ಪ್ರಜ್ವಲ್ ರೇವಣ್ಣ ಸೆಲ್‌ 1 ಕಿಮೀ. ದೂರದಲ್ಲಿದೆ, ಬೇಕರಿ ಐಟಂ ಸಿಗುತ್ತೆ; ದರ್ಶನ್‌ VIP ಸೆಲ್‌ ಬಗ್ಗೆ ಸತ್ಯ ಬಿಚ್ಚಿಟ್ಟ ವ್ಯಕ್ತಿ

Published : Jul 24, 2024, 09:30 AM IST
ಪ್ರಜ್ವಲ್ ರೇವಣ್ಣ ಸೆಲ್‌ 1 ಕಿಮೀ. ದೂರದಲ್ಲಿದೆ, ಬೇಕರಿ ಐಟಂ ಸಿಗುತ್ತೆ; ದರ್ಶನ್‌ VIP ಸೆಲ್‌ ಬಗ್ಗೆ ಸತ್ಯ ಬಿಚ್ಚಿಟ್ಟ ವ್ಯಕ್ತಿ

ಸಾರಾಂಶ

 ಜೈಲಿನಲ್ಲಿ ದರ್ಶನ್‌ ಜೊತೆ ಧ್ಯಾನ ಮಾಡಿದ ಸಿದ್ಧಾರೂಡ. ಜೈಲಿನಲ್ಲಿ ಏನೆಲ್ಲಾ ಕೊಟ್ಟಿದ್ದಾರೆ ಗೊತ್ತಾ.....

ಸುಮಾರು 22 ವರ್ಷಗಳ ಕಾಲ ಜೈಲಿನಲ್ಲಿದ್ದ ತುರುವನೂರು ಸಿದ್ಧಾರೂಢರವರು ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರದ ಇತ್ತೀಚಿಗೆ ಬಿಡುಗಡೆಯಾಗಿದ್ದಾರೆ. ಈ ಸಮಯದಲ್ಲಿ ನಟ ದರ್ಶನ್‌ರನ್ನು ಜೈಲಿನಲ್ಲಿ ಭೇಟಿ ಮಾಡಿರುವ ಪ್ರಸಂಗವನ್ನು ವಿವರಿಸಿದ್ದಾರೆ.

'ದರ್ಶನ್ ಇರುವುದು ವಿಐಪಿ ಸೆಲ್‌ನಲ್ಲಿ. ಬೇರೆಯವರಿಗಿಂತ ಅವರ ಚೆನ್ನಾಗಿ ಚೆನ್ನಾಗಿರುತ್ತದೆ. ಅಲ್ಲಿ  ಒಂದು ಹಾಸಿಗೆ, ಒಂದೆರಡು ಚೇರ್, ಒಂದು ಟಿವಿ, ಒಂದು ನೀರಿನ ಕ್ಯಾನ್ ಮತ್ತು ಸೊಳ್ಳೆ ಪರದೆ ಇರುತ್ತದೆ. ಅವರಿಗೆ ಬೆಡ್‌ಶೀಟ್‌ ಕೂಡ ಕೊಟ್ಟಿರುತ್ತಾರೆ. ಸೆಲ್‌ ಮುಂದೆ ಸಾಕಷ್ಟು ಜಾಗ ಇರುವ ಕಾರಣ ಅಲ್ಲೇ ಓಡಾಡಬಹುದು ಆದರೆ ಅವರೊಟ್ಟಿಗೆ ಯಾರೂ ಇರುವುದಿಲ್ಲ. ಯಾರನ್ನಾದರೂ ಭೇಟಿ ಮಾಡಲು ನಡೆದುಕೊಂಡು ಬರುವಾಗ ಅಲ್ಲಿದ್ದ ಕೈದಿಗಳು ಸೆಲ್‌ನಿಂದ ನಿಂತು ನೋಡುತ್ತಾರೆ. ಪ್ರಜ್ವಲ್‌ ರೇವಣ್ಣ ದರ್ಶನ್‌ ಅವರನ್ನು ಭೇಟಿ ಮಾಡಲು ಸಾಧ್ಯವೇ ಇಲ್ಲ ಏಕೆಂದರೆ ಇಬ್ಬರ ರೂಮಿಗೆ ಸುಮಾರು 1 ಕಿಮೀ. ದೂರವಿರುತ್ತದೆ. ಎಲ್ಲರಿಗೂ ಸಿಗುವಂತೆ ಅವರಿಗೂ ಊಟ ಸಿಗುತ್ತದೆ ಆದರೆ ಅವರಿಗೆ ರೂಮಿಗೆ ಊಟ ಬರುತ್ತದೆ. ನಾನು ನೋಡಿದಾಗ ದರ್ಶನ್ ವಿಗ್ ಧರಿಸಿದ್ದರು. 

