ಉಪೇಂದ್ರ ಅವರೊಬ್ಬರು ಕನ್ನಡಕ್ಕೆ ಮಾತ್ರ ಸೀಮಿತರಾಗಬಲ್ಲ ನಿರ್ದೇಶಕರಲ್ಲ, ಇಡೀ ಇಂಡಿಯಾಗೇ ಸಲ್ಲುವಂತ ನಿರ್ದೇಶಕರು. ಅಷ್ಟು ಮಾತ್ರವಲ್ಲ, ಅವರು ಇಂಟರ್‌ನ್ಯಾಷನಲ್ ಲೆವಲ್‌ಗೆ ಕೂಡ ರೀಚ್ ಆಗಬಲ್ಲ ಡೈರೆಕ್ಟರ್ ಎನ್ನುತ್ತೇನೆ ನಾನು. ಸಿನಿಮಾ ಶೂಟಿಂಗ ಸಮಯದಲ್ಲಿ ನನಗೆ ಯಾಕೆ ಹೀಗೆಲ್ಲಾ..
ರಿಯಲ್ ಸ್ಟಾರ್ ಉಪೇಂದ್ರ ನಟನೆ-ನಿರ್ದೇಶನದ 'A' ಚಿತ್ರವು ಮತ್ತೆ ರಿಲೀಸ್ ಆಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವುದು ಗೊತ್ತೇ ಇದೆ. ಬರೋಬ್ಬರಿ 26 ವರ್ಷಗಳ ಬಳಿಕ ರೀ-ರಿಲೀಸ್ ಕಂಡಿರುವ A ಚಿತ್ರವನ್ನು ಈಗಿನ ಜನರೇಶನ್ ಸಿನಿಪ್ರಿಯರು ಥಿಯೇಟರ್‌ಗೆ ಹೋಗಿ ನೋಡುತ್ತಿದ್ದಾರೆ. ಮೆಚ್ಚಿ ಮಾತನಾಡುತ್ತಿದ್ದಾರೆ. 26 ವರ್ಷಗಳ ಹಿಂದೆ ನೋಡಿದವರು ಕೂಡ ಈಗ ಮತ್ತೊಮ್ಮೆ ನೋಡಿ ಖುಷಿಪಟ್ಟು ಮೀಡಿಯಾಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಉಪ್ಪಿಯ ಎ ಸಿನಿಮಾ ಮರುಬಿಡುಗಡೆ ಕಂಡು ಮತ್ತೆ ಸೂಪರ್ ಹಿಟ್ ದಾಖಲೆ ನಿರ್ಮಿಸಲಿರುವ ಹೊತ್ತಲ್ಲೇ ಆ ಚಿತ್ರದ ನಾಯಕಿ ನಟಿ ಚಾಂದಿನಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. 'ನನಗೆ ಆಗ ತುಂಬಾ ಚಿಕ್ಕ ವಯಸ್ಸು. ನಾನು ಸಿನಿಮಾ ನಟಿಯಾಗುವ ಯಾವ ಕನಸನ್ನೂ ಕಂಡವಳಲ್ಲ. ವಿ ಮನೋಹರ್ ಸರ್ ಮೂಲಕ ಅಮೆರಿಕಾದಲ್ಲಿದ್ದ ನನ್ನನ್ನು ಉಪೇಂದ್ರ ಅಪ್ರೋಚ್ ಮಾಡಿ A ಸಿನಿಮಾಗೆ ಹೀರೋಯಿನ್ ಮಾಡಿದ್ದಾರೆ. ನನಗೆ ನಟನೆ, ಸಿನಿಮಾ ಏನೆಂದೂ ಸಹ ಗೊತ್ತಿರಲಿಲ್ಲ. ಆದರೆ, ನನ್ನನ್ನು ಯಶಸ್ವೀ ನಟಿಯಾಗಿ ಮಾಡಿದ ಎಲ್ಲಾ ಕ್ರೆಡಿಟ್ ಉಪೇಂದ್ರ ಉಪೇಂದ್ರರಿಗೆ ಸಲ್ಲಬೇಕು.
ಕ್ರಿಕೆಟ್ ಮ್ಯಾಚ್ ನಂತರದ ಕಿಚ್ಚ ಸುದೀಪ್ ಹೊಸ ಹೇರ್‌ಸ್ಟೈಲ್‌ಗೆ ಚಪ್ಪಾಳೆ ಸುರಿಮಳೆ!
