Ba Ma Harish Son Death: ನಿಶ್ಚಿತಾರ್ಥ ಮಾಡ್ಕೊಂಡಿದ್ದ ಬಾ ಮಾ ಹರೀಶ್‌ ಪುತ್ರ 28ರ ಉಲ್ಲಾಸ್‌ ಗೌಡ ನಿಧನ

Published : Jun 27, 2026, 02:28 PM IST
producer ba ma harish son ullas gowda

ಸಾರಾಂಶ

Producer Ba Ma Harish Son Ullas Gowda Deat: ‘ಮೆಜೆಸ್ಟಿಕ್’ , ‘ಮಿ ಬಕ್ರಾ’, ‘ಮಾಗಡಿ’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಬಾ ಮಾ ಹರೀಶ್‌ ಅವರ ಪುತ್ರ ಉಲ್ಲಾಸ್‌ ಗೌಡ ಅವರು ನಿಧನರಾಗಿದ್ದಾರೆ. ಚಿತ್ರರಂಗದಲ್ಲಿಯೂ ಆಕ್ಟಿವ್‌ ಆಗಿದ್ದ ಉಲ್ಲಾಸ್‌ ಗೌಡ ಅವರಿಗೆ 28 ವರ್ಷ ವಯಸ್ಸಾಗಿತ್ತು. ನಿಶ್ಚಿತಾರ್ಥ ಮಾಡಿಕೊಂಡಿದ್ದ ಉಲ್ಲಾಸ್‌ ಈಗ ಇಹಲೋಕ ತ್ಯಜಿಸಿದ್ದಾರೆ. 

Producer Ba Ma Harish Son Ullas Gowda Death: ಮೆಜೆಸ್ಟಿಕ್‌ ಸೇರಿದಂತೆ ಕೆಲ ಕನ್ನಡ ಸಿನಿಮಾಗಳನ್ನು ನಿರ್ಮಿಸಿದ್ದ ಬಾ ಮಾ ಹರೀಶ್‌ ಅವರ ಪುತ್ರ ಉಲ್ಲಾಸ್‌ ಗೌಡ ಅವರು ನಿಧನರಾಗಿದ್ದಾರೆ. ಇವರಿಗೆ 28 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ನಟ ದರ್ಶನ್ ತೂಗ್ ದೀಪ ನಟನೆಯ ‘ಮೆಜೆಸ್ಟಿಕ್’ , ‘ಮಿ ಬಕ್ರಾ’, ‘ಮಾಗಡಿ’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಹೃದಯಾಘಾತದಿಂದ ನಿಧನ

ನಿರ್ಮಾಪಕ ಬಾ ಮಾ ಹರೀಶ್ ಸರ್ ಮಗ ಉಲ್ಲಾಸ್ ನಿಧನರಾಗಿದ್ದಾರೆ. ಇವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಮೊಗ್ಗದ ಕೊಡಚಾದ್ರಿಗೆ ಟ್ರೆಕ್ಕಿಂಗ್‌ ಹೋಗಿದ್ದರು. ಆಗ ಅವರು ತೀರಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ನಿನ್ನೆ ಚಾರಣಕ್ಕೆಂದು ಶಿವಮೊಗ್ಗದ ಕೊಡಚಾದ್ರಿ ಬೆಟ್ಟಕ್ಕೆ ಹೋಗಿದ್ದರು. ಇಂದು ಬೆಳಗ್ಗೆ ಬೆಟ್ಟ ಹತ್ತುವಾಗ ಹೃದಯಾಘಾತವಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ.

ನಿಶ್ಚಿತಾರ್ಥ ಆಗಿತ್ತು

ಅಂದಹಾಗೆ ಉಲ್ಲಾಸ್‌ ಗೌಡ ಅವರಿಗೆ ಕೆಲ ತಿಂಗಳುಗಳ ಹಿಂದೆ ನಿಶ್ಚಿತಾರ್ಥ ಆಗಿದ್ದು, ಮುಂದಿನ ಡಿಸೆಂಬರ್‌ನಲ್ಲಿ ಮದುವೆ ಆಗಬೇಕಿತ್ತು. ಈ ಅದ್ದೂರಿ ನಿಶ್ಚಿತಾರ್ಥಕ್ಕೆ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಅಂದಹಾಗೆ ಎರಡು ವರ್ಷಗಳ ಹಿಂದೆ ಹರೀಶ್‌ ಅವರು ಮಗಳ ಮದುವೆ ಮಾಡಿದ್ದರು. ಆಗ ಕನ್ನಡ ಚಿತ್ರರಂಗದ ಗಣ್ಯರು ಭಾಗಿ ಆಗಿದ್ದರು.

ಉಲ್ಲಾಸ್‌ ಗೌಡ ಕೆಲಸ ಏನಾಗಿತ್ತು?

ಉಲ್ಲಾಸ್‌ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ಉಲ್ಲಾಸ್‌ ಅವರು ಬಾ ಮ ಹರೀಶ್‌ ಅವರ ಪ್ರೊಡಕ್ಷನ್‌, ಬ್ಯುಸಿನೆಸ್‌ ನೋಡಿಕೊಳ್ಳುತ್ತಿದ್ದರು, ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಅನ್ನೋ ಮಕ್ಕಳ

ರಂಘಭೂಮಿ ಶಾಲೆ ನಡೆಸುತ್ತಿದ್ದರು. ಇಷ್ಟು ಚಿಕ್ಕ ವಯಸ್ಸಿಗೆ ಈ ರೀತಿ ಆಗಿರೋದಿಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Deepika Padukone-Indrajit Lankesh: 'ಐಶ್ವರ್ಯ' ಚಿತ್ರಕ್ಕೆ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ? ರಹಸ್ಯ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!
ನಟಿ ಕೃಷಿ ತಾಪಂಡ ಬೆಡ್​ರೂಮಿನಲ್ಲಿ ಗೆಳೆಯನ ಡೆಡ್​​ಬಾಡಿ! 7 ತಿಂಗಳಲ್ಲಿ ಏನೆಲ್ಲಾ ನಡೆದುಬಿಡ್ತು ಅವಳ ಬಾಳಲ್ಲಿ!