ತೋತಾಪುರಿ ಮಗು ಹುಟ್ಟುವ ದಿನದ ಬಗ್ಗೆ ರಿವೀಲ್ ಮಾಡಿದ ನಟ ಜಗ್ಗೇಶ್. ನಿರ್ಮಾಪಕರು ಪ್ರಸವ ವೇದನೆಗೆ ಒದ್ದಾಡುತ್ತಿದ್ದಾರಂತೆ.....!
ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ (Jaggesh), ಅದಿತಿ ಪ್ರಭುದೇವ (Aditi Prabhudeva) ಮತ್ತು ಸುಮನ್ ರಂಗನಾಥ್ (Suman Ranganath) ನಟಿಸಿರುವ ತೋತಾಪುರಿ (Totapuri) ಸಿನಿಮಾದ ಬಗ್ಗೆ ಹಾಸ್ಯ ಬರಹದ ಮೂಲಕ ಜಗ್ಗೇಶ್ ಮಾಹಿತಿ ನೀಡಿದ್ದಾರೆ. ತೋತಾಪುರಿ ಎನ್ನುವ ಗಂಡು ಮಗು ಹುಟ್ಟುವ ಸಮಯ ಹತ್ತಿರ ಬಂದಿದೆ ಎನ್ನಲಾಗಿದೆ...
'ತೋತಾಪುರಿ ಮಗುವಿನ ಪ್ರಸವದ ದಿನ ಸಮೀಪಿಸಿದೆ. ಗಾಂಧಿನಗರ (Gandhi Nagar) ಡಾ. ತೇಟ್ರಮ್ಮ ಪ್ರಸವ ದಿನ ಹತ್ತಿರ ಬಂದಿದೆ. ಕೊರೋನಾ ವೈರಸ್ ಕಾಟಕ್ಕೆ ಬೆಡ್ ಇಲ್ಲ. ಸ್ವಲ್ಪ ತಾಳ್ಮೆಯಿಂದ ಇರಿ, ಎಂದು ಮಗುವಿನ ತಾಯಿ ಸುರೇಶ್ ಅಮ್ಮನಿಗೆ ಸಮಾಧಾನ ಹೇಳುತ್ತಿದ್ದಾರೆ. ಆದರೆ ತೋತಾಪುರಿ ಎಂಬ ಮಗು ಹೊಟ್ಟೆಯಲ್ಲಿ ಊರಗಲ ಬೆಳದು, ತಾಯಿ ಬಡಕಲು ಡ್ರಮ್ ಆಗಿದೆ. ಹುಟ್ಟುವ ಮಗು ತೋತಾಪುರಿ ಗಂಡಾಗಲಿ ಎಂದು ಆಸ್ಪತ್ರೆಯ ಸಿಬ್ಬಂದಿ ಕರ್ನಾಟಕದ ಜನರು ಹರಸುತ್ತಿದ್ದಾರೆ. ಮಗುವಿನ ತಂದೆ ವಿಜಯ್ ಪ್ರಸಾದ್ ಮಾತ್ರ ಆಸ್ಪತ್ರೆಯ ಜಗಲಿ ಮೇಲೆ ಹೊರಗೆ ಸ್ನೇಹಿತರೊಂದಿಗೆ ನರಸಮ್ಮನ ಜೊತೆ ಏನ್ ನರಸಮ್ಮ ಸಮಾಚಾರ? ಯಾವ ಊರು? ಸಂಬಳ ಎಷ್ಟು? ಮದುವೆ ಅಗಿದೆಯಾ? ಮತ್ತೆ ವಿಷಯ ಎಂದು ಆಕೆ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಲೇಬರ್ ವಾರ್ಡ್ ಒಳಗಿಂದ ತಾಯಿ ರೀ ಬನ್ರೀ, ಆಗ್ತಾ ಇಲ್ಲಾ ಎಂದು ಚೀರುತ್ತಿದ್ದಾಳೆ. ತೋತಾಪುರಿ ಬೇಗ ಜನಿಸಲಿ ಹರಸಿ ಬಂದುಗಳೆ. ನಿಮ್ಮನ್ನು ಖುಷಿ ಪಡಿಸಲು,' ಎಂದ ಜಗ್ಗೇಶ್ ಬರೆದುಕೊಂಡಿದ್ದಾರೆ.
