ಅಂತೂ ಇಂತೂ ಕೊನೆಗೂ ಆ ಸೀಕ್ರೆಟ್ ಹೊರಹಾಕಿದ 'ಉಪಾಧ್ಯಕ್ಷ' ನಟಿ ಮಲೈಕಾ ವಸುಪಾಲ್!

Published : Apr 13, 2025, 04:43 PM ISTUpdated : Apr 13, 2025, 05:11 PM IST
ಅಂತೂ ಇಂತೂ ಕೊನೆಗೂ ಆ ಸೀಕ್ರೆಟ್ ಹೊರಹಾಕಿದ 'ಉಪಾಧ್ಯಕ್ಷ' ನಟಿ ಮಲೈಕಾ ವಸುಪಾಲ್!

ಸಾರಾಂಶ

ನಟಿ ಮಲೈಕಾ ವಸುಪಾಲ್ ಅವರು ಒಂದು ಸೀಕ್ರೆಟ್‌ ಸಂಗತಿಯನ್ನು ಇದೀಗ ಹೊರಜಗತ್ತಿಗೆ ಬಿಟ್ಟಿದ್ದಾರೆ. ಇಷ್ಟು ದಿನವೂ ಗುಟ್ಟಾಗಿದ್ದ ಈ ಸಂಗತಿಯೀಗ ಸೋಷಿಯಲ್ ಮೀಡಿಯಾ ಹೊಕ್ಕಿ ಜಗತ್ತಿನ ತುಂಬೆಲ್ಲಾ ಹರಿದಾಡುತ್ತಿದೆ. ಹಾಗಿದ್ರೆ, ನಟಿ ಮಲೈಕಾ..

ಚಿಕ್ಕಣ್ಣ ನಾಯಕತ್ವದ ಉಪಾಧ್ಯಕ್ಷ (Upadhyaksha) ಸಿನಿಮಾ 2024ರ ಜನವರಿ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. ಉಪಾಧ್ಯಕ್ಷ ಸಿನಿಮಾವನ್ನು ಅನಿಲ್ ಕುಮಾರ್ ಟಿ.ಎಂ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ ನಾಯಕನಾಗಿ ಹಾಗೂ ಹಿಟ್ಲರ್ ಕಲ್ಯಾಣ ಸೀರಿಯಲ್ ಖ್ಯಾತಿಯ ನಟಿ ಮಲೈಕಾ ವಸುಪಾಲ್ (Malaika Vasupal) ನಾಯಕಿಯಾಗಿ ನಟಿಸಿದ್ದಾರೆ. ರವಿಶಂಕರ್ ಪಿ, ಕರಿ ಸುಬ್ಬು, ವೀಣಾ ಸುಂದರ್, ಸಾಧು ಕೋಕಿಲ, ಧರ್ಮಣ್ಣ ಕಡೂರು ಮುಂದಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.  ಈ ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ಮತ್ತು ಶೇಖರ್ ಚಂದ್ರ ಛಾಯಾಗ್ರಹಣವಿದೆ. ಉಮಾಪತಿ ಫಿಲ್ಮ್‌ ಭ್ಯಾನರ್ ಅಡಿಯಲ್ಲಿ 'ಉಪಾಧ್ಯಕ್ಷ' ಸಿನಿಮಾ ನಿರ್ಮಾಣ ಮಾಡಲಾಗಿದೆ.

ಈ ಸಿನಿಮಾದ ನಟಿ ಮಲೈಕಾ ವಸುಪಾಲ್ ಅವರು ಒಂದು ಸೀಕ್ರೆಟ್‌ ಸಂಗತಿಯನ್ನು ಇದೀಗ ಹೊರಜಗತ್ತಿಗೆ ಬಿಟ್ಟಿದ್ದಾರೆ. ಇಷ್ಟು ದಿನವೂ ಗುಟ್ಟಾಗಿದ್ದ ಈ ಸಂಗತಿಯೀಗ ಸೋಷಿಯಲ್ ಮೀಡಿಯಾ ಹೊಕ್ಕಿ ಜಗತ್ತಿನ ತುಂಬೆಲ್ಲಾ ಹರಿದಾಡುತ್ತಿದೆ. ಹಾಗಿದ್ರೆ, ನಟಿ ಮಲೈಕಾ ವಸುಪಾಲ್ ಹೇಳಿದ್ದೇನು? ಇಲ್ಲಿದೆ ನೋಡಿ.. ನನ್ನ ಮೊದಲ ಸಿನಿಮಾ ಉಪಾಧ್ಯಕ್ಷ ಮಾಡುವಾಗ ನನಗೆ ಒಂದಿಷ್ಟು ಟೀಕೆಗಳು ಬಂದವು. 'ನೀನು ಯಾಕೆ ಒಬ್ಬ ಕಾಮಿಡಿಯನ್ ಜೊತೆ ಲಾಂಚ್ ಆಗ್ತಾ ಇದ್ದೀಯ, ನೀನು ನೋಡೋಕೆ ಚೆನ್ನಾಗಿ ಇದೀಯ, ಯಾರಾದ್ರೂ ಒಳ್ಳೆಯ ಹೀರೋ ಜೊತೆ ಲಾಂಚ್ ಆಗೋದ್ ಅಲ್ವಾ?' ಅಂತ ಹಲವರು ಮಲ್ಲಿಕಾ ಅವರಿಗೆ ಹೇಳಿದರಂತೆ.

ಶ್ರೀದೇವಿಯನ್ನು ಬಯಸಿದ್ದರು ಈ ಮೂರು ಪುರುಷರು; ಅವರಲ್ಲೊಬ್ಬರ ಕಥೆ ಏನಾಯ್ತು?