ಉಪೇಂದ್ರ ಅವರೊಬ್ಬರು ಕನ್ನಡಕ್ಕೆ ಮಾತ್ರ ಸೀಮಿತರಾಗಬಲ್ಲ ನಿರ್ದೇಶಕರಲ್ಲ, ಇಡೀ ಇಂಡಿಯಾಗೇ ಸಲ್ಲುವಂತ ನಿರ್ದೇಶಕರು. ಅಷ್ಟು ಮಾತ್ರವಲ್ಲ, ಅವರು ಇಂಟರ್‌ನ್ಯಾಷನಲ್ ಲೆವಲ್‌ಗೆ ಕೂಡ ರೀಚ್ ಆಗಬಲ್ಲ ಡೈರೆಕ್ಟರ್ ಎನ್ನುತ್ತೇನೆ ನಾನು. ಸಿನಿಮಾ ಶೂಟಿಂಗ ಸಮಯದಲ್ಲಿ ನನಗೆ ಯಾಕೆ ಹೀಗೆಲ್ಲಾ ನಟಿಸಲು ಹೇಳುತ್ತಾರೆ, ಯಾಕೆ ನನ್ನನ್ನು ಹಾಗೆ ಮಾಡು ಹೀಗೆ ಮಾಡು ಎನ್ನುತ್ತಾ ನೆಲಕ್ಕೆಲ್ಲಾ ಬೀಳಿಸಿ ಗೋಳು ಹುಯ್ದುಕೊಳ್ಳುತ್ತಾರೆ ಎಂದೆಲ್ಲಾ ಎನ್ನಿಸುತ್ತಿತ್ತು. ಆದರೆ, ಸಿನಿಮಾ ಸೂಪರ್ ಹಿಟ್ ಆದ ಬಳಿಕವಷ್ಟೇ ನನಗೆ ಸಿನಿಮಾ ಮೇಕಿಂಗ್ ಬಗ್ಗೆ ಅರ್ಥವಾಯ್ತು' ಎಂದಿದ್ದಾರೆ ನಟಿ ಚಾಂದಿನಿ.
ಮೋದಿ ಪಾತ್ರದ ಆಫರ್ ಬಗ್ಗೆ ನಟ ಸತ್ಯರಾಜ್ ಹೇಳಿಕೆಯೀಗ ಭಾರೀ ವೈರಲ್; ಹೀಗಂದ್ರಾ ನಟ?
ಮಾಧ್ಯಮದವರ ಮದುವೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಟಿ ಚಾಂದಿನಿ 'A' ಸಿನಿಮಾ ನನ್ನ ತಲೆಯನ್ನು ಹಾಳು ಮಾಡಿಬಿಟ್ಟಿದೆ. ನನಗೆ ಮದುವೆಯೆಂದರೇ ಭಯ ಎನ್ನುವಂತಾಗಿದೆ' ಎಂದು ಜೋಕ್ ಮಾಡಿದ್ದಾರೆ. ಬಳಿಕ, ನಾನು ಮದುವೆಯೆಂದರೆ ಸ್ವಲ್ಪ ಭಯ ಬೀಳುವುದು ಹೌದು. ಏಕೆಂದರೆ, ಅದೊಂದು ಪಕ್ಕಾ ಕಮಿಟ್‌ಮೆಂಟ್. ಸಿಂಗಲ್ ಆಗಿರುವುದನ್ನು ನಾನು ಸದ್ಯ ಇಷ್ಟಪಡುತ್ತಿದ್ದೇನೆ, ಲೈಫ್ ಎಂಜಾಯ್ ಮಾಡುತ್ತಿದ್ದಾನೆ. ನನ್ನ ಪ್ರಕಾರ ಮದುವೆ ಎಂದರೆ ಅದೊಂದು ಸ್ಯಾಕ್ರಿ ಫೈಸ್. ನಾವು ಮದುವೆಯಾದರೆ ಬಹಳಷ್ಟನ್ನು ತ್ಯಾಗ ಮಾಡಬೇಕಾಗುತ್ತದೆ.