ಮದ್ವೆ ಆದ್ಮೇಲೆ ಮಕ್ಳು ಬೇಡ ಎಂದು ಫ್ಯಾಮಿಲಿ ಪ್ಲ್ಯಾನಿಂಗ್ ಮಾಡುವವರಿಗೆ ನಟ ಭುವನ್ ಪೊಣ್ಣನ್ನ ಕೊಟ್ಟ ಸಲಹೆ ವೈರಲ್!

ಎಲ್ಲರಿಗೂ ದರ್ಶನ್‌ರನ್ನು ಭೇಟಿ ಮಾಡಲು ಅವಕಾಶ ಸಿಗುವುದು ಕಡಿಮೆ. ನಾನು ದರ್ಶನ್‌ ಅವರ ಅಭಿಮಾನಿ ಹೊರಗಡೆ ಭೇಟಿ ಮಾಡುವುದು ತುಂಬಾನೇ ಕಷ್ಟ ಅವಕಾಶ ಮಾಡಿ ಕೊಡಿ ಎಂದು ಅಧಿಕಾರಿಗಳನ್ನು ಮನವಿ ಮಾಡಿದ್ದಕ್ಕೆ ಅಲ್ಲದೆ ನಾನು ಸನ್ನಡತೆ ಪಟ್ಟಿಯಲ್ಲಿ ಇದ್ದಕಾರಣ  ಅನುಮತಿ ಕೊಟ್ಟರು. ಭೇಟಿ ಮಾಡಿ 10 ನಿಮಿಷ ಧ್ಯಾನ ಮಾಡಿಸಿದ್ದೆ. ನಿನ್ನ ಅಭಿಮಾನಿ ಬಂದಿದ್ದಾರೆ ನೋಡಿ ಎಂದು ದರ್ಶನ್‌ಗೆ ಅಧಿಕಾರಿಗಳು ಹೇಳಿದಾಗ ಕಳುಹಿಸಿ ಎಂದು ಹೇಳುತ್ತಾರೆ ಆಗ ಹ್ಯಾಂಡ್‌ಶೇಕ್ ಮಾಡಿ ತಬ್ಬಿಕೊಳ್ಳುತ್ತಾರೆ ಆಗ ನನಗೆ ತುಂಬಾ ಖುಷಿಯಾಗುತ್ತದೆ. ರೂಮ್‌ ಒಳಗೆ ಕರೆದುಕೊಂಡು ಹೋಗಿ ಅವರಿಗೆ ಬಿಸ್ಕೆಟ್ ಕೊಡ್ತಾರೆ ಆಮೇಲೆ ತುಂಬಾ ಕ್ಲೋಸ್ ಆಗಿ ಮಾತನಾಡಿ ನನ್ನ ಕೇಸ್‌ ಬಗ್ಗೆ ವಿಚಾರಿಸುತ್ತಾರೆ. ಸರ್ 10 ನಿಮಿಷ ಧ್ಯಾನ ಮಾಡೋಣ ಎಂದು ಕೇಳಿಕೊಂಡಾಗ ಮಾಡುತ್ತಾರೆ. ನನ್ನೊಟ್ಟಿಗೆ ಆತ್ಮೀಯತಿಯಿಂದ ಮಾತನಾಡಿದ್ದರು  ಅವರ ದೇಹ ತುಂಬಾ ಇಳಿದಿದೆ.

ಗರ್ಭಿಣಿ ಪತ್ನಿ ಮೇಲೆ 'ನೇತ್ರಾವತಿ' ನಟನಿಂದ ಹಲ್ಲೆ; ಮತ್ತೊಬ್ಬರ ಜೊತೆ ಸೈಲೆಂಟ್‌ ಆಗಿ ನಿಶ್ಚಿತಾರ್ಥ?

ಬೇರೆ ಕೈದಿಗಳ ಜೊತೆ ಜಗಳ ಮಾಡಲು ಅವಕಾಶ ಸಿಗುವುದಿಲ್ಲ ಆದರೆ ಫ್ಯಾಮಿಲಿಯನ್ನು ಭೇಟಿ ಮಾಡಲು ದಿನ ಅವಕಾಶ ಸಿಗುತ್ತದೆ. ಆ ಸ್ಥಿತಿಯಲ್ಲಿ ದರ್ಶನ್‌ರನ್ನು ನೋಡಿ ಬೇಸರ ಆಯ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?