ನಟ ಕಿಚ್ಚ ಸುದೀಪ್ ಮಗಳು ಸಾನ್ವಿ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಿಸಲಾಯಿತು. ಈ ವೇಳೆ ನಟ ಸುದೀಪ್ ತಮ್ಮ ಮುದ್ದಿನ ಮಗಳು ಸಾನ್ವಿ ಹುಟ್ಟುಹಬ್ಬ ಆಚರಿಸಿ ಮಗಳಿಗೆ ಶುಭಕೋರಿ, ಸಿಹಿ ತಿನ್ನಿಸಿ ಆ ಕ್ಷಣವನ್ನು ಎಂಜಾಯ್ ಮಾಡಿದರು. ಮಗಳು ಸಾನ್ವಿಗೆ, ಪ್ರೀತಿಯ ಅಪ್ಪನ ಅಪ್ಪುಗೆ ಸಿಕ್ಕು
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಹೇರ್ ಸ್ಟೈಲ್ ಈಗ ಭಾರೀ ಮೆಚ್ಚಗೆ ಗಳಿಸುತ್ತಿದೆ. ಸುದೀಪ್ ಈಗ, ಅಂದರೆ ಕ್ರಿಕೆಟ್ ಟೂರ್ನಮೆಂಟ್ ಮುಗಿಸಿದ ಬಳಿಕ ಶಾರ್ಟ್ ಹೇರ್ ಇಟ್ಟು ವಿಭಿನ್ನ ಹೇರ್‌ಸ್ಟೈಲ್‌ನಲ್ಲಿ ಕಂಗೊಳಿಸುತ್ತಿದ್ದಾರೆ. ನಟ ಕಿಚ್ಚ ಸುದೀಪ್ ಅವರ ಈ ಹೇರ್ ಸ್ಟೈಲ್ ಇದೀಗ ಅಭಿಮಾನಿಗಳು ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಹಲವರು ಹೊಸ ಹೇರ್‌ಸ್ಟೈಲ್ ಮೆಚ್ಚಿ ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿ ಗಮನ ಸೆಳೆಯುತ್ತಿದ್ದಾರೆ.
ನಟ ಕಿಚ್ಚ ಸುದೀಪ್ ಮಗಳು ಸಾನ್ವಿ (Sanvi Sudeep) ಹುಟ್ಟುಹಬ್ಬವನ್ನು (19 May 2024) ಇತ್ತೀಚೆಗೆ ಆಚರಿಸಲಾಯಿತು. ಈ ವೇಳೆ ನಟ ಸುದೀಪ್ ತಮ್ಮ ಮುದ್ದಿನ ಮಗಳು ಸಾನ್ವಿ ಹುಟ್ಟುಹಬ್ಬ ಆಚರಿಸಿ ಮಗಳಿಗೆ ಶುಭಕೋರಿ, ಸಿಹಿ ತಿನ್ನಿಸಿ ಆ ಕ್ಷಣವನ್ನು ಎಂಜಾಯ್ ಮಾಡಿದರು. ಮಗಳು ಸಾನ್ವಿಗೆ, ಪ್ರೀತಿಯ ಅಪ್ಪನ ಅಪ್ಪುಗೆ ಸಿಕ್ಕು, ತಮ್ಮ ಹುಟ್ಟುಹಬ್ಬದ ಕ್ಷಣವನ್ನು ಸಾರ್ಥಕಗೊಳಿಸಿಕೊಂಡ ಖುಷಿ ದೊರಕಿತು. ಹಲವರು ಸಾನ್ವಿ ಹುಟ್ಟುಹಬ್ಬದ ಕ್ಷಣದಲ್ಲಿ ಸೆಲೆಬ್ರೇಷನ್ ಸ್ಥಳದಲ್ಲೇ ಇದ್ದು, ಅವರಿಗೆ ಸ್ವತಃ ಶುಭ ಕೋರುವ ಅವಕಾಶ ಪಡೆದಿದ್ದರೆ, ಇನ್ನೂ ಹಲವರು ಸೋಷಿಯಲ್ ಮೀಡಿಯಾ ಮೂಲಕ ಸಾನ್ವಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು.
