿನಿಮಾ ಮಾಡಿದ್ದೇನೆ. ಅದಕ್ಕೆ ತಕ್ಕ ಬೆಲೆ ನನಗೆ ಸಿಗಬೇಕು. ಸಿಗುತ್ತದೆ ಕೂಡ.

- ಬೇರೆ ದೇಶಗಳಲ್ಲಿ ರಾಜಮೌಳಿ, ಶಂಕರ್‌ ಸಿನಿಮಾಗಳನ್ನು ಎಷ್ಟುದುಡ್ಡು ಕೊಟ್ಟಾದರೂ ತೆಗೆದುಕೊಳ್ಳುತ್ತಿದ್ದರು. ಈಗ ಪ್ರಶಾಂತ್‌ ನೀಲ್‌ ಸಿನಿಮಾವನ್ನೂ ತೆಗೆದುಕೊಳ್ಳುತ್ತಾರೆ. ನಾನೂ ನನ್ನ ಸಿನಿಮಾ ತೋರಿಸಿದೆ. ಜಪಾನ್‌, ಉತ್ತರ ಅಮೆರಿಕಾ, ಯುಎಇ ಸೇರಿ ಸುಮಾರು 20 ದೇಶಗಳಿಗೆ ಈಗಾಗಲೇ ನನ್ನ ಸಿನಿಮಾ ಕೊಟ್ಟಿದ್ದೇನೆ. ಚೈನೀಸ್‌ ಭಾಷೆಗೂ ಡಬ್‌ ಆಗುತ್ತಿದೆ.

2023ರ ಬಹುನಿರೀಕ್ಷಿತ 12 ಸಿನಿಮಾಗಳು; ನಿಮ್ಮ ನೆಚ್ಚಿನ ಸ್ಟಾರ್‌ ಈ ಲಿಸ್ಟ್‌ನಲ್ಲಿ ಇದ್ದಾರಾ?

- ಫೆ.4ರಂದು ಹೈದರಾಬಾದ್‌ನಲ್ಲಿ ಹಾಡು ಬಿಡುಗಡೆ ಕಾರ್ಯಕ್ರಮ ಇದೆ. ಚೆನ್ನೈ, ಮುಂಬೈ, ಬೆಂಗಳೂರಿನಲ್ಲೂ ಕಾರ್ಯಕ್ರಮ ಮಾಡುತ್ತೇನೆ. ತೆಲುಗಿನಲ್ಲಿ ರಾಜಮೌಳಿ, ಚಿರಂಜೀವಿ ಅವರಿಗೆ ಆಹ್ವಾನ ಕೊಟ್ಟಿದ್ದೇನೆ ಅಂತ ವಿತರಕರು ಹೇಳಿದ್ದಾರೆ.

- ಪುನೀತ್‌ ರಾಜ್‌ಕುಮಾರ್‌ ಸರ್‌ ಪ್ರತೀ ಸಲ ನನ್ನ ಕುರಿತು ಕಾಳಜಿ ತೋರಿಸುತ್ತಿದ್ದರು. ಹುಷಾರು ಎನ್ನುತ್ತಿದ್ದರು. ಅವರು ನಿಜ ಅರ್ಥದಲ್ಲಿ ಕನ್ನಡ ಚಿತ್ರರಂಗದ ದೇವರು. ಹಾಗಾಗಿ ಅವರ ಹುಟ್ಟುಹಬ್ಬದಂದು ಕಬ್ಜ ಬಿಡುಗಡೆ ಮಾಡೋದು ನಮ್ಮ ಪುಣ್ಯ.

click me!