SN Shankar Death: ನಿನ್ನೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ 'ಉಲ್ಟಾ ಪಲ್ಟಾ' ಸಿನಿಮಾದ ನಿರ್ದೇಶಕ ಇನ್ನಿಲ್ಲ

Published : Jun 28, 2026, 11:53 AM IST
Director SN Shankar Death

ಸಾರಾಂಶ

Director SN Shankar Death: ಉಲ್ಟಾ ಪಲ್ಟಾ ಸಿನಿಮಾ ಖ್ಯಾತಿಯ ನಿರ್ದೇಶಖ ಎಸ್‌ ಎನ್‌ ಶಂಕರ್‌ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಅವರು ಇಂದು ಇನ್ನಿಲ್ಲ ಎನ್ನೋದು ಅನೇಕರಿಗೆ ಶಾಕ್‌ ನೀಡಿದೆ. 

ಉಲ್ಟಾ ಪಲ್ಟಾ ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್‌ ಎನ್‌ ಶಂಕರ್‌ ಅವರು ( Director SN Shankar Death ) ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆಯಷ್ಟೇ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಮನೆಯಲ್ಲಿ ಇಂದು ಹೃದಯಾಘಾತ ಆಗಿದೆ.

ಎಸ್‌ ಎನ್‌ ಶಂಕರ್‌ ಅವರು ಕೆಲ ತಿಂಗಳುಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು. ಈಗ ಅವರು ಕೂಡ ಇಹಲೋಕ ತ್ಯಜಿಸಿದ್ದಾರೆ. ಇದನ್ನು ನೋಡಿ ಅನೇಕರು ಬೇಸರ ಹೊರಹಾಕಿದ್ದು, ಸಂತಾಪ ಸೂಚಿಸಿದ್ದಾರೆ.

“ಬದುಕು ಯಾವತ್ತಿಗೂ ಆಕಸ್ಮಿಕವೇ… ನಿನ್ನೆ ಸಂಜೆ ಸುಮಾರು 6 ರ ಸಮಯದಲ್ಲಿ ತುಂಬಾ ಖುಷಿ ಖುಷಿಯಿಂದಲೇ 'ರಾಮಯ್ಯ' ಅವರ ಹೊಸ ಸಿನಿಮಾಗೆ ಕ್ಯಾಮರಾ ಚಾಲನೆಕೊಟ್ಟು .. ಫೋಟೋ ತೆಗೆಯಿರಿ ಲೋಕೇಶ್ ಎಂದಾ ನಲ್ಮೆಯ ಎನ್_ಎಸ್_ಶಂಕರ್ ಅವರು ಬೆಳಗ್ಗೆ ಇಲ್ಲ ಎನ್ನುವುದು .. ಜೀರ್ಣಿಸಿಕೊಳ್ಳಲಾಗದ ಸಂಗತಿ” ಎಂದು ಫೋಟೋಗ್ರಾಫರ್‌ ತಾಯಿ ಲೋಕೇಶ್‌ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

ರಮೇಶ್‌ ಅರವಿಂದ್‌, ಸರಿಗಮ ವಿಜಿ ನಟನೆಯ ಉಲ್ಟಾ ಪಲ್ಟಾ ಸಿನಿಮಾವನ್ನು ಅವರು ನಿರ್ದೇಶನ ಮಾಡಿದ್ದರು.

ಬೆಳಚಿಕ್ಕನಹಳ್ಳಿ ಶ್ರೀನಾಥ್‌ ಪೋಸ್ಟ್‌ ಹೀಗಿದೆ

ʼಅಂತೂ ತಂತ್ರಜ್ಞರೇ ಸೇರಿಕೊಂಡು ಸಿನಿಮಾ ನಿರ್ಮಾಣ ಮಾಡಿ ಗೆದ್ದಿರಲ್ಲಾ ಸರ್ʼ ಎಂದೆ. ʼಸಿನಿಮಾ ಏನೋ ಗೆದ್ದಿತಾದರೂ ಅದನ್ನೆಲ್ಲಾ ನಿಭಾಯಿಸುವ ಹೊತ್ತಿಗೆ ನನ್ನ ಆರೋಗ್ಯ ಹಾಳಾಯಿತು. ನನಗೆ ಬಿ.ಪಿ, ಡಯಾಬಿಟಿಸ್ ಅಂಟಿಕೊಂಡಿತುʼ ಎಂದಿದ್ದರು ಎನ್.ಎಸ್.ಶಂಕರ್.