'ನೀರ್‌ದೋಸೆ' (Neer Dose) ಚಿತ್ರದ ಮೂಲಕ ಯಶಸ್ಸು ಕಂಡ ನಿರ್ದೇಶಕ ವಿಜಯ್ ಪ್ರಸಾದ್ (Vijay Prasad) ಹಾಗೂ ನವರಸ ನಾಯಕ ಜಗ್ಗೇಶ್ (Jaggesh) ಅಭಿನಯದ 'ತೋತಾಪುರಿ' ಚಿತ್ರದಲ್ಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆ ಪಾತ್ರ ಇದೀಗ ರಿವೀಲ್ ಆಗಿದೆ. ಹೌದು! ಧನಂಜಯ್ 'ತೋತಾಪುರಿ' ಚಿತ್ರದಲ್ಲಿ 'ನಾರಾಯಣ್ ಪಿಳ್ಳೈ' ಆಗಿ ಕಾಣಿಸಿಕೊಳ್ಳುತ್ತಿದ್ದು, ಮೋಡ ಕವಿದ ವಾತಾವರಣದಲ್ಲೇ 'ಮೊಡವೆ' ಬರಬೇಕೇ..? ತತ್ತೆರಿಕೆ...! ಎಂಬ ಬರಹ ಇರುವ ಪೋಸ್ಟರ್ ಅನ್ನು ಫೇಸ್‌ಬುಕ್ ಖಾತೆಯಲ್ಲಿ ಧನಂಜಯ್ ಶೇರ್ ಮಾಡಿಕೊಂಡಿದ್ದಾರೆ. 'ತೋತಾಪುರಿ' ಚಿತ್ರದಲ್ಲಿ ಧನಂಜಯ್ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ ಎನ್ನಲಾಗಿದೆ.
Dhananjay: ಮೋಡ ಕವಿದ ವಾತಾವರಣದಲ್ಲೇ 'ತೋತಾಪುರಿ' ತಿಂದು ಮೊಡವೆ ಬಂತು!ಇನ್ನು ಟೈಟಲ್ (Title) ಮೂಲಕವೇ ಕುತೂಹಲ ಹುಟ್ಟಿಸಿರುವ ಈ ಚಿತ್ರ, ಎರಡು ಪಾರ್ಟ್‌ಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಜಗ್ಗೇಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ನಾವು ನಿಮ್ಮ ಮುಂದೆ ಬರ್ತಿದ್ದೇವೆ, ಎಂದು ಚಿತ್ರದ ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಹಂಚಿಕೊಂಡಿದ್ದರು.
'ದೇವ್ರಾಣೆಗೂ ನಮ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ನಮ್ದು ಬರೀ ಸಿನಿಮಾ,' ಎಂದು ಹೇಳಿರುವ 'ತೋತಾಪುರಿ' ಚಿತ್ರ ತಂಡ, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿಯೂ ಟೈಟಲ್ ರಿವೀಲ್ ಮಾಡಿರುವ ಪೋಸ್ಟರನ್ನು ಚಿತ್ರದ ನಾಯಕ ಜಗ್ಗೇಶ್ ಅವರೇ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿದ್ದರು.
ತೋತಾಪುರಿ ಸಿನಿಮಾ ಪ್ಯಾನ್ ಇಂಡಿಯಾವೋ, ಅಲ್ಲವೋ? ನೆಟ್ಟಿಗರು ಕೇಳ್ತಿದ್ದಾರೆಸಾಮಾನ್ಯವಾಗಿ ಮೊದಲ ಭಾಗ ಹಿಟ್ ಆದ ನಂತರ ಮತ್ತೊಂದು ಭಾಗ ಸೆಟ್ಟೇರುತ್ತದೆ. ಅಲ್ಲದೇ ಎರಡು ಭಾಗಗಳನ್ನೂ ಪ್ರತ್ಯೇಕವಾಗಿಯೇ ಚಿತ್ರೀಕರಣ ಮಾಡುತ್ತಾರೆ. ಆದರೆ ತೋತಾಪುರಿ ಚಿತ್ರದ ಎರಡೂ ಭಾಗಗಳ ಕತೆಯನ್ನು ಬಿಡುಗಡೆಗೂ ಮೊದಲೇ ಚಿತ್ರೀಕರಿಸುತ್ತಿದ್ದೇವೆ. ಒಂದು ಭಾಗ ತೆರೆ ಮೇಲೆ ಮೂಡುವ ಮುನ್ನವೇ ಇನ್ನೊಂದು ಭಾಗದ ಚಿತ್ರೀಕರಣವನ್ನೂ ಮುಗಿಸುತ್ತಿರುವುದು, ಕನ್ನಡದಿಂದಲೇ ಮೊದಲು. ಯಾಕೆಂದರೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೆಂಗಾಲಿ ಸೇರಿದಂತೆ ಭಾರತದ ಯಾವ ಭಾಷೆಯಲ್ಲೂ ಈ ಪ್ರಯೋಗ ಆಗಿಲ್ಲ. ಆ ಬಗ್ಗೆ ಎಲ್ಲ ರೀತಿಯ ಮಾಹಿತಿಯನ್ನು ಸಂಗ್ರಹಿಸಿದ ನಂತರವೇ ನಮ್ಮ ಚಿತ್ರವೇ ಹೊಸ ದಾಖಲೆ ಮಾಡುತ್ತಿದೆ, ಎಂಬುದನ್ನು ಅಧಿಕೃತವಾಗಿ ಹೇಳಿಕೊಳ್ಳುತ್ತಿದ್ದೇವೆ,’ ಎಂದು ನಿರ್ಮಾಪಕ ಸುರೇಶ್ ಹೇಳುತ್ತಾರೆ.