ಯಶ್ ನಿರ್ಮಾಣ-ನಟನೆಯ 'ರಾಮಾಯಣ' ಮೇಲೆ ಬಿತ್ತು ಕೇಸ್; ಶೂಟಿಂಗ್ ಮುಂದೂಡಿದ ಟೀಮ್!
ಕಾರಣ, ಮದುವೆಯೆಂದರೆ ಅದು ನಾವು ಇನ್ನೊಬ್ಬರ ಜತೆ ನಮ್ಮ ಜೀವನವನ್ನು ಹಂಚಿಕೊಳ್ಳುವುದು. ನಮ್ಮ ದೇಹ, ಮನಸ್ಸು ಎಲ್ಲವನ್ನು ಹಂಚಿಕೊಳ್ಳುವ ಸಮಯದಲ್ಲಿ ನಾವು ತುಂಬಾ ಸಂಗತಿಗಳನ್ನು ಸಂಗಾತಿಗಾಗಿ ತ್ಯಾಗ ಮಾಡಬೇಕಾಗುತ್ತದೆ. ಆ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಹೀಗಾಗಿ ನಾನು ಮದುವೆ ಬಗ್ಗೆ ಬಹಳಷ್ಟನ್ನು ಯೋಚಿಸಿ ನಿರ್ಧಾರ ತಗೆದುಕೊಳ್ಳಬೇಕಿದೆ. ಅಂಥ ಕಮಿಟ್‌ಮೆಂಟ್‌ಗೆ ಯೋಗ್ಯ ವ್ಯಕ್ತಿ ಸಿಕ್ಕಾಗ ನಾನು ಖಂಡಿತ ಮದುವೆ ಆಗುತ್ತೇನೆ. ಸದ್ಯವೇ ಸಿಕ್ಕರೂ ಸಿಗಬಹುದು. ನಾನು ಇನ್ನೊಮ್ಮೆ ನಿಮ್ಮ ಮುಂದೆ ಬರುವ ವೇಳೆ ನನ್ನ ಕನಸಿನ ಹುಡುಗನನ್ನು ಜೊತೆಯಲ್ಲೇ ಕರೆದುಕೊಂಡು ಸಹ ಬರಬಹುದು' ಎಂದಿದ್ದಾರೆ ಎ ಖ್ಯಾತಿಯ ನಟಿ ಚಾಂದಿನಿ.
ತಂದೆಯನ್ನು ದತ್ತು ಪಡೆಯಲು ನಿರ್ಧರಿಸಿದ್ದ ರಜನಿಕಾಂತ್; ಅದೃಷ್ಟವಂತ ಆ ವ್ಯಕ್ತಿ ಯಾರು?
ಅಂದಹಾಗೆ ನಟಿ ಚಾಂದಿನಿ ಕನ್ನಡದಲ್ಲಿ 3 ಹಾಗೂ ತೆಲುಗಿನಲ್ಲಿ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಉಪೇಂದ್ರ ನಟನೆ-ನಿರ್ದೇಶನದ ಕನ್ನಡ-ತೆಲುಗು ಸಿನಿಮಾದಲ್ಲಿ ನಟಿಸಿದ ಬಳಿಕ ಚಾಂದಿನಿ, 1998ರಲ್ಲಿ ಓಂ ಪ್ರಕಾಶ್ ರಾವ್ ನಿರ್ದೇಶನ, ಶಿವರಾಜ್‌ಕುಮಾರ್ ನಟನೆಯ 'AK 47'ಚಿತ್ರದಲ್ಲಿ ನಟಿಸಿದ್ದಾರೆ. ಬಳಿಕ 2015ರಲ್ಲಿ ಗುರುದತ್ ನಿರ್ದೇಶನದ ಖೈದಿ ಚಿತ್ರದಲ್ಲಿ ಸಹ ನಟಿಸಿ ಜನಮನ್ನಣೆ ಪಡೆದಿದ್ದಾರೆ. 50ಕ್ಕೂ ಹೆಚ್ಚು ಚಿತ್ರಗಳನ್ನು ಡಿಸ್ಟ್ರಿಬ್ಯೂಟ್ ಮಾಡಿದ್ದಾರೆ, ಇದೀಗ ಮತ್ತೆ ನಟನೆಗೂ ಸೈ ಎಂದಿದ್ದಾರೆ.