ಲಂಕೇಶ್ ಪತ್ರಿಕೆಯಲ್ಲಿ ಅವರ ಸಿನಿಮಾ ಬರಹಗಳನ್ನು ಓದಿ ಮೆಚ್ಚಿಕೊಂಡಿದ್ದ ನಾನು ಮುಂದೆ ಅವರೊಂದಿಗೆ ಎರಡು ಕಿರುಚಿತ್ರಗಳಿಗೆ ಸಹನಿರ್ದೇಶಕನಾಗಿ ಕೆಲಸ ಮಾಡಿದೆ. ಅವರಿಗೆ ಸಿನಿಮಾ ಬಗ್ಗೆ ಅಪರೂಪದ ಒಳನೋಟಗಳಿದ್ದವು. ಕಮರ್ಷಿಯಲ್ ಸಿನಿಮಾದ ಬಗ್ಗೆ ಅತ್ಯಂತ ಗಂಭೀರ ವಿಶ್ಲೇಷಣೆ ಮಾಡುತ್ತಿದ್ದರು. ಆದರೆ, ಸಿನಿಮಾ ನಿರ್ದೇಶಕನಾಗಿ ದೊಡ್ಡ ಯಶಸ್ಸು ಕಾಣಲು ನಾನಾ ಕಾರಣಗಳಿಂದ ಅವರಿಗೆ ಸಾಧ್ಯವಾಗಲಿಲ್ಲ. ಸಾಲದು ಎಂಬಂತೆ ಅದರಿಂದ ಸಾಲಗಾರರಾಗಿ ಜೀವನ ಪರ್ಯಂತ ಕಷ್ಟ ಅನುಭವಿಸಿದರು.

ಉತ್ತಮ ಪತ್ರಕರ್ತರಾಗಿದ್ದ ಶಂಕರ್ ಅವರು, ಬರವಣಿಗೆಯ ಜತೆಗೆ ಪುಸ್ತಕದ ವಿನ್ಯಾಸ, ಮುಖಪುಟ ವಿನ್ಯಾಸವನ್ನೂ ಮಾಡುತ್ತಿದ್ದರು. ವ್ಯಂಗ್ಯಚಿತ್ರ ಬರೆಯುತ್ತಿದ್ದರು. ಕಾಲೇಜಿನಲ್ಲಿ ಸಂಸ್ಕೃತ ಅಧ್ಯಯನ ಮಾಡಿದ್ದ ಶಂಕರ್ ಅವರು ಕನ್ನಡದ ಉತ್ತಮ ಗದ್ಯ ಬರಹಗಾರರಾಗಿದ್ದರು. ಕಥೆ ಬರೆದರು, ಚಳವಳಿಗಳ ಬಗ್ಗೆ ಬರೆದರು. ಸಮಾಜ ವಿಮರ್ಶೆಯ ಲೇಖನಗಳನ್ನು ಬರೆದರು.

ತೀವ್ರ ರಾಜಕೀಯ ನಿಲುವುಗಳನ್ನು ಹೊಂದಿದ್ದರೂ ಸ್ನೇಹಜೀವಿಯಾಗಿದ್ದರು. ಅವರಿಗೆ ಅಪಾರ ಹಾಸ್ಯಪ್ರಜ್ಞೆ ಇತ್ತು. ತಮ್ಮ ಸುತ್ತಲಿನವರ ಬಗ್ಗೆ ಚಟಾಕಿ ಹಾರಿಸುತ್ತಿದ್ದ ಅವರು ತಮ್ಮನ್ನೂ ಗೇಲಿ ಮಾಡಿಕೊಳ್ಳಬಲ್ಲವರಾಗಿದ್ದರು. ಅವರ ಹೆಸರಿನೊಂದಿಗಿರುವ ಸೊಂಡೂರು ಬಗ್ಗೆ ಒಮ್ಮೆ ಕೇಳಿದರೆ, ನಮ್ಮದು ಸೊಂಡೂರಿನ ರಾಜಮನೆತನ ಎಂದು ನಮ್ಮ ಮನೆತನದವರು ಹೇಳುತ್ತಾರೆ. ಅದ್ಯಾವ ರಾಜಮನೆತನವೋ ಎಂದು ನಕ್ಕಿದ್ದರು.

ಅವರ ನಗುಮುಖವನ್ನು ಮರೆಯಲಾಗದು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಿವರಾಜ್​ ಕುಮಾರ್​ ಜೊತೆ ಮದುವೆ ಆಸೆ: ಫೇಕ್​ ನ್ಯೂಸ್​ ಹಾಕಿದವನ ಚಳಿ ಬಿಡಿಸಿದ ನಟಿ ಸುಧಾರಾಣಿ
Sharmila Mandre Engagement: ಹೀರೋಯಿನ್‌ ಆಗಿ 20 ವರ್ಷ; ರಿಯಲ್‌ ಲೈಫ್‌ ಹೀರೋ ಹುಡ್ಕೊಂಡ ಶರ್ಮಿಳಾ ಮಾಂಡ್ರೆ