ಆದರೆ, ತಮಗೆ ಆ ಬಗ್ಗೆ ಬೇಸರವಿಲ್ಲ, ಖುಷಿಯಿದೆ. ಒಳ್ಳೆಯ ಸಿನಿಮಾ, ಒಳ್ಳೆಯ ಬ್ಯಾನರ್, ಖ್ಯಾತ ನಟ ಹಾಗೂ ಕಲಾವಿದರ ಜೊತೆ ನಟಿಸಿದ್ದೇನೆ ಎಂಬ ಹೆಮ್ಮೆ ಇದೆ. ಸೀರಿಯಲ್ ಲೋಕದಿಂದ ಉಪಾಧ್ಯಕ್ಷ ಸಿನಿಮಾ ಮೂಲಕ ನಾನು ಸ್ಯಾಂಡಲ್‌ವುಡ್ ನಟಿಯಾದೆ. ನನಗೆ ಉಪಾಧ್ಯಕ್ಷ ಸಿನಿಮಾದ ಇಡೀ ತಂಡ ಸ್ವಾಗತ ಹಾಗೂ ಪ್ರೋತ್ಸಾಹ ನೀಡಿದೆ. ಅವರೆಲ್ಲರಿಗೂ ನಾನು ಥ್ಯಾಂಕ್ಸ್ ಹೇಳಲು ಬಯಸುತ್ತೇನೆ' ಎಂದಿದ್ದಾರೆ ನಟಿ ಮಲೈಕಾ ವಸುಪಾಲ್. ಸದ್ಯ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಟಿ ಮಲೈಕಾ ವಸುಪಾಲ್ ಅವರು, ಒಳ್ಳೆಯ ಪಾತ್ರಗಳಿಗೆ ಎದುರು ನೋಡುತ್ತಿದ್ದಾರೆ.

ಅದಕ್ಕೂ ಮೊದಲು ತೆರೆಗೆ ಬಂದಿದ್ದ 'ಅಧ್ಯಕ್ಷ' ಚಿತ್ರದಂತೆ ಈ ಉಪಾಧ್ಯಕ್ಷ ಸಿನಿಮಾ ಕಥೆ ಕೂಡ ಗೆಜ್ಜೆಪುರದಲ್ಲೇ ಮುಂದುವರೆಯುತ್ತೆ. ಮಂಡ್ಯ ಜಿಲ್ಲೆಯಲ್ಲಿರುವ ಈ ಹಳ್ಳಿಯಲ್ಲಿ ಇರುವ ಚೀ ತೂ ಸಂಘಕ್ಕೆ ನಾರಾಯಣ (ಚಿಕ್ಕಣ್ಣ) ಉಪಾಧ್ಯಕ್ಷ ಆಗಿದ್ದಾರೆ. ಅಧ್ಯಕ್ಷರಾಗುವ ಎಲ್ಲ ಅರ್ಹತೆ ಇದ್ದರೂ, ನಾರಾಯಣನಿಗೆ ಪ್ರಸ್ತುತ ಅಧ್ಯಕ್ಷರ ಮೇಲೆ ವಿಪರೀತವಾದ ಪ್ರೀತಿ. ಈ ಕಾರಣಕ್ಕೆ ಉಪಾಧ್ಯಕ್ಷನಾಗಿಯೇ ಮುಂದುವರೆಯಲು ನಿರ್ಧಾರ ಮಾಡುವ ನಾರಾಯಣನ ಬದುಕು ನಾಯಕಿ ಅಂಜಲಿ (ಮಲೈಕಾ ವಸುಪಾಲ್) ಆಗಮನದ ನಂತರ ಹೇಗೆ ಸಂಪೂರ್ಣ ಬದಲಾಗುತ್ತದೆ ಎಂಬುದು ಕಥೆ.

Crazy Star Ravichandran: ಡಾ ರಾಜ್, ವಿಷ್ಣು ರಿಜೆಕ್ಟ್ ಮಾಡಿದ್ದ ಸಿನಿಮಾ ನಾನು ಮಾಡಿದೆ. ರಿಸಲ್ಟ್ ನೋಡಿ ಏನಾಯ್ತು?

ಒಟ್ಟಿನಲ್ಲಿ, ಇಷ್ಟು ದಿನವೂ 'ಹೊಟ್ಟೆಯೊಳಗೆ ಬಚ್ಚಿಟ್ಟುಕೊಂಡಿದ್ದ ಗುಟ್ಟು' ಎಂಬಂತೆ ಸೀಕ್ರೆಟ್ ಆಗಿದ್ದ ಆ ಸಂಗತಿಯನ್ನು ಹೊರಹಾಕಿ ನಿರಾಳತೆ ಅನುಭವಿಸುತ್ತಿದ್ದಾರೆ ನಟಿ ಮಲೈಕಾ ವಸುಪಾಲ್. ಆದರೆ, ಅವರು ಒಳ್ಳೆಯ ರೀತಿಯಲ್ಲಿಯೇ ಹೇಳಿರುವ ಈ ಗುಟ್ಟು ಇದೀಗ ಹೊರಜಗತ್ತಿನಲ್ಲಿ ಹೊಸ ರೂಪ ಪಡೆದು ಸೋಷಿಯಲ್ ಮೀಡಿಯಾ ಮೂಲಕ ಹೊಸರೂಪದ ಹವಾ ಸೃಷ್ಟಿಸದಿದ್ದರೆ ಸಾಕು.. ಹಾಗಾದೋದಿಲ್ಲ ಬಿಡಿ, ಯಾಕಂದ್ರೆ, ನಟಿ ಮಲೈಕಾ ಹೇಳಿದ್ದರಲ್ಲಿ ಯಾವುದೇ ತಪ್ಪೂ ಇಲ್ಲ, ವಿವಾದ ಮಾಡುವಂತದ್ದೂ ಇಲ್ಲ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