ಮೋದಿ ಪಾತ್ರದ ಆಫರ್ ಬಗ್ಗೆ ನಟ ಸತ್ಯರಾಜ್ ಹೇಳಿಕೆಯೀಗ ಭಾರೀ ವೈರಲ್; ಹೀಗಂದ್ರಾ ನಟ?
ನಟ ಕಿಚ್ಚ ಸುದೀಪ್ ಸದ್ಯ ಸಿನಿಮಾ ಶೂಟಿಂಗ್‌ಗಿಂತ ಕ್ರಿಕೆಟ್‌ನಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ ಎನ್ನಬಹುದೇನೋ. ಇತ್ತ ಸ್ಯಾಂಡಲ್‌ವುಡ್ ಥಿಯೇಟರ್ ಮಾಲೀಕರು ಸ್ಟಾರ್ ಸಿನಿಮಾಗಳು ತೆರೆಗೆ ಬಾರದೇ ಸಂಪಾದನೆಯಿಲ್ಲದೇ ಕಷ್ಟದಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಆದರೆ, ಕನ್ನಡದ ಸ್ಟಾರ್ ನಟರು ಕ್ರಿಕೆಟ್, ಪ್ಯಾನ್ ಇಂಡಿಯಾ ಮೂವಿಗಳ ಮೇನಿಯಾಗೆ ಸಿಲುಕಿ ನಿರ್ಮಾಪಕರು ಹಾಗೂ ಥಿಯೇಟರ್ ಮಾಲೀಕರ ಸದ್ಯದ ಪರಿಸ್ಥಿತಿಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಯಶ್ ನಿರ್ಮಾಣ-ನಟನೆಯ 'ರಾಮಾಯಣ' ಮೇಲೆ ಬಿತ್ತು ಕೇಸ್; ಶೂಟಿಂಗ್ ಮುಂದೂಡಿದ ಟೀಮ್!
ಅಂದಹಾಗೆ, ಸದ್ಯ ಕನ್ನಡ ಚಿತ್ರೋದ್ಯಮದ ಪರಿಸ್ಥಿತಿ ಬಿಗಡಾಯಿಸಿದೆ ಎನ್ನಲಾಗುತ್ತಿದೆ. ಕಾರಣ, ಮೊದಲೆಲ್ಲಾ ವರ್ಷಕ್ಕೆ ಒಂದೆರಡು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಥಿಯೇಟರ್ ಮಾಲೀಕರು ಸೇಫ್ ಆಗಿರುತ್ತಿದ್ದರು. ಆದರೆ,ಯಶ್ ನಟನೆಯ ಕೆಜಿಎಫ್ ಬಳಿಕ ಸ್ಟಾರ್ ನಟರು ಪ್ಯಾನ್ ಇಂಡಿಯಾ ಕ್ರೇಜ್‌ಗೆ ಬಿದ್ದು, ಬಿಗ್ ಬಜೆಟ್ ಸಿನಿಮಾಗಳನ್ನೇ ಮಾಡತೊಡಗಿದ್ದಾರೆ. ಹೀಗಾಗಿ, ಸ್ಟಾರ್ ಸಿನಿಮಾಗಳು 2-3 ವರ್ಷಕ್ಕೆ ಥಿಯೇಟರ್‌ಗಳಿಗೆ ಬರುತ್ತಿವೆ. ಹೊಸಬರ ಸಿನಿಮಾ ಕಲೆಕ್ಷನ್ ನಂಬಿಕೊಂಡು ಜೀವನ ಸಾಗಿಸುವುದು ಕಷ್ಟವೆಂದು ಅರಿತಿರುವ ಚಿತ್ರಮಂದಿರದ ಮಾಲೀಕರು ಕಂಗಾಲಾಗಿ ಕುಳಿತಿದ್ದಾರೆ. ಕರ್ನಾಟಕದಲ್ಲಿ ಒಂದೊಂದಾಗಿ ಸಿಂಗಲ್ ಥೀಯೇಟರ್‌ಗಳು ನೆಲಕಚ್ಚುತ್ತಿವೆ.
ತಂದೆಯನ್ನು ದತ್ತು ಪಡೆಯಲು ನಿರ್ಧರಿಸಿದ್ದ ರಜನಿಕಾಂತ್; ಅದೃಷ್ಟವಂತ ಆ ವ್ಯಕ್ತಿ ಯಾರು?