ನಮ್ಮ ಮೆಟ್ರೋದಲ್ಲಿ ಹಿಂದಿ ಸ್ಟಿಕ್ಕರ್‌ ಓಪನ್ ಮಾಡಿದ ವ್ಯಕ್ತಿ; ರೂಪೇಶ್‌ ರಾಜಣ್ಣ ಕಡೆಯಿಂದ ಕ್ಲಾಸ್!

By Vaishnavi ChandrashekarFirst Published Feb 2, 2023, 4:49 PM IST
Highlights

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಹೀರೋ ಆದ ವ್ಯಕ್ತಿ. ರೂಪಾಶ್ ರಾಜಣ್ಣ ತಂಡ ಆ ವ್ಯಕ್ತಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ನಮ್ಮ ಮೆಟ್ರೋದಲ್ಲಿ ಕನ್ನಡ ಭಾಷೆಗೆ ಮೊದಲ ಪ್ರಾಮುಖ್ಯತೆ ನೀಡಬೇಕು ಎಂದು ಹಿಂದಿ ಭಾಷೆಯನ್ನು ಕಾಣದಂತೆ ಸ್ಟಿಕ್ಕರ್ ಹಾಕಲಾಗಿತ್ತು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಕಾಣಿಸುವಂತೆ ಮಾಡಿ, ಹಿಂದಿಗೆ ಸ್ಟಿಕ್ಕರ್ ಹಾಕಲಾಗಿತ್ತು. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿಅನ್ಯ ರಾಜ್ಯದ ವ್ಯಕ್ತಿಯೊಬ್ಬ ಹಿಂದಿ ಭಾಷೆಯನ್ನು ಮುಚ್ಚಿರುವ ಸ್ಟಿಕ್ಕರ್‌ನ ತೆಗೆದಿದ್ದಾರೆ. ಮಹಾ ಕೆಲಸ ಮಾಡಿರುವ ರೀತಿ ಪ್ರತಿಯೊಂದು ಬಾಗಿಲಿಗೂ ಹಾಕಿರುವ ಸ್ಟಿಕ್ಕರ್‌ನ ತೆಗೆದಿದ್ದಾರೆ. ಈ ವಿಡಿಯೋ ವೈರಲ್ ಆಗಿ ಕನ್ನಡ ಹೋರಾಟಗಾರರ ಗಮನಕ್ಕೆ ಬಂದಿದ್ದೆ. ತಕ್ಷಣವೇ ಆ ವ್ಯಕ್ತಿ ಯಾರೆಂದು ಪತ್ತೆ ಮಾಡಿ ಕನ್ನಡ ಭಾಷೆಗೆ ಅವಮಾನ ಮಾಡಿರುವುದಕ್ಕೆ ಕ್ಷಮೆ ಕೇಳಿಸಿದ್ದಾರೆ.

ಕನ್ನಡ ಹೋರಾಟಗಾರ, ಬಿಗ್ ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ತಂಡ ಆ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ. ಆ ವ್ಯಕ್ತಿ ಹೆಸರನ್ನು ಅಕ್ಷತ್ ಗುಪ್ತಾ ಎಂದು ಗುರುತಿಸಲಾಗಿದೆ. ಕರ್ನಾಟಕದಲ್ಲಿನ ವಾಸ್ತವತೆ ಏನೆಂಬುದನ್ನು ವಿವರಿಸಿದ್ದಾರೆ ಮಾಡಿದ ಕೆಲಸ ಸರೀನಾ ತಪ್ಪಾ ಎಂದು ಅರ್ಥ ಮಾಡಿಸಿದ್ದಾರೆ. ಆನಂತರ ವಿಡಿಯೋ ಮೂಲಕ ಕರ್ನಾಟಕದ ಜನತೆಗೆ ಆ ವ್ಯಕ್ತಿ ಕ್ಷಮಾಪಣೆ ಕೇಳಿದ್ದಾರೆ. 

ರೂಪಾಶ್ ರಾಜಣ್ಣ ಪೋಸ್ಟ್‌:

'ನೆನ್ನೆ ಮೆಟ್ರೋ ರೈಲಿನಲ್ಲಿ ಹಿಂದಿ ಸ್ಟಿಕರ್‌ ತೆಗೆದು ಹಿಂದಿ ಹೇರಿಕೆ ಸಮರ್ಥನೆ ಮಾಡಿದ್ದ ಅಕ್ಷತ್ ಗುಪ್ತಾ ಅನ್ನೋ ವ್ಯಕ್ತಿಯ ಕಂಪನಿಗೆ ಇಂದು ಭೇಟಿ ಕೊಟ್ಟು ಕನ್ನಡಿಗರು ಹಿಂದಿ ಹೇರಿಕೆ ಸಹಿಸೋಲ್ಲ ಅನ್ನೋದನ್ನು ಮನವರಿಕೆ ಮಾಡಲಾಗಿ ಆತ ಕ್ಷಮೆ ಕೇಳಿದ್ದಾನೆ. ಹಿಂದಿ ಹೇರಿಕೆ ಬಗ್ಗೆ ಇಡೀ ಕಂಪನಿ ಉದ್ಯೋಗಿಗಳಿಗೆ ಮನವರಿಕೆ ಮಾಡಿದೆವವು. #ದ್ವಿಭಾಷಾನೀತಿ' ಎಂದು ರೂಪೇಶ್ ರಾಜಣ್ಣ. 

ರೂಪೇಶ್ ರಾಜಣ್ಣ ಮಾಡಿರುವ ಕೆಲಸಕ್ಕೆ ಕರ್ನಾಟಕದ ಜನತೆ ಮೆಚ್ಚುಗೆ ವ್ಯಕ್ತಿ ಪಡಿಸಿದ್ದಾರೆ. ನಿಮ್ಮ ಕನ್ನಡ ಹೋರಾಟದ ಹೀಗೆ ಮುಂದೆ ಸಾಗಲಿ ನಿಮಗೆ ನಮ್ಮ ಬೆಂಬಲವಿದೆ ಎಂದಿದ್ದಾರೆ.

ಬಿಗ್ ಬಾಸ್ ನಂತರ ಮಾತು:

'ಕನ್ನಡಿಗರ ಧ್ವನಿಯಾಗಿ ನಾನು ಬಿಗ್ ಬಾಸ್ ಮನೆಗೆ ಹೋಗಿದ್ದು. ಸಾಮಾಜಿಕ ಜಾಲತಾಣದಲ್ಲಿ ನನ್ನ ಕನ್ನಡದ ಪರ ಹೋರಾಟ ನಡೆಯುತ್ತಿತ್ತು ನಮ್ಮ ವಿಚಾರಗಳು ಬಿಗ್ ಬಾಸ್‌ ಮೂಲಕ ಜನರಿಗೆ ಹೆಚ್ಚಿಗೆ ತಲುಪಿಸಬಹುದು ಅನ್ನೋ ಉದ್ದೇಶವಿತ್ತು. ಬಿಗ್ ಬಾಸ್‌ ಮನೆಯಿಂದ ಹೊರ ಬರುವಾಗ ನಾನು ಫೈನಲಿಸ್ಟ್‌ ಅಂತ ನಾನು ಹೇಳಿಕೊಳ್ಳುವುದಿಲ್ಲ ಇಲ್ಲಿ ಇರುವವರು ನನ್ನ ಪ್ರಕಾರ ಫೈನಲಿಸ್ಟ್‌ಗಳು. ಮನೆಯಲ್ಲಿ ಇದ್ದಷ್ಟು ಸಮಯದಲ್ಲಿ ನಾನು ನನ್ನ ಕನ್ನಡ ಬರಹದ ಟೀ-ಶರ್ಟ್‌ ಧರಿಸಿ ಬಿಗ್ ಬಾಸ್ ಆಟವಾಡಿರುವೆ. ಬಿಗ್ ಬಾಸ್ ಹೋಗಿ ಬಂದ್ಮೇಲೆ ರಾಜಣ್ಣ ಕನ್ನಡ ಕೆಲಸ ಮಾಡಲ್ಲ ಅಂತ ಜನರು ಅಂದುಕೊಂಡಿರಬಹುದು ತಲೆ ಕೆಡಿಸಿಕೊಳ್ಳುವುದಿಲ್ಲ ಎಷ್ಟು ಮಾಡಿದ್ದೀವಿ ಈಗ ಅದರ ಡಬಲ್ ಕೆಲಸಗಳು ಇನ್ನು ಮುಂದೆ ಪ್ರಾರಂಭವಾಗುತ್ತದೆ. ನಮ್ಮ ಕನ್ನಡಿಗರಿಗೆ ನಮ್ಮ ಕರ್ನಾಟಕಕ್ಕೆ ಏನೇ ಧಕ್ಕೆಯಾದ್ದರೂ ಇಲ್ಲಿಂದ ಹುಬ್ಬಳ್ಳಿ ಧಾರವಾಡ ಗದಗ ಯಾವ ಭಾಗಕ್ಕೆ ಇದ್ದರೂ ನಾವು ಹೋಗುತ್ತೇವೆ. ಹೇಗೆ ಬೀದಿಯಲ್ಲಿ ನಿಂತುಕೊಂಡು ಕನ್ನಡ ಕೆಲಸ ಮಾಡುತ್ತಿದ್ದೆ ನಾನು ಬದುಕಿರುವವರೆಗೂ ನನ್ನ ಉಸಿರು ಕನ್ನಡ ನಮ್ಮ ಜೀವನ ಕನ್ನಡ' ಎಂದು ಖಾಸಗಿ ಮಾಧ್ಯಮದಲ್ಲಿ ರಾಜಣ್ಣ ಮಾತನಾಡಿದ್ದಾರೆ.


 

Sahi kiya? pic.twitter.com/HoASkixHj1

— Dr Gill (@ikpsgill1)
click me!